ಬಾಗಲೂರಿನಲ್ಲಿ ಆಟೋ ಚಾಲಕರಿಂದ ಅದ್ದೂರಿ ಕನ್ನಡ ರಾಜ್ಯೋತ್ಸವ,,,,,,
ಯಲಹಂಕ ಸುದ್ದಿ ದಿನಾಂಕ. ೧೪. ೧೧. ೨೦೨೫ ರಂದು. ಯಲಹಂಕ ತಾಲೂಕ ಜಾಲ ಹೋಬಳಿ ಬಾಗಲೂರು ಗ್ರಾಮದಲ್ಲಿ. ಅಲ್ಲಿನ ನಾಡ ಪ್ರಭು ಆಟೋ ಚಾಲಕರ ಸಂಘದ ವತಿಯಿಂದ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು, ಜಾನಪದ ಕಲೆಯ ಡೊಳ್ಳು ಕುಣಿತ ದೊಂದಿಗೆ ಸಾಂಸ್ಕೃತಿಕ ವಾಗಿ ಆರಂಭ ವಾದ ನಾಡ ಹಬ್ಬವನ್ನು ತಾಯಿ ಕನ್ನಡ ಭುವನೇಶ್ವರಿಯ ಪೂಜೆ ಯೊಂದಿಗೆ ಪ್ರಾರಂಭಿಸಿ ಊರಿನಲ್ಲಿ ಮೆರವಣಿಗೆ ಯೊಂದಿಗೆ ವಿಜೃಂಭಣೆ ಇಂದ ರಾಜ್ಯೋತ್ಸವ ಮೆರಗು ಗೊಂಡಿತು, ಇದೆ ಸಮಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡಮ್ಮನ ಸೇವಕ ಕರವೇ ರಾಜ್ಯ ಕಾರ್ಯದರ್ಶಿ ಶ್ರೀ ಆರ್ .ಸಾಥ್ನೂರು ಸುರೇಶ ರವರ ಹುಟ್ಟುಹಬ್ಬವ ನ್ನೂ ಸೇರಿಸಿ ವೈಭವ ವನ್ನು ಇನ್ನಷ್ಟು ಹೆಚ್ಚಿಸಲು ಆಯಿತು, ಕಾರ್ಯಕ್ರಮಕ್ಕೆ ಬಂದಂತಹ ಎಲ್ಲರಿಗೂ ಸನ್ಮಾನ ಕನ್ನಡ ಶಾಲೆಯ ಮಕ್ಕಳಿಗೆ ಸನ್ಮಾನ ವೂ ನಡೆದು ಅತ್ಯಾನಂಥ ಅನಂದವನ್ನು ಜನತೆಗೆ ಆಟೋ ಚಾಲಕರು ನೀಡಿದರು, ಈ ಸಂದರ್ಭ ದಲ್ಲಿ ಗ್ರಾಮದ ಪ್ರಥಮ ಪ್ರಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದ ಕೆಂಪೇಗೌಡ, ಸದಸ್ಯರಾದ ಅನಿಲ್, ಪ್ರಭು ಸ್ವಾಮಿ, ಹಾಗೂ. ಯಲಹಂಕ ಕ್ಷೇತ್ರದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಶಂಕರವರು ಹಾಗೂ ಸಾಯಿ ಕಾಂಕ್ರೀಟ್ ಮಾಲೀಕರಾದ ನಾಗಪ್ಪ ಮತ್ತು ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿದ್ದರು ಹಾಗೂ ಆಟೋ ಚಾಲಕರ ಸಂಘದ ವೆಂಕಟೇಶ್, ನರಸಾರಾಜ್, ಕೃಷ್ಣಪ್ಪ, ಮತ್ತು ಇನ್ನು ಅನೇಕ ಆಟೋ ಚಾಲಕರು ಗ್ರಾಮಸ್ಥರು ಭಾಗವಹಿಸಿದರು ಕಾರ್ಯಕ್ರಮ ನಂತರ ಎಲ್ಲರಿಗೂ ಭೋಜನಕೂಟ ವ್ಯವಸ್ಥೆ ಇತ್ತು ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumanthau kogilu layout

Yelahanka Bangalore Karnataka

9845085793.    8197181961

7349337989

Leave a Reply

Your email address will not be published. Required fields are marked *