ಮಾರೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ‘ಕೈ’ ವಶ’ :

ಬ್ಯಾಟರಾಯನಪುರ : ಕ್ಷೇತ್ರದ ಜಾಲ ಹೋಬಳಿಯ ‘ಮಾರೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ’ದ ನಿರ್ದೇಶಕರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ  ಕಾಂಗ್ರೆಸ್ ಬೆಂಬಲಿತ ಎಲ್ಲಾ 11 ಅಭ್ಯರ್ಥಿಗಳು ಗೆಲ್ಲುವ ಮೂಲಕ ಸಹಕಾರ ಸಂಘವು ‘ಕೈ’ ವಶವಾಗಿದೆ.

ಸಹಕಾರ ಸಂಘದ ನಿರ್ದೇಶಕರ ಆಯ್ಕೆಗಾಗಿ ಜ.11ರಂದು ಚುನಾವಣೆ ನಡೆದಿತ್ತು, ಆದರೆ ಕೆಲ ಅಭ್ಯರ್ಥಿಗಳು ಮತಗಳ ಎಣಿಕೆ ವಿಷಯದಲ್ಲಿ ಹೈ ಕೋರ್ಟ್‌ ಮೆಟ್ಟಿಲು ಏರಿದ್ದರಿಂದ ಫಲಿತಾಂಶ ಹೊರಬಿದ್ದಿರಲಿಲ್ಲ. ಸದರಿ ವಿಷಯ ಕುರಿತು ಹೈಕೋರ್ಟ್ ಜ.25ರಂದು ಮದ್ಯಂತರ ಆದೇಶ ತೆರವುಗೊಳಿಸಿ,  ಫೆ.6ರಂದು ಮತಗಳ ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸುವಂತೆ ನಿರ್ದೇಶನ ನೀಡಿದ್ದ ಹಿನ್ನೆಲೆಯಲ್ಲಿ ಗುರುವಾರ ಮತ ಎಣಿಕೆ ಕಾರ್ಯ ಕೈಗೊಂಡು, ಫಲಿತಾಂಶ ಪ್ರಕಟಿಸಿದ್ದು, ಫಲಿತಾಂಶದಲ್ಲಿ ಕಾಂಗ್ರೆಸ್ ಬೆಂಬಲಿತ ಎಲ್ಲಾ 11 ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸುವ ಮೂಲಕ ಸಹಕಾರ ಸಂಘ ಕೈ ವಶವಾಗಿದೆ.

ಗೆಲುವು ಸಾಧಿಸಿದ ನೂತನ ನಿರ್ದೇಶಕರನ್ನು ಹಲವು ಕಾಂಗ್ರೆಸ್ ಮುಖಂಡರು, ಗ್ರಾಮಸ್ಥರು ಅಭಿನಂದಿಸಿ, ಶುಭ ಹಾರೈಸಿದರು.

ಇದೇ ವೇಳೆ ತಾಲ್ಲೂಕು ಭೂನ್ಯಾಯ ಮಂಡಳಿ ಸದಸ್ಯರಾದ ನಾಗರಾಜ್ ಮಾತನಾಡಿ ‘ಇದೊಂದು ಅಭೂತಪೂರ್ವ ಗೆಲುವು, ಈ ಗೆಲುವಿನೊಂದಿಗೆ ಮಾರೇನಹಳ್ಳಿ ಯಲ್ಲಿ ಕಾಂಗ್ರೆಸ್ ಪಕ್ಷ ಇನ್ನೂ ಹೆಚ್ಚು ಬಲಗೊಂಡಿದೆ. ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರ ಸಲಹೆ, ಮಾರ್ಗದರ್ಶನದಲ್ಲಿ ಚುನಾವಣಾ ಸ್ಪರ್ಧೆ ನಡೆಸ ಲಾಗಿದ್ದು, ಈ ಗೆಲುವು ಕಾಂಗ್ರೆಸ್ ಪಕ್ಷದ ಗೆಲುವು, ಕೃಷ್ಣಬೈರೇಗೌಡರ ಗೆಲುವು ಎಂದು ವಿಶ್ಲೇಷಿಸುತ್ತೇನೆ. ಇಂದು  ನೂತನವಾಗಿ ಆಯ್ಕೆಯಾ ಗಿರುವ ನಿರ್ದೇಶಕರು ಉತ್ತಮ ಅಭಿವೃದ್ಧಿ ಕಾರ್ಯಗಳ, ಪಾರ ದರ್ಶಕ ಆಡಳಿತ ಮತ್ತು ಒಗ್ಗಟ್ಟಿನ ತೀರ್ಮಾನಗಳ ಮೂಲಕ ಸಹಕಾರ ಸಂಘವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಮಾರೇನಹಳ್ಳಿ ಗ್ರಾ.ಪಂ‌.ಮಾಜಿ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರಾದ ಆಂಜಿನಪ್ಪ (ಪುಟ್ಟು), ಚೊಕ್ಕನಹಳ್ಳಿ ನಂಜೇಗೌಡ, ಡಿ.ಎಂ.ಚೌಡಪ್ಪ, ಗ್ರಾ.ಪಂ.ಹಾಲಿ ಅಧ್ಯಕ್ಷ ಪಿ.ರಾಹುಲ್‌, ಸದಸ್ಯರಾದ ಗೀತಾ ಆನಂದ್ ಕುಮಾರ್ ಸಹಕಾರ ಸಂಘದ ನೂತನ ನಿರ್ದೇಶಕರಾದ ಮುನಿರಾಜು ಸಿ., ಜಗದೀಶ್ ಎನ್., ನಂಜಪ್ಪ, ಚಿಕ್ಕಪ್ಪಯ್ಯ ಸಿ.ಕೆ., ಸತೀಶ್ ಜೆ., ರಾಜಣ್ಣ ಎಚ್., ಬಾಲರಾಜು ವಿ., ಮುನೇಗೌಡ, ಮಂಜುನಾಥ್ ಪಿ., ಭಾಗ್ಯಮ್ಮ, ಚನ್ನಲಕ್ಷ್ಮಮ್ಮ, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಸತೀಶ್, ಅವಿನಾಶ್, ಲೋಕೇಶ್, ಎಂ ಆರ್ ಎಸ್ ವಿಶ್ವ, ದಾಸನಾಯಕನಹಳ್ಳಿ ಗೋಪಾಲ್, ಮಂಜುನಾಥ್(ಪೊಲೀಸ್), ಬಲ್ಲಯ್ಯ, ಎಂ.ಪಿ. ವಿಶ್ವನಾಥ್, ಯುವ ಮುಖಂಡರಾದ ಮುರಳಿ(ಬಾಬು), ಚೊಕ್ಕನಹಳ್ಳಿ ಮುರಳಿ, ಎಂ.ಆರ್.ಕೆ. ಕುಮಾರ್, ಶರತ್ ಸೇರಿದಂತೆ ಗ್ರಾಮಸ್ಥರಿದ್ದರು.

Leave a Reply

Your email address will not be published. Required fields are marked *