ಸಿ.ಹೆಚ್.ಬಿ ಗ್ರೂಪ್ ವತಿಯಿಂದ ಅದ್ಧೂರಿ 20ನೇ ವರ್ಷದ. ಗಣೇಶ ವಾರ್ಷಿಕೋತ್ಸವ: ಅಗ್ರಹಾರ ಬಡಾವಣೆಯಲ್ಲಿ ಸಪ್ತಾಹ ಕಾರ್ಯಕ್ರಮಗಳ ಆಯೋಜನೆ
ಬೆಂಗಳೂರು — ಅಗ್ರಹಾರ ಬಡಾವಣೆಯ ಕಾಲಪ್ಪ ರೆಡ್ಡಿ ರಸ್ತೆಯಲ್ಲಿ (ಬೆಂಗಳೂರು-64) ಸಿ.ಹೆಚ್.ಬಿ ಗ್ರೂಪ್ ವತಿಯಿಂದ ಗೌರಿ ಗಣೇಶ ಹಬ್ಬದ ಅಂಗವಾಗಿ ಅದ್ಧೂರಿ ಗಣೇಶ ವಾರ್ಷಿಕೋತ್ಸವ ಮತ್ತು ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾಂಗ್ರೆಸ್ ಮುಖಂಡ ಹಾಗೂ ಸಿ.ಹೆಚ್.ಬಿ ಗ್ರೂಪ್ ಸಂಸ್ಥಾಪಕರಾದ ಚಂದ್ರಣ್ಣ (ಚೋಕ್ಕನಹಳ್ಳಿ) ಅವರ ನೇತೃತ್ವದಲ್ಲಿ ಈ ಧಾರ್ಮಿಕ ಮತ್ತು ಸಾಮಾಜಿಕ ಸಪ್ತಾಹ ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತ ಆಹ್ವಾನ ನೀಡಲಾಗಿದೆ.
ಕಾರ್ಯಕ್ರಮಗಳ ವಿವರ:
14-09-2026 (ಸಂಜೆ 6:00 ಗಂಟೆಗೆ): ಗಣೇಶನ ಪೂಜೆ ಮತ್ತು ಕಾರ್ಯಕ್ರಮದ ಶುಭಾರಂಭ
15-09-2026: ಗಣೇಶನ ಹೋಮ
17-09-2026: ಸಾರ್ವಜನಿಕ ರಂಗೋಲಿ ಸ್ಪರ್ಧೆ
18-09-2026: ಸಾಂಪ್ರದಾಯಿಕ ಬಾಗಿನ ಕಾರ್ಯಕ್ರಮ
19-09-2026: ಜನಸೇವಾ ಮತ್ತು ಆರೋಗ್ಯ ಕಾರ್ಯಕ್ರಮಗಳು:
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ
ಬೃಹತ್ ರಕ್ತದಾನ ಶಿಬಿರ
ಉಚಿತ ಕಣ್ಣಿನ ತಪಾಸಣೆ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆ ಶಿಬಿರ
20-09-2026: ಅದ್ಧೂರಿ ಗಣೇಶನ ವಿಸರ್ಜನೆ
ಸಿ.ಹೆಚ್.ಬಿ ಗ್ರೂಪ್, ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಅಂಜನ ಅಕ್ಷಯ ಡೆವಲಪರ್ಸ್ ಹಾಗೂ ಅರುಂಧತಿ ಸೇವಾ ನೌಕರರ ಸಂಘದ ನಿರ್ದೇಶಕರು ಮತ್ತು ಪದಾಧಿಕಾರಿಗಳು ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ಕೋರಿ, ಕಾರ್ಯಕ್ರಮಕ್ಕೆ ಆದರದ ಸುಸ್ವಾಗತ ಬಯಸಿದ್ದಾರೆ. ಭಕ್ತಾದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿ

Leave a Reply

Your email address will not be published. Required fields are marked *