










ಜನಸೇವೆಯ ಸಂಭ್ರಮ : ಕ್ಷೇತ್ರದ ಜನರೊಂದಿಗೆ ಎ.ರವಿ ಹುಟ್ಟುಹಬ್ಬ ಆಚರಣೆ
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಹಿರಿಯ ಬಿಜೆಪಿ ಮುಖಂಡರು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎ.ರವಿ ಅವರು ತಮ್ಮ ಹುಟ್ಟು ಹಬ್ಬವನ್ನು ‘ಜನಸೇವೆಯ ಸಂಭ್ರಮಾಚರಣೆ’ ಶೀರ್ಷಿಕೆಯ ಅಡಿಯಲ್ಲಿ ಕ್ಷೇತ್ರದ ಗ್ರಾಮಾಂತರ ಭಾಗದ ವಿವಿಧ ಗ್ರಾಮಗಳು ಮತ್ತು ಜಿಬಿಎ ವ್ಯಾಪ್ತಿಯ ವಿವಿಧ ವಾರ್ಡ್ ಗಳ ಜನತೆ, ಮುಖಂಡರು, ಹಿತೈಷಿಗಳು, ಸ್ನೇಹಿತರು, ಬಂಧುಗಳು ಮತ್ತು ಅಭಿಮಾನಿಗಳೊಂದಿಗೆ ಅರ್ಥಪೂರ್ಣ ರೀತಿಯಲ್ಲಿ ಆಚರಿಸಿಕೊಂಡರು.
ಹುಟ್ಟುಹಬ್ಬದ ವಿಶೇಷ ಕಾರ್ಯಕ್ರಮದ ಅಂಗವಾಗಿ ಬ್ಯಾಟರಾಯನಪುರ ಕ್ಷೇತ್ರದ ಹುಣಸಮಾರನಹಳ್ಳಿಯ ಶ್ರೀ ಚಂದ್ರಮೌಳೇಶ್ವರ ಸ್ವಾಮಿ ದೇವಸ್ಥಾನ, ಬೆಟ್ಟಹಲಸೂರು ಗ್ರಾಮದ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನ, ವಿದ್ಯಾನಗರ ಕ್ರಾಸ್ ನ ಶ್ರೀ ಮಾರಮ್ಮ ದೇವಸ್ಥಾನ, ಉತ್ತನಹಳ್ಳಿ ಬೆಟ್ಟದ ಶ್ರೀ ಅಕ್ಕಯ್ಯಮ್ಮ ದೇವಸ್ಥಾನ, ಮಾರನಹಳ್ಳಿಯ ಈಶ್ವರ ದೇವಸ್ಥಾನ, ಬಾಗಲೂರು ಸರ್ಕಲ್ ನ ಶ್ರೀ ಊರಮ್ಮನವರ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಆಯಾ ಗ್ರಾಮಗಳ ಬಿಜೆಪಿ ಕಾರ್ಯಕರ್ತರು, ಮುಖಂಡರು ಅಭಿಮಾನಿಗಳ ನೇತೃತ್ವದಲ್ಲಿ ವಿಶೇಷ ಪೂಜೆ, ಪ್ರಸಾದ ವಿನಿಯೋಗ ಕಾರ್ಯಕ್ರಮ ಗಳನ್ನು ಆಯೋಜಿಸಲಾಗಿತ್ತು.
ಇದೇ ವೇಳೆ ಬೆಟ್ಟಹಲಸೂರು ಗ್ರಾಮಕ್ಕೆ ಭೇಟಿ ನೀಡಿದ ಎ.ರವಿ ಅವರನ್ನು ಗ್ರಾಮದ ಬಿಜೆಪಿ ಮುಖಂಡರು, ಹಿತೈಷಿಗಳು, ಅಭಿಮಾನಿಗಳು ಹೃತ್ಪೂರ್ವಕವಾಗಿ ಸ್ವಾಗತಿಸಿ, ಕೇಕ್ ಕತ್ತರಿಸಿ, ಗೌರವ ಸನ್ಮಾನ ನೀಡಿ ಜನ್ಮದಿನದ ಶುಭ ಹಾರೈಸಿದರು.
ಈ ವೇಳೆ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಎ.ರವಿ ಅವರು
‘ಹುಟ್ಟುಹಬ್ಬವೆಂದರೆ ಕೇವಲ ಒಂದು ಸಂಭ್ರಮವಲ್ಲ ಅದು ಜನರೊಂದಿಗೆ ಬೆರೆಯುವ, ಸಮಾಜಕ್ಕೆ ಒಳಿತನ್ನು ಬಯಸುವ, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳ ಮೂಲಕ ಜನರ ಆಶೀರ್ವಾದ ಪಡೆಯುವ ಸುದಿನ. ಕಳೆದ 20 ವರ್ಷಗಳಿಂದ ಬ್ಯಾಟರಾಯನಪುರ ಕ್ಷೇತ್ರದ ಸಹೃದಯಿ ಜನತೆ ನನ್ನ ಮೇಲೆ ಅಪಾರ ಪ್ರೀತಿ ತೋರಿದ್ದಾರೆ, ರಾಜಕೀಯವಾಗಿ ಬೆಳೆಸಿದ್ದಾರೆ, ಅವರ ಋಣ ನನ್ನ ಮೇಲಿದೆ, ಅವರು ತೋರಿರುವ ಪ್ರೀತಿ, ,ನೀಡಿರುವ ಸಹಕಾರವನ್ನು ಮರೆಯಲಾರೆ. ನನ್ನ ಬದುಕನ್ನು ಬ್ಯಾಟರಾಯನಪುರ ಕ್ಷೇತ್ರದ ಜನತೆಯ ಸೇವೆಗಾಗಿಯೇ ಮೀಸಲಿಡುತ್ತೇನೆ. ಜನರ ಆಶೀರ್ವಾದ ಮತ್ತು ಉಪಸ್ಥಿತಿಯೇ ನನಗೆ ಬಹುದೊಡ್ಡ ಶಕ್ತಿ, ನನ್ನ ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸುತ್ತಿರುವ ಬ್ಯಾಟರಾಯನಪುರ ಕ್ಷೇತ್ರದ ನಾಗರಿಕ ಬಂಧುಗಳಿಗೆ ಅನಂತ ಧನ್ಯವಾದಗಳು, ನಿಮ್ಮ ಪ್ರತಿ ಸಹಕಾರವೇ ನನಗೆ ಸ್ಪೂರ್ತಿ, ಎಂದೆಂದಿಗೂ ನಿಮ್ಮ ಪ್ರೀತಿ, ವಿಶ್ವಾಸ ಹೀಗೆಯೇ ಇರಲಿ ಎಂದರು.
ಇದೇ ಸಂದರ್ಭದಲ್ಲಿ ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಬಿಜೆಪಿ ಮಾಜಿ ಅಧ್ಯಕ್ಷ ಟಿ.ಪಿ.ಪ್ರಕಾಶ್, ಬೆಟ್ಟಹಲಸೂರು ಗ್ರಾ.ಪಂ.ಅಧ್ಯಕ್ಷೆ ಹೇಮಾವತಿ ನಾಗರಾಜ್ ಬಾಬು, ತಾ.ಪಂ.ಮಾಜಿ ಸದಸ್ಯ ನಾಗರಾಜ್ ಬಾಬು, ಮುಖಂಡರಾದ ಬಿ.ಬಸವರಾಜು, ಹಿರಿಯಾಳ್ ಚಿತ್ರಶೇಖರ್, ಗುರುಪ್ರಸಾದ್, ಶಿವರಾಜ್(ಶಿವು), ವೈಭವ್, ಗ್ರಾ.ಪಂ.ಸದಸ್ಯ ಬಿ.ಆರ್.ರಾಮಾಂಜಿನಪ್ಪ, ಬೆಟ್ಟಹಲಸೂರು ಶ್ರೀನಿವಾಸಮೂರ್ತಿ(ಹಸಿರೇ ಉಸಿರು) ಸೇರಿದಂತೆ ಇನ್ನಿತರರಿದ್ದರು.
