Month: April 2025

ಮಹಿಳಾ ದಿನಾಚರಣೆಯ ಹಾಗೂ ಗ್ಯಾರಂಟಿ ಯೋಜನೆಗಳ ಜನಸ್ಪಂದನ ಕಾರ್ಯಕ್ರಮ

ಮಹಿಳಾ ದಿನಾಚರಣೆಯ ಹಾಗೂ ಗ್ಯಾರಂಟಿ ಯೋಜನೆಗಳ ಜನಸ್ಪಂದನ ಕಾರ್ಯಕ್ರಮ ರಾಜರಾಜೇಶ್ವರಿ ನಗರ.   ದಿನಾಂಕ:-13-04-2025 ರಂದು ಶ್ರೀಮತಿ ಪುಷ್ಪ.ಆರ್ ರವರು ರಾಜರಾಜೇಶ್ವರಿ ಮಹಿಳಾ ಸಂಘದ ಅಧ್ಯಕ್ಷರು ಹಾಗೂ ಗ್ಯಾರಂಟಿ ಯೋಜನೆಗಳ ಸಧ್ಯಸರು ಜೆ ಪಿ ಪಾರ್ಕ್ ವಾರ್ಡ್ ಇವರು ಏರ್ಪಡಿಸಿದ ಕಾರ್ಯಕ್ರಮ ಮಹಿಳಾ…

ಕರ್ನಾಟಕ: ಪೋಲಿಸ್ ಮತ್ತು ನ್ಯಾಯಾಂಗ ಎರಡರಲ್ಲೂ ಕೋಟಾಗಳನ್ನು ಪೂರೈಸಿದ ಏಕೈಕ ರಾಜ್ಯ,

ಕರ್ನಾಟಕ: ಪೋಲಿಸ್ ಮತ್ತು ನ್ಯಾಯಾಂಗ ಎರಡರಲ್ಲೂ ಕೋಟಾಗಳನ್ನು ಪೂರೈಸಿದ ಏಕೈಕ ರಾಜ್ಯ, ಇಂಡಿಯಾ ಜಸ್ಟಿಸ್ ರಿಪೋರ್ಟ್ 2025ನಲ್ಲಿ 18 ರಾಜ್ಯಗಳ ಪೈಕಿ ಮೊದಲನೇ ಸ್ಥಾನ ಉಳಿಸಿಕೊಂಡಿದೆ ಕೆಲವು ಪ್ರೋತ್ಸಾಹದಾಯಕ ಸುಧಾರಣೆಗಳು:● ರಾಜ್ಯಗಳ ಒಟ್ಟಾರೆ ಶ್ರೇಯಾಂಕದಲ್ಲಿ ಬಿಹಾರ 13ನೆ ಸ್ಥಾನದಿಂದ 3 ಸ್ಥಾನ…

ಇದನ್ನೂ ಓದಿ

ಯಲಹಂಕದ ಐಷಾರಾಮಿ ‘ತಾಜ್ ಯಲಹಂಕ’ ಹೋಟೆಲ್ ಉದ್ಘಾಟನೆಯಲಹಂಕ ಸುದ್ದಿ​ಬೆಂಗಳೂರು (ಯಲಹಂಕ), ನವೆಂಬರ್ 21:ಉತ್ತರ ಬೆಂಗಳೂರಿನ ಆತಿಥ್ಯ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಹೊಸ ಅತ್ಯಾಧುನಿಕ ‘ತಾಜ್ ಯಲಹಂಕ’ ಪಂಚತಾರಾ ಹೋಟೆಲ್ ಅನ್ನು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಿದರು.​ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ (NH-44) ತಲೆ ಎತ್ತಿರುವ ಈ ಭವ್ಯ ಹೋಟೆಲ್ ಉದ್ಘಾಟನಾ ಸಮಾರಂಭದಲ್ಲಿ ಕೃಷ್ಣ ಜಿವಿಕೆ ಲಕ್ಸುರಿ ಹೋಟೆಲ್ಸ್ ಲಿಮಿಟೆಡ್‌ ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಭೂಪಾಲ್ ಶಾಲಿನಿ ಭೂಪಾಲ್ ಸೇರಿದಂತೆ ಸಂಸ್ಥೆಯ ಪ್ರವರ್ತಕರು, ಗಣ್ಯರು ಹಾಗೂ ಉದ್ಯಮಿಗಳು ಪಾಲ್ಗೊಂಡಿದ್ದರು.​​ಉತ್ತರ ಬೆಂಗಳೂರಿನ ಬೆಳವಣಿಗೆಗೆ ಪೂರಕ: ವಿಮಾನ ನಿಲ್ದಾಣ ಮತ್ತು ನಗರ ಕೇಂದ್ರದ ನಡುವೆ ಆಯಕಟ್ಟಿನ ಜಾಗದಲ್ಲಿರುವ ಯಲಹಂಕ ಭಾಗವು ಐಟಿ ಪಾರ್ಕ್‌ಗಳು ಹಾಗೂ ಏರೋಸ್ಪೇಸ್ ಕ್ಲಸ್ಟರ್‌ಗಳ ಮೂಲಕ ವೇಗವಾಗಿ ಬೆಳೆಯುತ್ತಿದೆ. ಈ ಭಾಗಕ್ಕೆ ಭೇಟಿ ನೀಡುವ ಉದ್ಯಮಿಗಳು ಮತ್ತು ಪ್ರವಾಸಿಗರಿಗೆ ವಿಶ್ವದರ್ಜೆಯ ಸೌಲಭ್ಯವನ್ನು ಈ ಹೋಟೆಲ್ ಒದಗಿಸಲಿದೆ.​ ​ಸಮಾರಂಭದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಬೆಂಗಳೂರಿನ ಮೂಲಸೌಕರ್ಯ ಮತ್ತು ಆತಿಥ್ಯ ಕ್ಷೇತ್ರದ ಪ್ರಗತಿಗೆ ಇಂತಹ ಬೃಹತ್ ಹೂಡಿಕೆಗಳು ಹೆಚ್ಚಿನ ಬಲ ತುಂಬಲಿವೆ ಎಂದು ಶುಭ ಹಾರೈಸಿದರು.