











ಜಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ :
ಬ್ಯಾಟರಾಯನಪುರ : ಶ್ರೀ ರಾಮ ಮತ್ತು ಆತನ ಆದರ್ಶಗಳ ಬಗ್ಗೆ ನಾವಿಂದು ತಿಳಿದುಕೊಂಡಿದ್ದರೆ, ಅದಕ್ಕೆ ಮೂಲ ಕಾರಣ ಪುರಷ ಮಹರ್ಷಿ ವಾಲ್ಮೀಕಿ ಯವರು, ಭರತ ಭೂಮಿಗೆ ಶ್ರೀ ರಾಮ ಮತ್ತು ಆತನ ಆದರ್ಶಗಳನ್ನು ರಾಮಾಯಣ ಕೃತಿ ರಚನೆಯ ಮೂಲಕ ಪರಿಚಯಿಸಿದ ಆದಿಕವಿ ವಾಲ್ಮೀಕಿಯವರು ಎಂದು ಜಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್ ಅಭಿಪ್ರಾಯಪಟ್ಟರು.
ಬ್ಯಾಟರಾಯನಪುರ ಕ್ಷೇತ್ರದ ಚಿಕ್ಕಜಾಲದಲ್ಲಿರುವ ಜಾಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಮತ್ತು ಬಿಲ್ಲಮಾರನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಮತ್ತು ಗ್ರಾಮದೇವತೆಗಳ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ‘ಅರಣ್ಯದಲ್ಲಿ ಬೇಡನಾಗಿದ್ದ ವಾಲ್ಮೀಕಿಯವರು ಮಹಾನ್ ಪರಿವರ್ತನೆಯಾಗಿ, ಸಂಸ್ಕೃತ ಭಾಷೆಯಲ್ಲಿ ಹಿಂದೂ ಧರ್ಮದ ಪವಿತ್ರ ಗ್ರಂಥವೆನಿಸಿರುವ ರಾಮಾಯಣ ರಚಿಸಿರುವುದು ಅವರ ಅಪ್ರತಿಮ ಸಾಧನೆಯಾಗಿದೆ. ಇಂಥ ಶ್ರೇಷ್ಠ ಮಹರ್ಷಿಯ ಜಯಂತಿ ಆಚರಿಸುವುದು ಪುಣ್ಯದ ಕಾರ್ಯ ಎನಿಸುತ್ತದೆ, ಸೂರ್ಯ,ಚಂದ್ರ, ಭೂಮಿಯ ಅಸ್ಥಿತ್ವ ಇರುವವರೆಗೂ ವಾಲ್ಮೀಕಿ ಮಹರ್ಷಿಗಳು ಅಜರಾಮರ ರಾಗಿರುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ದೊಡ್ಡಜಾಲ ಗ್ರಾ.ಪಂ.ಅಧ್ಯಕ್ಷ ಬೈರೇಗೌಡ, ಜಾಲ ಬ್ಲಾಕ್ ಯುವ ಕಾಂಗ್ರೆಸ್ ಮುಖಂಡ ಮಧುಗೌಡ, ಕಾಂಗ್ರೆಸ್ ಮುಖಂಡರು, ವಾಲ್ಮೀಕಿ ಸಮುದಾಯದ ಮುಖಂಡರಾದ ಚನ್ನಹಳ್ಳಿ ಚಂದ್ರಣ್ಣ, ತಿರುಮಳಪ್ಪ, ಸತೀಶ್, ಯುವ ಮುಖಂಡರಾದ ಶಿವು, ಪ್ರಭಾಕರ್, ಮುರಳಿ, ದೊಡ್ಡಜಾಲ ಚೇತನ್, ಮುನಿಕೃಷ್ಣ, ಪ್ರಶಾಂತ್, ಸುರೇಶ್ ಬಾಬು, ಅರ್ಜುನ್, ಪ್ರವೀಣ್, ನಯನ್, ಕೋಡಗಲಹಟ್ಟಿ ಮುನಿರಾಜು, ಕಿರಣ್, ಅಶೋಕ್, ರವಿ, ಮುನೀಂದ್ರ, ಹರ್ಷ, ಯತೀಶ್ ಸೇರಿದಂತೆ ಇನ್ನಿತರರ ಗಣ್ಯರಿದ್ದರು.
ಸುದ್ದಿಹಾಗೂ ಜಾಹಿರಾತುಗಳಿಗೆ ಸಂಪರ್ಕಿಸಿ
Public power
R Hanumanthu
kogilu layout
Yelahanka
9845085793
9035282296
7349337989