ಬಂಡೆ ಮುನೇಶ್ವರಸ್ವಾಮಿ, ಮಾರಮ್ಮದೇವಿ ಜಾತ್ರಾ ಮಹೋತ್ಸವ :
ಬ್ಯಾಟರಾಯನಪುರ : ಕ್ಷೇತ್ರದ ಮಾರೇನಹಳ್ಳಿಯ ಬಂಡೆಯಲ್ಲಿ ಭಾನುವಾರ ಆಯೋಜಿಸಿದ್ದ ಬಂಡೆ ಮುನೇಶ್ವರ ಸ್ವಾಮಿ ಹಾಗೂ ಮಾರಮ್ಮ ದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಜಾತ್ರೆಯ ಪ್ರಯುಕ್ತ ಸುತ್ತಮುತ್ತಲಿನ ಗ್ರಾಮಗಳ ನಾಗರೀಕರು ದೇವಾಲಯಕ್ಕೆ ಆಗಮಿಸಿ, ಬಂಡೆ ಮುನೇಶ್ವರಸ್ವಾಮಿ ಹಾಗೂ ಮಾರಮ್ಮದೇವಿಗೆ ತಮ್ಮ ಅರಕೆ ತೀರಿಸಿ, ಭಕ್ತಿಯಿಂದ ನಮಿಸಿ ಕೃತಾರ್ಥರಾದರು.
ಜಾತ್ರಾ ಮಹೋತ್ಸವದ ಪ್ರಯುಕ್ತ ಸಹಸ್ರಾರು ಭಕ್ತರಿಗೆ ತೀರ್ಥ, ಪ್ರಸಾದ ವಿನಿಯೋಗ, ಅನ್ನದಾನ ಸೇವೆ ಏರ್ಪಡಿಸಲಾಗಿತ್ತು.
ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನದವರೆಗೆ ಬಂಡೆ ಮುನೇಶ್ವರಸ್ವಾಮಿ‌‌ ಮತ್ತು ಮಾರಮ್ಮದೇವಿಗೆ ವಿಶೇಷ ಅಲಂಕಾರ, ಪೂಜೆ, ನೈವೇದ್ಯ, ಮಹಾಮಂಗಳಾರತಿ ಮುಂತಾದ ದೈವ ಕಾರ್ಯಗಳನ್ನು ನೆರವೇರಿಸಲಾಯಿತು.
ಮಹತ್ವದ ಈ ಜಾತ್ರಾ ಮಹೋತ್ಸವದಲ್ಲಿ ಮಾರೇನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು, ವಿವಿಧ ಪಕ್ಷಗಳ ಮುಖಂಡರು, ಯುವ ಸ್ನೇಹಿತರು, ಮುನೇಶ್ವರ ಸ್ವಾಮಿ, ಮಾರಮ್ಮದೇವಿಯ ಭಕ್ತಾದಿಗಳು, ಭಕ್ತ ಮಂಡಳಿಯವರು ಆಗಮಿಸಿ ದೇವರ ಆಶೀರ್ವಾದು ಪಡೆದು ಪ್ರಸಾದ ಸ್ವೀಕರಿಸಿದರು.

Leave a Reply

Your email address will not be published. Required fields are marked *