ತಾಲೂಕು ಮಟ್ಟದ ಉತ್ತಮ ಮುಖ್ಯೋಪಾಧ್ಯಾಯರ ಪ್ರಶಸ್ತಿಗೆ ಪ್ರಮೀಳಾ ರಾಜೇಶ್

ಬೆಂಗಳೂರು ಯಲಹಂಕ : ದಿನಾಂಕ. 12. 09. 2026. ರಂದು ಆಕ್ಸ್ಫರ್ಡ್ ಶಾಲೆ ಹಾಗೂ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ರಾಜೇಶ್ ಅವರು 2026–27ನೇ ಸಾಲಿನ ತಾಲೂಕು ಮಟ್ಟದ ಉತ್ತಮ ಮುಖ್ಯೋಪಾಧ್ಯಾಯರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ, ಸಮರ್ಪಣೆ ಹಾಗೂ ಪರಿಣಾಮಕಾರಿ ನಾಯಕತ್ವವನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ಲಭಿಸಿರುವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ.

ಪ್ರಮೀಳಾ ರಾಜೇಶ್ ಅವರ ಸಾಧನೆಗೆ ಆಕ್ಸ್ಫರ್ಡ್ ಸ್ಕೂಲ್‌ನ ಶಿಕ್ಷಕ ವೃಂದದವರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಅವರ ಶೈಕ್ಷಣಿಕ ಸೇವೆ ಹಾಗೂ ನಾಯಕತ್ವ ಇನ್ನಷ್ಟು ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *