






ಸಿಂಧಿ ಮಹಾವಿದ್ಯಾಲಯದಲ್ಲಿ ‘ಕ್ರೆಸಿಂಡೋ 2K26 – ತಾಂಡವ್’ ವೈಭವದ ಸಾಂಸ್ಕೃತಿಕ ಹಬ್ಬ
ಬೆಂಗಳೂರು ಯಲಹಂಕ ಸುದ್ದಿ : ದಿನಾಂಕ 17 ಹಾಗೂ 18. ೦9. 2026ರಂದು ಹೆಬ್ಬಾಳದ ಕೆಂಪಾಪುರದಲ್ಲಿರುವ ಸಿಂಧಿ ಮಹಾವಿದ್ಯಾಲಯದಲ್ಲಿ “ಕ್ರೆಸಿಂಡೋ 2K26 – ತಾಂಡವ್” (Cresindo 2k26 Tandav) ಎಂಬ ಬೃಹತ್ ಅಂತರ ಕಾಲೇಜು ಸಾಂಸ್ಕೃತಿಕ ಉತ್ಸವಕ್ಕೆ ಅತ್ಯಂತ ವಿಜೃಂಭಣೆಯಿಂದ ಚಾಲನೆ
ಈ ಸಾಂಸ್ಕೃತಿಕ ಹಬ್ಬದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದು, ಕಾರ್ಯಕ್ರಮವನ್ನು ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ‘ತಾಂಡವ್’ ಕಲ್ಪನೆಯೊಂದಿಗೆ ಆಯೋಜಿಸಲಾದ ಈ ಉತ್ಸವದಲ್ಲಿ ವಿದ್ಯಾರ್ಥಿಗಳು ಶಿವನ ವೇಷಭೂಷಣ ತೊಟ್ಟು, ತ್ರಿಶೂಲಗಳನ್ನು ಹಿಡಿದು ಪ್ರದರ್ಶಿಸಿದ ನೃತ್ಯ ರೂಪಕವು ಪ್ರೇಕ್ಷಕರ ಮನಸೂರೆಯೊಪ್ಪಿತು.
ಹಬ್ಬದಲ್ಲಿ ಸೋಲೋ ನೃತ್ಯ, ಸಮೂಹ ನೃತ್ಯ, ಫ್ಯಾಷನ್ ಶೋ, ಮೇಕಪ್/ಮೆಹಂದಿ, ರಂಗೋಲಿ, ಹಾಡುಗಾರಿಕೆ ಸೇರಿದಂತೆ ಒಟ್ಟು 27 ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಆಕರ್ಷಕ ನಗದು ಬಹುಮಾನ: ವಿಜೇತ ವಿದ್ಯಾರ್ಥಿಗಳಿಗೆ ಒಟ್ಟು ₹2.5 ಲಕ್ಷ ಮೌಲ್ಯದ ನಗದು ಬಹುಮಾನಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಫ್ಯಾಷನ್ ಶೋ ಒಂದಕ್ಕೇ ವಿಶೇಷವಾಗಿ ₹60,000 ನಗದು ಬಹುಮಾನ ಮೀಸಲಿಡಲಾಗಿದೆ.
ಈ ಉತ್ಸವದಲ್ಲಿ ನೂರಾರು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದು, ಕಾಲೇಜು ಆವರಣದಲ್ಲಿ ಸಂಭ್ರಮದ ವಾತಾವರಣ ನೆಲೆಸಿದೆ.
