





ಯಲಹಂಕ ಸುದ್ದಿ . ವಿದ್ಯಾರ್ಥಿಗಳ ಸರ್ವಾಂಗೀಣ ಅಬಿವೃದ್ಧಿಗೆ ಗುರುಗಳ ಪಾತ್ರ ಅಪಾರ
“ವಿಕಸಿತ ಭಾರತದಲ್ಲಿ ಗುರುಗಳ ಪಾತ್ರ ಬೆಲೆಕಟ್ಟಲಾಗದ್ದು. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಯಲ್ಲಿ ಗುರುಗಳ ಪಾತ್ರ ಅಪಾರ” ಎಂದು ಸಿಂಧಿ ಸೇವಾಸಮಿತಿಯ ಅಧ್ಯಕ್ಷರಾದ ಶ್ರೀ ಪ್ರಕಾಶ್ ಎಫ್ ಮಾದ್ವಾನಿ ಅಬಿಪ್ರಾಯಪಟ್ಟರು. ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಸಿಂಧಿ ಮಹಾವಿದ್ಯಾಲಯದಲ್ಲಿ ದಿನಾಂಕ. 30 01 2026 ರoದು ಆಯೋಜಿಸಲಾಗಿದ್ದ “ಗುರುವಂದನಾ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. “ನೀವು ಬೋಧನೆ ಮಾಡಿದ ವಿದ್ಯಾರ್ಥಿಗಳಲ್ಲಿ ಒಬ್ಬ ವಿದ್ಯಾರ್ಥಿ ಬದಲಾದರೆ ಅದಕ್ಕಿಂತ ಪುಣ್ಯ ಯಾವುದಿದೆ. ಮಕ್ಕಳ ಏಳಿಗೆಯನ್ನು ನೋಡಿ ತಂದೆ-ತಾಯಿಗಳಷ್ಟೆ ಸಂತೋಷಪಡುವವರು ಶಿಕ್ಷಕರು ಎಂದು ಅಬಿಪ್ರಾಯಪಟ್ಟರು”. ತಮ್ಮ ಭಾಷಣದಲ್ಲಿ ರಾಷ್ಟ್ರಕವಿ ಕುವೆಂಪು, ವಿಶ್ವೇಶ್ವರಯ್ಯ ಹಾಗೂ ಜಯಚಾಮರಾಜೇಂದ್ರ ಒಡೆಯರ್ ರವರ ಸೇವೆಯನ್ನು ಸ್ಮರಿಸಿದರು. ಯಾವುದೇ ತಂತ್ರಜ್ಞಾನ ಬಂದರು ಗುರುಗಳ ಸ್ಥಾನ ಅಜರಾಮಾರ ಎಂದು ತಿಳಿಸಿದರು. “ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವವನು ಗುರು, ದೇಶದ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಅಪಾರ ಎಂದು ಸಿಂಧಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಎನ್ ಆಶಾ ರವರು ಅಭಿಪ್ರಾಯಪಟ್ಟರು. ಗುರುವಂದನಾ ಕಾರ್ಯಕ್ರಮದ ಉದ್ದೇಶ ಮತ್ತು ಹಿರಿಮೆಯ ಬಗ್ಗೆ ಮಾತನಾಡಿ, ಗುರುವಂದನೆ ಸ್ವೀಕರಿಸಲು ಆಗಮಿಸಿದ ಗುರುಗಳನ್ನು ಅವರು ಸ್ವಾಗತಿಸಿದರು. ಶಿಕ್ಷಣ ಕ್ಷೇತ್ರದಲ್ಲಿ ಅನನ್ಯ ಸೇವೆಯನ್ನು ಸಲ್ಲಿಸಿ, ವಿದ್ಯಾರ್ಥಿಗಳ ಏಳಿಗೆಗಾಗಿ ಸದಾ ಶ್ರಮಿಸುತ್ತಿರುವ ವಿವಿದ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಸೇರಿದಂತೆ ಒಟ್ಟು 66 ಸಾಧಕರನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ಶಶಿಕಲಾ ರವರು ನಿರ್ವಹಿಸಿದರು. ಡಾ. ಗೋಪಿನಾಥ್ ಡಿ, ನಿರ್ದೇಶಕರು ಸಿಂಧಿ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಇವರು ಧನ್ಯವಾದವನ್ನು ಸಮರ್ಪಿಸಿದರು. ಈ ಸಮಾರಂಭದಲ್ಲಿ ಕಾಲೇಜಿನ ಬೋಧಕರು, ಎಲ್ಲಾ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಹಾಗೂ ಭಾಗವಹಿಸದ್ದರು. ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನೆರವೇರಿತು
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthau kogilu layout Yelahanka
9845085793 9035282296. 7349337989
