ಪರಭಾಷೆಯನ್ನು ಕಲಿಯುವುದು ತಪ್ಪಲ್ಲ; ಆದರೆ ನಮ್ಮ ತಾಯಿನುಡಿ ಕನ್ನಡವನ್ನು ಮರೆಯದೇ ಉಳಿಸಿ ಬೆಳೆಸುವ ಪಣ ತೊಡಬೇಕೆಂದು ಕೆನ್‌ ಶ್ರೀ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ.ಪುಟ್ಟರಾಜುರವರು ಕರೆ ಕೊಟ್ಟರು.
ಅವರು ನಗರದ ಥಣಿಸಂದ್ರದ ಮುಖ್ಯ ರಸ್ತೆಯ ಚೊಕ್ಕನಹಳ್ಳಿಯಲ್ಲಿರುವ ಸಿಂಧಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ೬೮ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಾ ವಿಶಾಲ ಮೈಸೂರು ಕರ್ನಾಟಕ ಎಂದು ಮರುನಾಮಕರಣಗೊಂಡು ೫೦ ವರ್ಷ ತುಂಬಿದ ಶುಭ ಸಂದರ್ಭದಲ್ಲಿ ಕನ್ನಡಿಗರಾದ ನಾವು ಆತ್ಮಾವಲೋಕನ ಮಾಡಿಕೊಳ್ಳುವುದು ಅವಶ್ಯ ಎಂದು ಅವರು ತಿಳಿಸಿದರು. ಕನ್ನಡಿಗರ ಔದಾರ್ಯವೇ ನಮಗೆ ಕುತ್ತು ತರುವ ಆತಂಕವಿದೆ; ಹಾಗಾಗಿ ಮುಖ್ಯವಾಗಿ ಯುವ ಮಿತ್ರರು ಕನ್ನಡಾಭಿಮಾನವನ್ನು ಮರೆಯಬೇಕು. ನಾಡಿನಲ್ಲಿ ನೆಲೆಸಿದ ಬೇರೆ ಭಾ಼ಷಿಗರಿಗೆ ಪ್ರೀತಿಯಿಂದ ಕನ್ನಡ ಕಲಿಸುವ ಮೂಲಕ ಕನ್ನಡದ ಕಂಪನ್ನು ಪಸರಿಸುವ ಕೆಲಸವಾಗಬೇಕೆಂದು ಅವರು ಕಿವಿಮಾತು ಹೇಳಿದರು. ಕನ್ನಡದ ಸಾಹಿತ್ಯ, ಇತಿಹಾಸ, ಸಂಸ್ಕೃತಿ, ಕಲೆ, ವಾಸ್ತುಶಿಲ್ಪಗಳ ಮಹತ್ವವನ್ನು ಬಣ್ಣಿಸುತ್ತಾ ನಮ್ಮ ಭವ್ಯಪರಂಪರೆ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯ ಪ್ರವೃತ್ತರಾಗಬೇಕೆಂದು ಅವರು ಎಚ್ಚರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಪ್ರೊ.ಪಲ್ಲವಿಯವರು ಕನ್ನಡವನ್ನು ಬಳಸುವುದು ಕೀಳು ಎಂಬ ಭಾವನೆ ನಮ್ಮಲ್ಲಿ ಬೇರೂರಿದೆ ಎಂದು ವಿಷಾದಿಸಿದರು. ಕನ್ನಡ ನಮ್ಮ ಮಾತೃ ಭಾಷೆ, ಹೃದಯದ ಭಾಷೆ, ಸಾಧ್ಯವಾದಷ್ಟು ಕನ್ನಡದಲ್ಲಿಯೇ ವ್ಯವಹಾರ ಮಾಡಲು ಪ್ರಯತ್ನಿಸಬೇಕು; ಕನ್ನಡ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಭಾಷಾ ಪ್ರೇಮ ಮೆರೆಯಬೇಕೆಂದು ಅವರು ತಿಳಿಸಿದರು.
ಕಾಲೇಜಿನ ಉಪಪ್ರಾಂಶುಪಾಲೆ ಪ್ರೊ.ಕಾಂಚನ ಅವರು ಅನ್ಯ ಭಾಷೆಯ ಮಕ್ಕಳಿಗೆ ಭಾಷಾ ಆಟ ಆಡಿಸುವ ಮೂಲಕ ಕನ್ನಡ ಕಲಿಸುವ ಕಿರು ಪ್ರಯತ್ನ ಮಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಅನಂತರವರು ಅತಿಥಿಗಳನ್ನು ಸ್ವಾಗತಿಸಿದರು. ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಆರುಷ್‌ ಹಾಗೂ ಬೃಂದ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಸಮಾರಂಭದ ಕೊನೆಯಲ್ಲಿ ಸರ್ಕಾರವು ಕರ್ನಾಟಕ ಸಂಭ್ರಮ ೫೦ “ಹೆಸರಾಗಲಿ ಕರ್ನಾಟಕ ಉಸಿರಾಗಲಿ ಕನ್ನಡ” ಅಭಿಯಾನದ ಅಂಗವಾಗಿ ನಿಗದಿಪಡಿಸಿದ ಕನ್ನಡದ ಹೆಸರಾಂತ ಕವಿಗಳ ೫ ಗೀತೆಗಳನ್ನು ಮಕ್ಕಳಿಂದ ಹಾಡಿಸಲಾಯಿತು.

One thought on “ಪಬ್ಲಿಕ್ ಪವರ್. ಯಲಹಂಕ. ಹೆಗಡೆ ನಗರ ರಸ್ತೆ. ಸಿಂಧಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ<br>”
  1. Thank you very much Hanumanthu R Sir for the coverage. We had organized a splendid Rajyotsava Celebration today. Your dedication to showcasing the vibrant culture and traditions of our state is truly commendable.
    Thank you with Regards
    Prof. Pallavi

Leave a Reply

Your email address will not be published. Required fields are marked *