ಬೆಂಗಳೂರು ಸುದ್ದಿ
75 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ಮಾಡಿದ ಡಾ. ಮಲ್ಲಿಕಾರ್ಜುನ ಸ್ವಾಮಿ ಸುಬೇದಾರ ಮೇಜರ್ ನಿವೃತ್ತ ಅಧಿಕಾರಿಗಳು ಹಾಗೂ ನಿವೃತ್ತ ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಉದ್ದೇಷಿಸಿ ಮಾತನಾಡುತ್ತಾ ದೇಶದ ಭದ್ರತೆಗಾಗಿ ರಕ್ಷಣಾ ಪಡೆಗಳು ಮುಖ್ಯವಾಗಿದ್ದು ಇಂತಹ ಸೇವೆಗಳ ಮೂಲಕ ರಾಷ್ಟ್ರಕ್ಕೆ ತಾವು ಕೊಡುಗೆ ನೀಡಬೇಕೆಂದು ತಿಳಿಸಿದರು. ಬಸವೇಶ್ವರಸಮೂಹ ಸಂಸ್ಥೆಗಳು ಒಗ್ಗಟ್ಟಿನಿಂದ ಆಯೋಜಿಸಲಾದ ಸಭಾರಂಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಎಸ್ಎಸ್ ದೊಡ್ಡಣ್ಣನವರ .. ಶ್ರೀ ಹಂಚಿ.. ಶ್ರೀರವಿಶಂಕರ ದೊಡ್ಡಮನಿ.. ಶ್ರೀ ಮಂಜುನಾಥ ಹೆಚ್ ಪ್ರಾಂಶುಪಾಲರಾದ ಡಾ.ಶೀಲಾ ದೇವಿ ಎಸ್ ಮಳಿಮಠ, ಶ್ರೀಚಿಗರಿ ವೆಂಕಟೇಶ.. ಶ್ರೀಉಮೇಶ ಆರಾಧ್ಯ ಶ್ರೀಕುಮಾರ ಮುಂತಾದವರು ಉಪಸ್ಥಿತರಿದ್ದರು. ಬಸವೇಶ್ವರ ವಾಣಿಜ್ಯಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಕುಮಾರಿ ಶಾಂಭವಿ ಭಟ್ ಹಾಗೂ ಶ್ರೀಮತಿ ರೂಪಶ್ರೀಯವರ ದೇಶಭಕ್ತಿ ಗೀತೆಯನ್ನು ಹಾಡಿ ಸಭಿಕರಿಗೆ ರಾಷ್ಟ್ರವ್ರಜ್ಞೆಯ ಮೂಲಕ ಗಣರಾಜ್ಯೋತ್ಸವ ಸಮಾರಂಭವು ಗೀತೆಯ ಮೂಲಕ.. ಸಂಪನ್ನಗೊಂಡಿತು

Leave a Reply

Your email address will not be published. Required fields are marked *