



















ದಿನಾಂಕ 10.8 2025 ಬೆಂಗಳೂರು ನಗರದ ಅಭಿವೃದ್ಧಿ ಪಥದಲ್ಲಿ ಇತಿಹಾಸ ನಿರ್ಮಿಸುವಂತ ಯೋಜನೆ ‘ನಮ್ಮ ಮೆಟ್ರೋ ಹಳದಿ ಮಾರ್ಗ’ ಇಂದು ಜನತೆಗೆ ಲಭ್ಯವಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರ ದೃಢ ನಾಯಕತ್ವ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ಅಭಿವೃದ್ಧಿ ದೃಷ್ಟಿಯಿಂದ ಈ ಯೋಜನೆ ಪೂರ್ಣಗೊಂಡಿದೆ. ಒಟ್ಟು 16 ನಿಲ್ದಾಣಗಳನ್ನು ಹೊಂದಿರುವ ಈ ಮಾರ್ಗವು ದಕ್ಷಿಣ ಬೆಂಗಳೂರು ಸಂಚಾರಕ್ಕೆ ವೇಗ ಮತ್ತು ಸುಲಭತೆ ನೀಡಲಿದೆ.
ಈ ಮೆಟ್ರೋ ಮಾರ್ಗವು ನಗರ ಸಂಚಾರದಲ್ಲಿ ಮಹತ್ತರ ಬದಲಾವಣೆಯನ್ನು ತರಲಿದೆ. ಬಿಜೆಪಿ ಸರ್ಕಾರದ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಧ್ಯೇಯಕ್ಕೆ ಅನುಗುಣವಾಗಿ, ಇದು ನಗರ ಅಭಿವೃದ್ಧಿಯ ಮತ್ತೊಂದು ದೊಡ್ಡ ಹೆಜ್ಜೆಯಾಗಿದೆ.
ಈ ಭವ್ಯ ಉದ್ಘಾಟನೆಯ ಸಂಭ್ರಮದಲ್ಲಿ ನಮ್ಮ ನೆಚ್ಚಿನ ಪ್ರಧಾನಿ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರಿಗೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರು ಹಾಗೂ ಬಿಜೆಪಿ ಮುಖಂಡರುಗಳು ಸ್ವಾಗತ ಕೋರಲಾಯಿತು. ಈ ಸಂದರ್ಭದಲ್ಲಿ ಯಲಹಂಕ ಶಾಸಕರು ಹಾಗು ಬಿಜೆಪಿ ನಾಯಕರು ಶ್ರೀ ಎಸ್ ಆರ್ ವಿಶ್ವನಾಥ್ ರವರು ಮತ್ತು ಯಲಹಂಕ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಮುಖಂಡರುಗಳು ಕಾರ್ಯಕರ್ತರು ಇನ್ನು ಅನೇಕ ಸಹ ಪಾಲ್ಗೊಂಡಿದ್ದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ
ಸಂಪರ್ಕಿಸಿ
R Hanumanthau
Kogilu layout Yelahanka
9845085793
7349337989