


















ಶಾಸಕ ಎಸ್ ಆರ್ ವಿಶ್ವನಾಥ್ ಸೇರಿ ಹಲವು ಗಣ್ಯರಿಂದ ಶುಭ ಹಾರೈಕೆ :
ಯಲಹಂಕ : ಯಲಹಂಕ ಕ್ಷೇತ್ರದ ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಹಿರಿಯ ಬಿಜೆಪಿ ಮುಖಂಡರಾದ ಟಿ.ಮುನಿರೆಡ್ಡಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಹೊನ್ನೇನಹಳ್ಳಿಯ ಅವರ ಸ್ವಗೃಹದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಸೇರಿದಂತೆ ಹಲವು ಗಣ್ಯರು, ಬಿಜೆಪಿ ಮುಖಂಡರು ಮುನಿರೆಡ್ಡಿ ಅವರಿಗೆ ಸನ್ಮಾನಿಸಿ ಜನ್ಮದಿನದ ಶುಭ ಹಾರೈಸಿದರು.
ಇದೇ ವೇಳೆ ಸಿಂಗನಾಯಕನಹಳ್ಳಿ ಗ್ರಾಮ ಪಂಚಾಯಿತಿ ಸ್ವಚ್ಛತಾ ಸಿಬ್ಬಂದಿಗಳು ಸಹ ಟಿ.ಮುನಿರೆಡ್ಡಿ ಅವರಿಗೆ ಸನ್ಮಾನಿಸಿ ಜನ್ಮದಿನದ ಶುಭ ಹಾರೈಸುವ ಮೂಲಕ ತಮ್ಮ ಅಭಿಮಾನ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ವಿಶ್ವನಾಥಪುರ ಮಂಜುನಾಥ್, ಡಿ.ಜಿ.ಅಪ್ಪಯ್ಯಣ್ಣ, ಚೊಕ್ಕನಹಳ್ಳಿ ವೆಂಕಟೇಶ್, ಕೇಶವಮೂರ್ತಿ, ಹೆಚ್.ಸಿ.ರಾಜೇಶ್, ಎಸ್.ಜಿ. ಪ್ರಶಾಂತ್ ರೆಡ್ಡಿ, ಎಸ್ ಜಿ ನರಸಿಂಹಮೂರ್ತಿ, ಹೊನ್ನೇನಹಳ್ಳಿ ರಾಜಣ್ಣ, ಶಿವಾನಂದ್, ಮಾದಪ್ಪನಹಳ್ಳಿ ಕೃಷ್ಣಮೂರ್ತಿ, ಗೋವಿಂದರಾಜು, ಎನ್.ಜಗದೀಶ್, ರಾಜೇಂದ್ರ ಬೖರಾಪುರ, ಸತೀಶ್ ರೆಡ್ಡಿ, ಸೇರಿದಂತೆ ಇನ್ನಿತರಿದ್ದರು.
