ಬಾಗೇಪಲ್ಲಿ ಸುದ್ದಿ :-
ಬಾಗೇಪಲ್ಲಿ ಯನ್ನು ಇನ್ನೂ ಮುಂದೆ ” ಭಾಗ್ಯನಗರ ” ಎಂದು ಘೋಷಣೆ ಬಳಿಕ ನಾಡಿನ ಜನತೆ ಸಂಭ್ರಮಚರಣೆ……..

ಕರವೇಬಾಗೇಪಲ್ಲಿಪಾದಯಾತ್ರೆ
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ನಗರದ ಹೆಸರನ್ನು ಭಾಗ್ಯನಗರ ಎಂದು ಬದಲಾಯಿಸಬೇಕು ಚಿತ್ರಾವತಿ ಅಣೆಕಟ್ಟು ಜೊತೆಗೆ ವಿವಿಧ ಬೇಡಿಕೆಗಳನ್ನ ಇಟ್ಟುಕೊಂಡು 2003 ರಲ್ಲೇ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಟಿಎ. ನಾರಾಯಣಗೌಡರ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ಮಾಡಿತ್ತು.

ಇಂದು ರಾಜ್ಯ ಸರ್ಕಾರ ನಂದಿ ಬೆಟ್ಟದಲ್ಲಿ ನಡೆದ ಸಚಿವ ಸಂಪುಟದಲ್ಲಿ ಬಾಗೇಪಲ್ಲಿ ಹೆಸರನ್ನು ಭಾಗ್ಯನಗರ ಎಂದು ಬದಲಾಯಿಸಲು ತೀರ್ಮಾನಿಸಿರುವುದು ಸ್ವಾಗತಾರ್ಹ.

ನೀವು ಗಮನಿಸಬೇಕಾಗಿರುವುದು ಏನು ಎಂದರೆ ಸರ್ಕಾರ ಈಗ ಯೋಚಿಸಿದ ವಿಷಯವನ್ನು ಕರ್ನಾಟಕ ರಕ್ಷಣಾ ವೇದಿಕೆ 22 ವರ್ಷಗಳ ಹಿಂದೆಯೇ ಯೋಚಿಸಿತ್ತು ಎಂದರೆ ಈ ನಾಡಿನ ಪರ ಎಷ್ಟು ಬದ್ಧತೆ ಹಾಗೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿತ್ತು ಅನ್ನೋದು ನೀವು ಗಮನಿಸಬೇಕು.
ನಾಡು- ನುಡಿ-ನೆಲ- ಜಲ ಕನ್ನಡದ ಕಲೆ ಮತ್ತು ಸಂಸ್ಕೃತಿಗೆ ಧಕ್ಕೆಯಾದಗ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಟಿ ಏ ನಾರಾಯಣಗೌಡ ನೇತೃತ್ವದಲ್ಲಿ ರಾಜ್ಯದಾದ್ಯಂತ ನಿರಂತರ ಹೋರಾಟಗಳನ್ನು ನಡೆಸುತ್ತಿರುವ ಕರವೇ ಕಾರ್ಯಕರ್ತರ ಹೋರಾಟಕ್ಕೆ ಸಿಕ್ಕ ಜಯ ಇದಾಗಿದೆ.
ಕನ್ನಡಿಗರ ಪರವಾಗಿ ತೀರ್ಮಾನ ತೆಗೆದುಕೊಂಡು ಭಾಗ್ಯನಗರ ಎಂದು ಮರುನಾಮಕರಣ ಮಾಡಿದ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ರವರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ ಸಿ ಸುಧಾಕರ್ ರವರಿಗೆ ಭಾಗ್ಯನಗರ ಶಾಸಕರಾದ ಸುಬ್ಬಾರೆಡ್ಡಿ ರವರಿಗೆ ಕರ್ನಾಟಕ ರಕ್ಷಣಾ ವೇದಿಕೆಯ ಪರವಾಗಿ ಧನ್ಯವಾದಗಳು ತಿಳಿಸುತ್ತೇನೆ.
ಈ ಸಂಧರ್ಭದಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಿಯಾಜ್ಉಲ್ಲಾ, ತಾಲ್ಲೂಕು ಉಪಾಧ್ಯಕ್ಷರು ಚಿನ್ನು, ತಾಲ್ಲೂಕು ಉಪಾಧ್ಯಕ್ಷರು ಅಲೀಮ್, ಮಹಿಳಾ ಅಧ್ಯಕ್ಷರು ಗಂಗರತ್ನಮ್ಮ, ತಾಲ್ಲೂಕು ಖಜಾಂಚಿ ನಾರಾಯಣಸ್ವಾಮಿ, ತಾಲ್ಲೂಕು ಸಂಚಾಲಕರು ಶಿವಕುಮಾರ್, ತಾಲ್ಲೂಕು ಕಾರ್ಯದರ್ಶಿ ಮಂಜುನಾಥನಾಯ್ಕ, ಜಿಲ್ಲಾ ಉಪಾಧ್ಯಕ್ಷರು ರಾಮಿರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ, ನಗರಘಟಕ ಅಧ್ಯಕ್ಷರು ಸೀನಪ್ಪ, ನಗರ ಘಟಕ ಗೌರವಾಧ್ಯಕ್ಷರು ಚಾಂದ್ ಬಾಷ, ನವೀನ್, ಗಂಗರಾಜು, ಕ್ರಿಷ್ಣಪ್ಪ, ಗಣೇಶ್, ಲೋಕೇಶ್, ತೇಜು, ರಾಜೇಶ್ವರಿ, ಅಶೋಕ್, ಗಂಗರಾಜು, ರಾಜು, ಮೂರ್ತಿ, ಶಾಂತಕುಮಾರ್, ರಾಕೇಶ್, ರಘು, ಕ್ರಿಷ್ಣೆನಾಯ್ಕ, ಮುಂತಾದವರು ಭಾಗವಹಿಸಿದ್ದರು.

ವರದಿ
ರಮೇಶ್ ಬಾಬು ಎನ್
ಬಾಗೇಪಲ್ಲಿ ತಾಲ್ಲೂಕು…

Leave a Reply

Your email address will not be published. Required fields are marked *