


ಬೆಟ್ಟಹಲಸೂರು ಗ್ರಾಮದೇವತೆ ಶ್ರೀ ಮುತ್ಯಾಲಮ್ಮದೇವಿ ದೇವಾಲಯದಲ್ಲಿ ವಿಜೃಂಭಣೆಯ ಗುರುಪೂರ್ಣಿಮೆ :
ಬ್ಯಾಟರಾಯನಪುರ : ಕ್ಷೇತ್ರದ ಬೆಟ್ಟಹಲಸೂರು ಗ್ರಾಮದ ಗ್ರಾಮದೇವತೆ ಶ್ರೀ ಮುತ್ಯಾಲಮ್ಮ ದೇವಿ ದೇವಾಲಯದಲ್ಲಿ ಗುರುವಾರ ಗುರುಪೂರ್ಣಿಮೆ ಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಶ್ರೀ ಮುತ್ಯಾಲಮ್ಮದೇವಿ ಟ್ರಸ್ಟ್, ಬೆಟ್ಟಹಲಸೂರು ಗ್ರಾ.ಪಂ. ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಗುರು, ಹಿರಿಯರ ಸಮ್ಮುಖದಲ್ಲಿ ಆಯೋಜಿಸಿದ್ದ ಗುರುಪೂರ್ಣಿಮೆ ಆಚರಣೆ ಅಂಗವಾಗಿ ಮುತ್ಯಾಲಮ್ಮ ದೇವಿಗೆ ವಿಶೇಷ ಪೂಜೆ, ದೇವಿಗೆ ವಿಶೇಷ ಅಲಂಕಾರ, 11 ಗಂಟೆಗೆ ಮಹಾಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ, ಮಾತೆಯರಿಗೆ ಸೀರೆ,ರವಿಕೆ ವಿತರಣೆ ಸೇರಿದಂತೆ ವಿವಿಧ ದೇವತಾ ಕಾರ್ಯಗಳನ್ನು ನೆರವೇರಿಸಲಾಯಿತು.
ಗುರುಪೂರ್ಣಿಮೆ ಆಚರಣೆಯ ಈ ವಿಶೇಷ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಹೇಮಾವತಿ ನಾಗರಾಜ್ ಬಾಬು, ಉಪಾಧ್ಯಕ್ಷ ಬಿ.ಆರ್.ಪ್ರವೀಣ್ ಕುಮಾರ್, ಮುಖಂಡರಾದ ಬಿ.ವಿ.ನಾಗರಾಜ್, ಬಿ.ಕೆ.ಮಂಜುನಾಥಗೌಡ, ಪಂಚಮಿ ಶ್ರೀನಿವಾಸ್, ಬಿ.ಎಂ.ನಾಗೇಶ್, ತಾ.ಪಂ.ಮಾಜಿ ಸದಸ್ಯ ಬಿ.ನಾಗರಾಜ್ ಬಾಬು, ರವೀಂದ್ರನಾಥ ಗೌಡ, ಶರಣ ಬಸಪ್ಪ ಗಡಗಿ, ಮಂಜುನಾಥ್ ಬಿ.ಎನ್., ಗ್ರಾ.ಪಂ.ಮಾಜಿ ಅಧ್ಯಕ್ಷ ಬಿ.ಎಸ್.ಅನಿಲ್ ಕುಮಾರ್, ರಾಜಗೋಪಾಲ್, ನಂಜೇಮರಿ ಬಿ.ಎನ್., ಬಿ.ಎಸ್.ಸುರೇಶ್, ವೆಂಕಟರಮಣಸ್ವಾಮಿ, ಬಿ.ಎನ್.ನಾಗೇಶ್, ಸೊಣ್ಣೇಗೌಡ, ಹಸಿರೇ ಉಸಿರು ಟ್ರಸ್ಟ್ ಸಂಸ್ಥಾಪಕ ಬಿ.ಎಂ.ಶ್ರೀನಿವಾಸಮೂರ್ತಿ, ಪ್ರಸನ್ನ ಬಿ.ಜೆ.,ಗುರುಪ್ರಸಾದ್, ಸಂದೀಪ್, ನರೇಂದ್ರ, ಮೈಲಾರ ಸ್ವಾಮಿ ಸೇರಿದಂತೆ ಗ್ರಾಮಸ್ಥರಿದ್ದರು.