

“ಇಂದುಸಂಜೆ” ಪತ್ರಿಕಾ ಕಚೇರಿಯಲ್ಲಿ ಪತ್ರಿಕಾ ದಿನಾಚರಣೆ
ಬೆಂಗಳೂರು: ಇಂದುಸಂಜೆ ಪತ್ರಿಕಾ ಕಚೇರಿಯಲ್ಲಿ ಪತ್ರಿಕಾದಿನಾಚರಣೆ ಅಂಗವಾಗಿ ರಾಜ್ಯ ಸಂಪಾದಕರು ಮತ್ತು ವರದಿಗಾರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಇಂದುಸಂಜೆ ಪತ್ರಿಕೆ ವ್ಯವಸ್ಥಾಪಕ ಸಂಪಾದಕರಾದ ಡಾ. ಜಿ.ವೈ. ಪದ್ಮನಾಗರಾಜು ಅವರಿಗೆ ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ ಸಂದ ನೆನಪಿಗಾಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷ ಕಲಾವಿದ ವಿಷ್ಣು ಅವರು ಮಾತನಾಡಿ, ದಿವಂಗತ ಸಮಾಜಮುಖಿ ಚಿಂತಕ ವಿ. ನಾಗರಾಜು ಅವರು ಹುಟ್ಟುಹಾಕಿದ ಇಂದುಸಂಜೆ ಪತ್ರಿಕೆ ಇಂದು ಪ್ರಾದೇಶಿಕ ಪತ್ರಿಕೆಯಾಗಿ ಹೊರ ಹೊಮ್ಮಿದ್ದು, ಜನಮನ್ನಣೆ ಗಳಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಪತ್ರಿಕೆಯಾಗಿ ಹೊರ ಹೊಮ್ಮಲಿ ಎಂದು ಶುಭಾ ಹಾರೈಸಿ ಪತ್ರಿಕೆಯನ್ನು ಡಾ.ಜಿ.ವೈ ಪದ್ಮನಾಗರಾಜು ಅವರು ಮುನ್ನಡೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದರದಲ್ಲದೇ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಉದಯೋನ್ಮುಖ ಪತ್ರಕರ್ತರು ಪತ್ರಿಕೆಯಿಂದ ಹೊರ ಹೊಮ್ಮಲಿ ಎಂದು ಆಶಿಸಿದರು.
ಪತ್ರಿಕೆ ರಾಜ್ಯಮಟ್ಟದ ಪತ್ರಿಕೆಯಾಗಿ ಜನಮನ್ನಣೆ ಗಳಿಸಲಿ ಎಂದು ಇದೇ ಸಂದರ್ಭದಲ್ಲಿ ಶುಭ ಹಾರೈಸಿದರು.
ಸಂಘದ ರಾಜ್ಯಾಧ್ಯಕ್ಷ ಸೌರಭ ನಾಗರಾಜ್, ಖಜಾಂಚಿ ಕೆ.ಮುನಿರಾಜು, ಪ್ರಧಾನ ಕಾರ್ಯದರ್ಶಿ
ಇ ಎಸ್ ವಿಶ್ವನಾಥ್, ಕಾರ್ಯದರ್ಶಿಗಳಾದ ಸುಮಾ ಪುರುಷೋತ್ತಮ, ಚೇತನ್ ಬಾಬು, ಬೆಂಗಳೂರು ನಗರ ಜಿಲ್ಲಾಧ್ಯಕ್ಷರಾದ ಉಮೇಶ್ ಸೇರಿದಂತೆ ಇಂದು ಸಂಜೆ ಪತ್ರಿಕೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಉಮೇಶ್ ಯಲಹಂಕ