















ಕಾಂಗ್ರೆಸ್ ಮುಖಂಡ ಶೆಟ್ಟಿಗೆರೆ ರಾಜಣ್ಣ ಜನ್ಮದಿನ :
ಅಭಿಮಾನಿಗಳು, ಮುಖಂಡರು, ಸ್ನೇಹಿತರು, ಹಿತೈಷಿಗಳಿಂದ ಶುಭ ಹಾರೈಕೆ :
ದೇವನಹಳ್ಳಿ : ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಶೆಟ್ಟಿಗೆರೆ ರಾಜಣ್ಣ ಅವರ ಜನ್ಮದಿನದ ಅಂಗವಾಗಿ ಕ್ಷೇತ್ರದ ಸಾದಹಳ್ಳಿ ಸಮೀಪವಿರುವ ಶೆಟ್ಟಿಗೆರೆ ರಾಜಣ್ಣ ಅವರ ಫಾರ್ಮ್ ಹೌಸ್ ನಲ್ಲಿ ಆಯೋಜಿಸಿದ್ದ ಜನ್ಮದಿನಾಚರಣೆ ಕಾರ್ಯಕ್ರಮ ದಲ್ಲಿ ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಹಲವು ಕಾಂಗ್ರೆಸ್ ಮುಖಂಡರು, ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ಶೆಟ್ಟೆಗೆರೆ ರಾಜಣ್ಣ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು, ಸ್ನೇಹಿತರು, ಹಿತೈಷಿಗಳು ಕೇಕ್ ಕತ್ತರಿಸಿ, ರಾಜಣ್ಣ ಅವರಿಗೆ ಗೌರವ ಸನ್ಮಾನ ನೀಡಿ ಜನ್ಮದಿನದ ಶುಭ ಹಾರೈಸಿದರು.
ಜನ್ಮದಿನದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸರ್ವರಿಗೂ ಭೋಜನ ವ್ಯವಸ್ಥೆಯೊಂದಿಗೆ ಆಥಿತ್ಯ ನೀಡಿ ಗೌರವಿಸಲಾಯಿತು.