ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸತೀಶ್ ಕಡತನಮಲೆ ಅವಿರೋಧ ಆಯ್ಕೆ :
ಶಾಸಕ ಎಸ್ ಆರ್ ವಿಶ್ವನಾಥ್ ರಿಂದ ಅಭಿನಂದನೆ :
ಯಲಹಂಕ : ಕ್ಷೇತ್ರದ ಅರಕೆರೆ ಗ್ರಾ.ಪಂ.ವ್ಯಾಪ್ತಿಯ ಕಡತನಮಲೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಸತೀಶ್ ಕಡತನಮಲೆ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಡತನಮಲೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಒಟ್ಟು 13 ಮಂದಿ ನಿರ್ದೇಶಕರಿದ್ದು, ಅಧ್ಯಕ್ಷರಾಗಿದ್ದ ಪಾಂಡುರಂಗಯ್ಯ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಹಾಲು ಸಂಘದ ನೂತನ ಅಧ್ಯಕ್ಷ ಸತೀಶ್ ಕಡತನಮಲೆ ಅವರನ್ನು ಶಾಸಕ ಎಸ್ ಆರ್ ವಿಶ್ವನಾಥ್ ಅಭಿನಂದಿಸಿ ಶುಭ ಹಾರೈಸಿದರು.
ಈ ವೇಳೆ ಮಾತನಾಡಿದ ಶಾಸಕರು ಕಡತನಮಲೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿಜೆಪಿ ಯುವ ಮುಖಂಡ ಸತೀಶ್ ಕಡತನಮಲೆ ಅವರು ಅವಿರೋಧವಾಗಿ ಆಯ್ಕೆಯಾಗಿರುವುದು ಸಂತೋಷದ ಸಂಗತಿ. ನೂತನ ಅಧ್ಯಕ್ಷರು ಎಲ್ಲಾ ನಿರ್ದೇಶಕರ ವಿಶ್ವಾಸದೊಂದಿಗೆ ಸಹಕಾರ ಸಂಘದ ಅಭಿವೃದ್ಧಿಗೆ ಶ್ರಮಿಸುವಂತಾಗಲಿ ಮತ್ತು ಹಾಲು ಉತ್ಪಾದಕರ ಹಿತರಕ್ಷಣೆಯ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿ ಎಂದು ಶುಭ ಹಾರೈಸಿದರು.
ಮುಂಬರುವ ಮೇ ತಿಂಗಳಲ್ಲಿ ಬೆಂಗಳೂರು ಡೈರಿ ಚುನಾವಣೆ ನಡೆಯಲಿದ್ದು, ಯಲಹಂಕ ಕ್ಷೇತ್ರದಿಂದ ಹಲವರು ಸ್ಪರ್ಧಾಕಾಂಕ್ಷಿ ಗಳಿದ್ದಾರೆ. ಈ ಕುರಿತು ಚರ್ಚಿಸಿ ಗೆಲ್ಲುವಂತಹ ಛಾತಿ ಉಳ್ಳ ಅಭ್ಯರ್ಥಿಗೆ ಟಿಕೆಟ್ ನೀಡುವುದಾಗಿ ತಿಳಿಸಿದರು.
ನೂತನ ಅಧ್ಯಕ್ಷ ಸತೀಶ್ ಕಡತನಮಲೆ ಮಾತನಾಡಿ ‘ಹಾಲು ಉತ್ಪಾದಕ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ರೈತರು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘದ ಮಧ್ಯೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಸ್ ಎನ್ ರಾಜಣ್ಣ, ದಿಬ್ಬೂರು ಜಯಣ್ಣ, ಡಿ.ಜಿ.ಅಪ್ಪಯ್ಯಣ್ಣ, ಚೊಕ್ಕನಹಳ್ಳಿ ವೆಂಕಟೇಶ್, ಯಲಹಂಕ ಗ್ರಾ.ಮಂಡಲ ಬಿಜೆಪಿ ಅಧ್ಯಕ್ಷ ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್,ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜಿ.ಜೆ.ಮೂರ್ತಿ, ಯಲಹಂಕ ಗ್ರಾ.ಮಂಡಲ ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ರಾಜೇಶ್, ಅರಕೆರೆ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಆರ್.ತಿಮ್ಮೇಗೌಡ, ತಾ.ಪಂ.ಮಾಜಿ ಅಧ್ಯಕ್ಷ ಮುನಿದಾಸಪ್ಪ, ಬ್ಯಾತ ಸುರೇಶ್, ಚೊಕ್ಕನಹಳ್ಳಿ ನಾಗೇಶ್, ಯುವ ಮೋರ್ಚಾ ಕಾರ್ಯದರ್ಶಿ ರಾಜೇಂದ್ರ ಬೈರಾಪುರ, ಕಡತನಮಲೆ ಹಾಲು ಸಂಘದ ನಿರ್ದೇಶಕರಾದ ಪಾಂಡುರಂಗಯ್ಯ, ಅರಸೇಗೌಡ, ನಂಜೇಗೌಡ, ಚನ್ನೇಗೌಡ, ಜಿನ್ನರಾಜು, ಮುತ್ತುರಾಯಪ್ಪ,, ನಾಗರಾಜ್, ಸೌಭಾಗ್ಯ, ನಾಗರತ್ನ, ವಿಜಯಲಕ್ಷ್ಮಿ, ರಂಜಿತ, ಎಂ.ರಾಮಯ್ಯ ಸೇರಿದಂತೆ ಕಡತನಮಲೆ ಗ್ರಾಮದ ಹಲವು ಮುಖಂಡರಿದ್ದರು.

Leave a Reply

Your email address will not be published. Required fields are marked *