

ಜುಲೈ 18ರಂದು ಫ್ಲಿಪ್ ಕಾರ್ಟ್ ನಲ್ಲಿ ಹೊಸ 65” ಮತ್ತು 75 ಇಂಚಿನ ಮಿನಿ ಎಲ್ಇಡಿ ಟಿವಿಗಳನ್ನು ಎಕ್ಸ್ ಕ್ಲೂಸಿವ್ ಆಗಿ ಬಿಡುಗಡೆ ಮಾಡಲಿದೆ ಥಾಮ್ಸನ್
2 ಇನ್ ಬಿಲ್ಟ್ ಸಬ್ ವೂಫರ್‌ಗಳೊಂದಿಗೆ 6-ಸ್ಪೀಕರ್ ಥಾಮ್ಸನ್ ಮಿನಿ ಎಲ್ಇಡಿ ವ್ಯವಸ್ಥೆ ಹೊಂದಿರುವ ಭಾರತದ ಮೊದಲ ಟಿವಿ
ಬೆಂಗಳೂರು, ಜುಲೈ 18, 2025: ಫ್ರಾನ್ಸ್ ನ ಪ್ರಸಿದ್ಧ ಎಲೆಕ್ಟ್ರಾನಿಕ್ಸ್ ಕಂಪನಿ ಆಗಿರುವ ಥಾಮ್ಸನ್ ಸಂಸ್ಥೆಯು ಜುಲೈ 18ರಂದು ತನ್ನ ಹೊಚ್ಚ ಹೊಸ 65” ಮತ್ತು 75 ಇಂಚಿನ ಮಿನಿ ಎಲ್ಇಡಿ ಟಿವಿ ಸರಣಿಯನ್ನು ಫ್ಲಿಪ್ ಕಾರ್ಟ್ ನಲ್ಲಿ ಎಕ್ಸ್ ಕ್ಲೂಸಿವ್ ಆಗಿ ಬಿಡುಗಡೆ ಮಾಡುತ್ತಿದೆ. ಈ ವಿಶೇಷ ಟಿವಿಯ ಮೇಲೆ ಪ್ರೇಕ್ಷಕರು ನೋಡುವ ಮತ್ತು ಕೇಳುವ ವಿಧಾನವನ್ನು ಬದಲಿಸಲಿದೆ.
ಈ ಹೊಸ ಮಿನಿ ಎಲ್ಇಡಿ ಟಿವಿಗಳು ಫ್ಲಿಪ್‌ಕಾರ್ಟ್‌ನಲ್ಲಿ ಜುಲೈ 17ರಿಂದಲೇ ಎಕ್ಸ್ ಕ್ಲೂಸಿವ್ ಆಗಿ ಲಭ್ಯವಿರಲಿವೆ. ಈ ಟಿವಿಗಳು ಕ್ರಮವಾಗಿ 61,999 ರೂ. ಮತ್ತು 95,999 ರೂ. ಬೆಲೆಯಲ್ಲಿ ದೊರೆಯಲಿದೆ. ಈ ಟಿವಿಗಳು ಲಿವಿಂಗ್ ರೂಮ್ ನ ಸೌಂದರ್ಯವನ್ನೇ ಬದಲಿಸಲಿದೆ.
ಥಾಮ್ಸನ್‌ನ ಭಾರತದ ವಿಶೇಷ ಲೈಸೆನ್ಸ್ ದಾರರಾದ ಎಸ್ ಪಿ ಪಿ ಎಲ್ ನ ಸಿಇಓ ಅವನೀತ್ ಸಿಂಗ್ ಮಾರ್ವಾಹ್ ಅವರು, “ನಾವು ಈ ಮೂಲಕ ಕೇವಲ ಟಿವಿಗಳನ್ನು ಮಾತ್ರವೇ ಬಿಡುಗಡೆ ಮಾಡುತ್ತಿಲ್ಲ, ಬದಲಿಗೆ ನಾವು ಭಾರತದ ಮನೆಗಳ ಲಿವಿಂಗ್ ರೂಮ್ ಗಳ ಭವಿಷ್ಯವನ್ನು ಬಿಡುಗಡೆ ಮಾಡುತ್ತಿದ್ದೇವೆ. ನಮ್ಮ ಹೊಸ ಮಿನಿ ಎಲ್ಇಡಿ ಶ್ರೇಣಿಯು ಡಾಲ್ಬಿ ವಿಷನ್, ಎಚ್ ಡಿ ಆರ್ 10, ಎಚ್ ಎಲ್ ಜಿ, 122 ಹರ್ಟ್ಜ್ ರಿಫ್ರೆಶ್ ರೇಟ್, 108 ವ್ಯಾಟ್ ನ ಡಾಲ್ಬಿ ಅಟ್ಮಾಸ್ ಆಡಿಯೋ ಜೊತೆಗೆ 6 ಸ್ಪೀಕರ್ ಗಳು ಮತ್ತು ಇತ್ತೀಚಿನ 5.0 ಗೂಗಲ್ ಟಿವಿ ಅನುಭವವನ್ನು ಒದಗಿಸಲಿದೆ. ಇವೆಲ್ಲವೂ ಮೇಡ್ ಇನ್ ಇಂಡಿಯಾ ಉತ್ಪನ್ನಗಳಾಗಿವೆ” ಎಂದರು.
ಫ್ಲಿಪ್‌ಕಾರ್ಟ್‌ನ ದೊಡ್ಡ ಉಪಕರಣಗಳ ವಿಭಾಗದ ಉಪಾಧ್ಯಕ್ಷ ರಾಕೇಶ್ ಕೃಷ್ಣನ್ ಅವರು, “ಭಾರತದ ಮನೆಗಳನ್ನು ಆಧುನಿಕ ಕಾಲದ ಮನೆಗಳನ್ನಾಗಿ ರೂಪಿಸಲು ಬೇಕಾಗುವ ಉತ್ಪನ್ನಗಳನ್ನು ಒದಗಿಸಲು ಫ್ಲಿಪ್‌ಕಾರ್ಟ್ ಬದ್ಧವಾಗಿದೆ” ಎಂದರು.