ಬಳ್ಳಾರಿ,ಜು.01 ತಾಲೂಕಿನ ರೂಪನಗುಡಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರದಂದು ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ರೂಪನಗುಡಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಚಿತ್ರಾ ವರ್ಣೇಕರ್ ಅವರು ಮಾತನಾಡಿ, ಮಲೇರಿಯ ರೋಗವು ಅನಾಪಿಲಿಸ್ ಹೆಣ್ಣು ಸೊಳ್ಳೆ ಕಡಿತದಿಂದ ಬರುತ್ತದೆ. ರೋಗವು ತಗುಲಿದ ವ್ಯಕ್ತಿಗೆ ಅತೀ ಶೀಘ್ರವಾಗಿ ಚಿಕಿತ್ಸೆ ಕೊಡಿಸಬೇಕು ಇಲ್ಲದಿದ್ದರೆ ರೋಗವು ಉಲ್ಬಣಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ತಿಳಿಸಿದರು.
ಈ ರೋಗಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರೆಯುತ್ತದೆ. ಸೊಳ್ಳೆಗಳ ಉತ್ಪತ್ತಿ ತಾಣಗಳ (ನಿಷ್ಪ್ರಯೋಜಕ ಟೈರುಗಳಲ್ಲಿ ನೀರು ನಿಲ್ಲುವುದು, ಪ್ಲಾಸ್ಟಿಕ್ ಬಾಟಲಿಗಳಲ್ಲಿ ಇತ್ಯಾದಿ) ನಿಂತ ನೀರಿನ ಗುಂಡಿಗಳನ್ನು ಮುಚ್ಚಬೇಕು. ಗ್ರಾಮದ ಕೆರೆ ಕಟ್ಟೆಗಳಲ್ಲಿ ಕಪ್ಪೆ ಮೀನುಗಳನ್ನು ಬಿಡುವುದು. ಗ್ರಾಮದ ಚರಂಡಿ ನೀರು ನಿಲ್ಲದಂತೆ ಸರಾಗವಾಗಿ ಹರಿಯುವಂತೆ ಕ್ರಮ ವಹಿಸಬೇಕು. ರಾತ್ರಿ ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸಬೇಕು. ಈ ರೀತಿಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವುದರಿಂದ ಮಲೇರಿಯ ರೋಗವನ್ನು ತಡೆಗಟ್ಟಬಹುದು ಎಂದು ತಿಳಿಸಿ ಕೊಟ್ಟರು.
ಆಯುμï ವೈದ್ಯಾಧಿಕಾರಿ ಡಾ.ನಾರಾಯಣಬಾಬು ಅವರು ಮಾತನಾಡಿ, ಮಲೇರಿಯಾ ರೋಗವು ಸೋಂಕಿತ ಸೊಳ್ಳೆಯ ಕಡಿತದಿಂದ ಹರಡುವ ಗಂಭೀರ ಖಾಯಿಲೆಯಾಗಿದೆ. ಇದು ಒಬ್ಬ ವ್ಯಕ್ತಿಗೆ ಜ್ವರ ಮತ್ತು ಶೀತವನ್ನು ಉಂಟು ಮಾಡಬಹುದು ಹಾಗೂ ತಕ್ಷಣ ಚಿಕಿತ್ಸೆ ನೀಡದಿದ್ದರೆ ವ್ಯಕ್ತಿಯ ಜೀವಕ್ಕೆ ಮಾರಕವಾಗಬಹುದು ಎಂದು ಹೇಳಿದರು.
ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಮುಸ್ಸಂಜೆ ವೇಳೆ ಸೊಳ್ಳೆಗಳು ಹೆಚ್ಚು ಇರುವ ಸಮಯದಲ್ಲಿ ಸೊಳ್ಳೆ ಬತ್ತಿಗಳನ್ನು ಬಳಸಿ ಸೊಳ್ಳೆಗಳಿಂದ ಸುರಕ್ಷಿತವಾಗಿರುವ ಮೂಲಕ ಮಲೇರಿಯವನ್ನು ತಡೆಗಟ್ಟಲು ಸಹಕರಿಸಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದಂತ ತಜ್ಞೆ ಡಾ.ಪ್ರಿಯಾಂಕಾ ರೆಡ್ಡಿ, ನೇತ್ರಾ ಸಹಾಯಕ ಅಧಿಕಾರಿ ಭಂಡಾರು ಮಂಜುನಾಥ, ಹೆಚ್.ಐ.ಓ ವೀರಾರೆಡ್ಡಿ ಸೇರಿದಂತೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇದನ್ನೂ ಓದಿ

ಬೊಂಗೊಧಾರಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಯಲಹಂಕದಲ್ಲಿ ವಿಜೃಂಭಣೆಯ ದುರ್ಗಾ ಪೂಜೆ 2026​ಯಲಹಂಕ ಸುದ್ದಿ:ಬೆಂಗಳೂರಿನ ಯಲಹಂಕದ ವೈಟ್ ಪರ್ಲ್ ಕನ್ವೆನ್ಷನ್ ಸೆಂಟರ್‌ನಲ್ಲಿ (ರೇವ ಕಾಲೇಜ್ ಮುಖ್ಯ ರಸ್ತೆ, ಬೆಳ್ಳಿಹಳ್ಳಿ ಕ್ರಾಸ್) ಬೊಂಗೋಧರ ಸಾಂಸ್ಕೃತಿಕ ಸಂಘದ (Bongodhara Cultural Association) ನೇತೃತ್ವದಲ್ಲಿ ದುರ್ಗಾಪೂಜೆ 2026 ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.​ಕಾರ್ಯಕ್ರಮದ ವಿಶೇಷತೆಗಳು:​ಈ ಪೂಜಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.​ಆಗಮಿಸಿದ ಭಕ್ತರಿಗೆ ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿದೆ.​ವ್ಯಾಪಾರಸ್ಥರಿಗಾಗಿ ಪ್ರತ್ಯೇಕವಾಗಿ ಸ್ಟಾಲ್ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.​ಪ್ರತಿ ವರ್ಷದಂತೆ ಈ ಬಾರಿಯೂ ಈ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಹಾಗೂ ಸಡಗರದಿಂದ ನಡೆಯುತ್ತಿದೆ.