


ಬೆಂಗಳೂರು ಯಲಹಂಕ ಪೀಣ್ಯದಾಸರಹಳ್ಳಿ:ಬೆಂಗಳೂರು ನಗರ ಜಿಲ್ಲೆಯ ಮಾದಿಗ ಸಮುದಾಯಕ್ಕೆ ಸೇರಿದ ಮುಖಂಡರುಗಳು. ಸಭೆಯನ್ನು ಸೇರಿ. ಬೆಂಗಳೂರು ನಗರ ಜಿಲ್ಲೆ ಮಾದಿಗ ಸಮುದಾಯಕ್ಕೆ. ಕಳೆದ 40 ವರ್ಷಗಳಿಂದ. ಮಾದಿಗ ಸಮುದಾಯಕ್ಕೆ. ವಿಧಾನ ಪರಿಷತ್ತಿನಲ್ಲಿ ಅವಕಾಶವೇ ಇಲ್ಲವಾಗಿದೆ? ಆದುದರಿಂದ ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾದ. ಕೋಗಿಲು ಎಂ. ವೆಂಕಟೇಶ್ ಅವರನ್ನು ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಆಯ್ಕೆ ಮಾಡಬೇಕು ಎಂದು ಬೆಂಗಳೂರು ನಗರ ಜಿಲ್ಲೆಯ 10 ವಿಧಾನಸಭಾ ಕ್ಷೇತ್ರದ ಮುಖಂಡರುಗಳು ಒಟ್ಟಿಗೆ ಸೇರಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಭೆಯ ಸಮುದಾಯದ ಹಿರಿಯ ಮುಖಂಡರಾದ ಆರ್. ಲೋಕೇಶ್, ಎಸ್ ಸಿ ಬ್ಲಾಕ್ ಅಧ್ಯಕ್ಷರುಗಳಾದ ಬಿಂಗೆ ಭೀಮಣ್ಣ, ಅಶ್ವಥ್ ನಾರಾಯಣ್, ಬ್ಯಾತ ಗೋವಿಂದರಾಜು, ಹನುಮಂತರಾಯ, ಮಾಧ್ಯಮ ವಕ್ತಾರರಾದ ಹರೀಶ್, ಪಿಸಿಸಿ ಸದಸ್ಯರಾದ ಸೋಲ ದೇವನಹಳ್ಳಿ ವೆಂಕಟೇಶ್, ಡಾ.ನಾಗೇಶ್, ಪದ್ಮನಾಭ, ರಾಮಮೂರ್ತಿ, ಅರುಂಧತಿ ನಾಗರಾಜ್, ಕಾರ್ಮಿಕ ಘಟಕದ ಕಾರ್ಯದರ್ಶಿ ರಘು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐವರ ಕಂಡಪುರ ವೆಂಕಟೇಶ್, ವಿಜಯನಗರದ ಸಂದೀಪ್, ಬಾಗಲಗುಂಟೆ ವಾರ್ಡ್ ಎಸ್ಸಿ ಘಟಕದ ಅಧ್ಯಕ್ಷರಾದ ಮುನಿರಾಜು ಹಾಗೂ ಮುಂತಾದ ಹಿರಿಯರು ಹಾಗೂ ಮಾಜಿ ಬ್ಲಾಕ್ ಅಧ್ಯಕ್ಷರು ಭಾಗವಹಿಸಿ ಮಾದಿಗ ಸಮುದಾಯದ ಎಂ. ವೆಂಕಟೇಶ್ ಅವರಿಗೆ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.