

ವರದಿ: ಮುಬಷಿರ್ ಅಹಮದ್
ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ಹಾಗೂ ಕಲಿಕಾ ಸಾಮಗ್ರಿ ವಿತರಣೆ ಮಾಡಿದ
ಸಮಾಜ ಸೇವಕ ಯುವ ಮುಖಂಡ ಕಣಜೇನಹಳ್ಳಿ ಸುಹಾಸ್
ಚಿಕ್ಕಬಳ್ಳಾಪುರ:ಸಂಪಾದನೆಯ ಒಂದಿಷ್ಟು ಭಾಗ ಸಮಾಜ
ಸೇವಕ್ಕೆ ಮುಡಿಪಾಗಿಡುವ ಭಾವನೆ ಎಲ್ಲರಲ್ಲಿ ಬರಬೇಕು ಸಮಾಜಸೇವೆಯ ಭಾವನೆ ಹೊಂದಿರುವ ವ್ಯಕ್ತಿ ಒಳ್ಳೆಯ ನಾಗರೀಕನಾಗಿ ಬೆಳೆಯುತ್ತಾನೆ ಅಂತಹದೆ ಸಾಮಾಜಿಕ ಕಳಕಳಿಯೊಂದಿಗೆ ತಿಪ್ಪೇನಹಳ್ಳಿ ಗ್ರಾಪಂ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆ ಮಕ್ಕಳಿಗೆ ಕಲಿಕಾ ಸಾಮಗ್ರಿ ಹಾಗೂ ಬ್ಯಾಗ್ ನೀಡುತ್ತಿರುವ ಕಣಜೇನಹಳ್ಳಿ ಸುಹಾಸ್ ಅವರ ಕಾರ್ಯ ಶ್ಲಾಘನೀಯ ಎಂದು ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್. ಬಿ ರೆಡ್ಡಿ ತಿಳಿಸಿದರು.
ಅವರು ಶುಕ್ರವಾರ ಸಮಾಜ ಸೇವಕ ಯುವ ಮುಖಂಡ ಕಣಜೇನಹಳ್ಳಿ ಸುಹಾಸ್ ರವರಿಂದ ತಾಲ್ಲೂಕಿನ ತಿಪ್ಪೇನಹಳ್ಳಿ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ಹಾಗೂ ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕಡಿಮೆ ಬಗ್ಗೆ ಮಾತನಾಡಿದ ಅವರು ಸರ್ಕಾರಿ ಶಾಲೆಗಳಲ್ಲಿ ವ್ಯವಸ್ಥೆಗಳನ್ನು ಸರಿಪಡಿಸಲು ಪರಸ್ಪರ ಸಹಕಾರದಿಂದ ಸಾಧ್ಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ವರ್ಗ ಮಕ್ಕಳ ಉಜ್ವಲ ಭವಿಷ್ಯಕ್ಕೆ ಕಾಳಜಿ ವಹಿಸಿದೆ ಪಾಠ ಪ್ರವಚನ ನೀಡಿ ಶಿಸ್ತು ಸಮಯ ಪಾಲನೆಗೂ ಒತ್ತು ನೀಡುತ್ತಿದ್ದಾರೆ.ಆದರೆ ಎಲ್ಲೊ ಒಂದು ಕಡೆ ಜನರ ಭರವಸೆ ಗಿಟ್ಟಿಸಲು ಸಾಧ್ಯವಾಗುತ್ತಿಲ್ಲ ಸರ್ಕಾರಿ ಶಾಲೆಗಳಲ್ಲಿ ಇನ್ನಷ್ಟು ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ವಾತಾವರಣ ನಿರ್ಮಾಣ ಮಾಡಿದರೆ ಪೋಷಕರ ಭರವಸೆಯನ್ನು ಗಿಟ್ಟಿಸಿದರೆ ಖಂಡಿತವಾಗಿಯೂ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ.ಈ ಸಂಭಂದಪಟ್ಟಾಗಿ ಅಧಿಕಾರಿಗಳ, ಹಾಗೂ ಶಿಕ್ಷಕರ ವರ್ಗ ಪರಸ್ಪರ ಸಹಕಾರದೊಂದಿಗೆ ಇತ್ತ ಗಮನ ಹರಿಸಿ ಸರಿಪಡಿಸಬೇಕೆಂದರು. ಪೋಷಕರು ಕೇವಲ ಶಾಲೆಗೆ ಕಳಿಸಿದರೆ ಸಾಲದು ಶಾಲೆಗೆ ಭೇಟಿ ನೀಡಿ ಹಾಜರಾತಿ ಬಗ್ಗೆ ತಿಳಿದುಕೊಳ್ಳಿ, ಮಕ್ಕಳ ಮೇಲೆ ನಿಗಾವಹಿಸಿ ಎಂದ ಅವರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದವರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸರ್ಕಾರಿ ಶಾಲೆಗಳು ಸಮಾಜಕ್ಕೆ ಒಳ್ಳೆಯ ಜನರನ್ನೂ ನೀಡಿದೆ ಎಂದರು.
ಇನ್ನೂ ಯುವ ಮುಖಂಡ ಕಣಜೇನಹಳ್ಳಿ ಸುಹಾಸ್ ಮಾತನಾಡಿ ಶಿಕ್ಷಣ ಆರೋಗ್ಯ ಸಂಭಂದಪಟ್ಟಾಗಿ ಹಲವಾರು ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಸಂದೀಪ್. ಬಿ ರೆಡ್ಡಿ ನಮಗೆ ಪ್ರೇರಣೆ ಅವರ ಸಾಮಾಜಿಕ ಕಳಕಳಿ ನಮ್ಮೆಲ್ಲರಿಗೆ ಆದರ್ಶ ಅವರ ಕೆಲಸ ಕಾರ್ಯಗಳು ಯುವ ಸಮುದಾಯದ ಮೇಲೆ ಒಳ್ಳೆಯ ಪ್ರಭಾವ ಬೀರಿದೆ ಅವರನ್ನು ಸ್ಪೂರ್ತಿಯಾಗಿಟ್ಟಿಕೊಂಡು ನಾವು ಕೂಡ ಸಮಾಜ ಸೇವೆಯಲ್ಲಿ ತೂಡಗಿಸಿಕೊಂಡಿದ್ದೇವೆ ಅದರ ಭಾಗವಾಗಿ ಇಂದ ತಿಪ್ಪೇನಹಳ್ಳಿ ಗ್ರಾಪಂ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿ ಹಾಗೂ ಬ್ಯಾಗ್ ವಿತರಿಸಿದ್ದು ಸಮಾಜ ಸೇವೆ ಮುಂದುವರಿಯಲಿದೆ
ಎಂದರು.ಈ ಸಂದರ್ಭದಲ್ಲಿ ಆನೆಮಡುಗು ಹರೀಶ್,ಶ್ರೀ ರಾಮಪುರ ಶಶಿಕುಮಾರ್,
ಹರ್ಷ, ರಘು ಮತ್ತು ಇತರರು ಉಪಸ್ಥಿತರಿದ್ದರು.