ಭಾರತೀಯ ರೈಲ್ವೆ ಮಜ್ದೂರ್ ಸಂಘದಿಂದ ಶಾಸಕ ವಿಶ್ವನಾಥ್ ಅವರಿಗೆ ಸನ್ಮಾನ :

ಸಂಘಕ್ಕೆ ಸಹಕಾರ ಕೋರಿ ಮನವಿ :

ಯಲಹಂಕ : ಸಂಯೋಜನೆಗೊಂಡ ಹಲವು ನಿರ್ಣಯಗಳೊಂದಿಗೆ ಸಂಘಟಿತವಾಗಿರುವ ಭಾರತೀಯ ರೈಲ್ವೆ ಮಜ್ದೂರ್ ಸಂಘ(BRMS)ದ ಅಂಗ ಸಂಸ್ಥೆಯಾಗಿರುವ ‘ಯಲಹಂಕ(RWFMS) ರೈಲು ಗಾಲಿ ಕಾರ್ಖಾನೆ ಮಜ್ದೂರ್ ಸಂಘ’ವು ಸಂಘದ ಪ್ರಧಾನ ಕಾರ್ಯದರ್ಶಿ ಯು.ವಿನಯ್ ಕುಮಾರ್ ಅವರ ನೇತೃತ್ವದ ತಂಡದ ನಿಯೋಗದೊಂದಿಗೆ ಯಲಹಂಕ ಶಾಸಕ ಎಸ್.ಅರ್. ವಿಶ್ವನಾಥ್ ಅವರನ್ನು ಭೇಟಿ ಮಾಡಿ, ಶಾಸಕರನ್ನು ಸನ್ಮಾನಿಸಿ, ಸಂಘದ ಬೆಳವಣಿಗೆಗೆ ಸಹಕಾರ ಕೋರಿ ಮನವಿ ಮಾಡಿಕೊಂಡರು.

ಈ ವೇಳೆ ಯಲಹಂಕ(RWFMS) ರೈಲು ಗಾಲಿ ಕಾರ್ಖಾನೆ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ಯು.ವಿನಯ್ ಕುಮಾರ್ ಅವರು ಮಾತನಾಡಿ ‘ನೌಕರರ ಹಿತ ಸಂರಕ್ಷಣೆಗಾಗಿ ಧ್ವನಿ ಎತ್ತಲು ರಾಷ್ಟ್ರೀಯ ಸಂಘವಾದ ‘ರೈಲು ಗಾಲಿ ಕಾರ್ಖಾನೆ ಮಜ್ದೂರ್ ಸಂಘ’ಕ್ಕೆ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡಬೇಕೆಂದು ಶಾಸಕರಲ್ಲಿ ಮನವಿ ಮಾಡಿಕೊಂಡರು.

ಇದೇ ವೇಳೆ ಮಾತನಾಡಿದ ಶಾಸಕ ಎಸ್ ಆರ್ ವಿಶ್ವನಾಥ್ ಅವರು ‘ರೈಲ್ವೆ ನೌಕರರಿಗೆ ಎಲ್ಲಾ ರೀತಿಯ ಬೆಂಬಲ ನೀಡುವ ಭರವಸೆ ಯೊಂದಿಗೆ ಯಲಹಂಕ(RWFMS) ರೈಲು ಗಾಲಿ ಕಾರ್ಖಾನೆ ಮಜ್ದೂರ್ ಸಂಘದ ನೂತನ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರಭಾಕರ್, ಕಾರ್ಯಕಾರಿ ಅಧ್ಯಕ್ಷ ಗುಲಾಬ್ ಸಿಂಗ್, ವಲಯ ಅಧ್ಯಕ್ಷ ಸಂದೀಪ್, ವಲಯ ಪ್ರಧಾನ ಕಾರ್ಯದರ್ಶಿ ಕೆ.ಟಿ. ಹರೀಶ್, ಹಿರಿಯ ಮುಖಂಡರಾದ ಬಾಪಟ್, ರೈಲ್ವೆ ನೌಕರರ ಎಸ್.ಸಿ.ಎಸ್.ಟಿ. ಸಂಘದ ಮಾಜಿ ವಲಯ ಪ್ರಧಾನ ಕಾರ್ಯದರ್ಶಿ ಚನ್ನಪ್ಪ, ರಂಗನಾಥ್, ಸುಗಂದರಾಜ್, ಭಾಸ್ಕರ್ ಸೇರಿದಂತೆ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಮುಂಬರುವ ಚುನಾವಣೆಯ ಎಲ್ಲಾ ಅಭ್ಯರ್ಥಿಗಳಿದ್ದರು.

ಬಿ.ಆರ್‌.ಎಂ.ಎಸ್. ನ ಹಕ್ಕೊತ್ತಾಯಗಳು :

ಇದೇ ವೇಳೆ ಕಾರ್ಮಿಕರ ಹಿತರಕ್ಷಣೆಗಾಗಿ, ಎಲ್ಲಾ ಉದ್ಯೋಗಿಗಳಿಗೆ ಎನ್.ಪಿ.ಎಸ್. ಬದಲಾಗಿ ಓ.ಪಿ.ಎಸ್. ಒದಗಿಸುವುದು,8ನೇ ವೇತನವನ್ನು ಶೀಘ್ರವಾಗಿ ಅನುಷ್ಠಾನಗೊಳಿಸು ವುದು,ಬೋನಸ್ ಪಾವತಿಯನ್ನು ನೌಕರರ ಸಂಬಳದ ಆಧಾರದ ಮೇಲೆ ಮಾಡುವುದು, ವಿಮಾ ಮೊತ್ತವನ್ನು 30 ಸಾವಿರ ರೂ. ಗಳಿಂದ 15 ಲಕ್ಷ ರೂ.ಗಳಿಗೆ ಹೆಚ್ಚಿಸುವುದು, ಪಾಸ್ ಸೌಲಭ್ಯ ಮತ್ತು ವೈದ್ಯಕೀಯ ಸೌಲಭ್ಯದಲ್ಲಿ ನೌಕರನ ತಂದೆ ತಾಯಿಯರನ್ನು ಕುಟುಂಬ ಸದಸ್ಯರನ್ನಾಗಿ ಸೇರಿಸು ವುದು ಮುಂತಾದ ಹಲವು ಹಕ್ಕೊತ್ತಾಯಗಳನ್ನು ಸಂಘದ ವತಿಯಿಂದ ಮಂಡಿಸಲಾಯಿತು.

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumantha

9845085793

7349337989

9035282296

Leave a Reply

Your email address will not be published. Required fields are marked *