


ಶೇಷಾದ್ರಿಪುರಂ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಆರಂಭ :
ಯಲಹಂಕ : ಹಣ ಗಳಿಸುವ ಧಾವಂತದಲ್ಲಿ ಇತ್ತೀಚೆಗೆ ಮೌಲ್ಯಾಧಾರಿತ ಶಿಕ್ಷಣ ನೇಪತ್ಯಕ್ಕೆ ಸರಿಯುತ್ತಿದೆ, ಆದರೆ ಮೌಲ್ಯಾಧಾರಿತ ಶಿಕ್ಷಣವೇ ಶಿಕ್ಷಣದ ಪರಮ ಗುರಿಯಾಗಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆ(Iisc)ಯ ಮಾಜಿ ನಿರ್ದೇಶಕರು, ಪ್ರಾಧ್ಯಾಪಕರಾದ ‘ವಿಜ್ಞಾನರತ್ನ ಪ್ರೊ.ಜಿ.ಪದ್ಮನಾಭ ಅಭಿಪ್ರಾಯಪಟ್ಟರು.
ಯಲಹಂಕದ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ‘ಬಯೋ ಟೆಕ್ನಾಲಜಿ ಪದವಿ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಕಳೆದ ಹಲವು ದಶಕಗಳಿಂದ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದ್ದು, ಇಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ದೇಶವಿದೇಶಗಳಲ್ಲಿ ಅತ್ಯುತ್ತಮ ಹುದ್ದೆಗಳನ್ನು ಅಲಂಕರಿಸುವ ಮೂಲಕ ಸಂಸ್ಥೆಗೆ ಕೀರ್ತಿ ತಂದುಕೊಟ್ಟಿದ್ದಾರೆ. ಈ ಸಾಧನೆಗೆ ಸಂಸ್ಥೆ ಮಕ್ಕಳಗೆ ನೀಡಿರುವ ಮೌಲ್ಯಾಧಾರಿತ ಶಿಕ್ಚಣವೇ ಕಾರಣ ಎಂದು ಸಂಸ್ಥೆಯ ಸೇವೆಯನ್ನು ಶ್ಲಾಘಿಸಿದರು.
ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ನಾಡೋಜ ವೂಡೇ ಪಿ.ಕೃಷ್ಣ ಅವರು ಮಾತನಾಡಿ ‘ಮೂಲ ವಿಜ್ಞಾನವೇ ಅನಾದರಕ್ಕೆ ಒಳಗಾಗಿರುವ ಇತ್ತೀಚಿನ ಬೆಳವಣಿಗೆ ಅಪಾಯಕಾರಿ. ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ವಿಜ್ಞಾನ, ತಂತ್ರಜ್ಞಾನ, ಕಲೆ, ಸಾಹಿತ್ಯ, ಸಂಸ್ಕೃತಿ ಹೀಗೆ ಅಧ್ಯಾಯನದ ಎಲ್ಲಾ ವಿಭಾಗಗಳನ್ನು ಒಳಗೊಂಡ ಸರ್ವಾಂಗೀಣ ಶಿಕ್ಚಣ ನೀಡುತ್ತಿದ್ದು, ಅದರ ಭಾಗವಾಗಿ ಇಂದು ಬಯೋ ಟೆಕ್ನಾಲಜಿ ಎಂ.ಎಸ್ಸಿ ವಿಭಾಗವನ್ನು ದೇಶದ ಮೊದಲ ವಿಜ್ಞಾನರತ್ನ ಪ್ರಶಸ್ತಿ ಪುರಸ್ಕೃತರಾದ ಡಾ.ಜಿ.ಪದ್ಮನಾಭ್ ಅವರಿಂದ ಉದ್ಘಾಟಿಸಿರುವುದು ಸಂತೋಷ ಉಂಟು ಮಾಡಿದೆ ಎಂದರು.
ಕಾರ್ಯಕ್ರಮದಲ್ಲಿ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಜಂಟಿ ಕಾರ್ಯದರ್ಶಿ ಎಸ್.ಶೇಷನಾರಾಯಣ, ಟ್ರಸ್ಟಿ ಡಬ್ಲ್ಯು.ಡಿ.ಅಶೋಕ್, ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ಎಸ್.ಎನ್.ವೆಂಕಟೇಶ್, ಬಯೋ ಟೆಕ್ನಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ಶಾಂತನುದಾಸ್, ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಎಂ.ಎಸ್.ಗೋಧಾಮಣಿ ಸೇರಿದಂತೆ ಇನ್ನಿತರ ಗಣ್ಯರಿದ್ದರು.
