


ಯಲಹಂಕ. ರವರ ಸಂಯುಕ್ತ ಆಶ್ರಯದಲ್ಲಿ ವಿಧಾನಸೌಧ ಬಡಾವಣೆಯ ಡೆವಲಪರ್ ಆಗಿರುವ ಜಯ ಸೂರ್ಯ ಡೆವೆಲಪರ್ಸ್ ರವರ ಬಳಿ ಸಂಘದ ಸದಸ್ಯರುಗಳು ಮತ್ತು ಪದಾಧಿಕಾರಿಗಳು ಸುಮಾರು 50 ರಿಂದ 60 ಸಾರಿ, ನೇರವಾಗಿ ಮತ್ತು ದೂರವಾಣಿ ಮೂಲಕ ಭೇಟಿ ಮಾಡಿ ಇಲ್ಲಿನ ವಿಧಾನಸೌಧ ಮತ್ತು ಕೆ ಪಿ ಎಸ್ ಸಿ ಲೇಔಟ್ ನ ಅಭಿವೃದ್ಧಿಗೆ ಸಂಬಂಧಿಸಿದ 9 ಉದ್ಯಾನವನಗಳು ,ಯುಜಿಡಿ ನಿರ್ಮಾಣ, ಬೀದಿ ದೀಪಗಳ ಅಳವಡಿಸುವಿಕೆ ಮತ್ತು ಕುಡಿಯುವ ನೀರಿನ ಸೌಲಭ್ಯ,ಎಸ್‌ಟಿಪಿ ನಿರ್ಮಾಣ ಮತ್ತು ಇತರ ಅಭಿವೃದ್ಧಿಯ ಕೆಲಸಗಳ ಬಗ್ಗೆ ಅನೇಕ ಬಾರಿ ಮನವಿ ಮಾಡಿಕೊಂಡಿದ್ದರೂ ಇದುವರೆಗೆ ಯಾವುದೇ ಪ್ರಗತಿ ಕಾಣದೇ ಇರುವ ಕುರಿತು ಅಸಮಾಧಾನ ಮತ್ತು ಆಕ್ರೋಶ ವ್ಯಕ್ತಪಡಿಸಿ ಇಲ್ಲಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ತಮ್ಮ ಸುತ್ತಮುತ್ತಲಿರುವ ಸಮುದಾಯಗಳ ಸಹಕಾರ ಮತ್ತು ಸಹಭಾಗಿತ್ವದ ಅಡಿಯಲ್ಲಿ ಒಂದು ವಿನೂತನ ಮತ್ತು ವಿಶೇಷ ಕಾರ್ಯಕ್ರಮ *ನಾವು ಮತ್ತು ನಮ್ಮ ಉದ್ಯಾನವನ ಆಂದೋಲನ* ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸಮುದಾಯದ ಆಂದೋಲನದ ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾಗಿರುವ ಶ್ರೀಯುತ ಅಚ್ಚುತ ಕೃಷ್ಣನ್ ರವರು ಸಸಿಗೆ ನೀರೆರೆಯುವುದರ ಮೂಲಕ ಉದ್ಯಾನವನ ದ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು.
ಸದರಿ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಶ್ರೀಯುತ ಅಚ್ಚುತ ಕೃಷ್ಣನ್ ,ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರೀಯುತ ಮಂಜುನಾಥ್ ರಾಮಚಂದ್ರ, ಉಪಾಧ್ಯಕ್ಷರಾದ ಶ್ರೀಯುತ ಬಸವ ಕುಮಾರ್, ನೀಲಕಂಠೇಶ್ವರ, ಖಜಾಂಚಿಗಳಾದ ಶ್ರೀಯುತ ಎಸ್ ರವಿ ನಿರ್ದೇಶಕರಾದ ಶ್ರೀಯುತ ನವೀನ್ ,ದೀಪಕ್ ,ಪರಮೇಶ್ ಮತ್ತು ಇತರ ಸಮುದಾಯದ ಜನರು ಭಾಗವಹಿಸಿದ್ದರು.
ಸಮುದಾಯದ ಸಹಭಾಗಿತ್ವದ ಈ ವಿಶೇಷ ಕಾರ್ಯಕ್ರಮದ ನಡೆಗೆ ಇಲ್ಲಿನ ಎಲ್ಲಾ ನಿವಾಸಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಸುದ್ದಿ ಹಾಗೂ ಜಾಹಿರಾತು ನೀಡಲು
R Hanumanthu kogilu layout
Yelahanka Bangalore
9845085793
7349337989
9035282296