
ಸ್ವೆಟ್ ಅಂಡ್ ಕಾಂಕ್ರೀಟ್: ಬಿಸಿಯ ಒತ್ತಡಕ್ಕೆ ಸಮುದಾಯ ಕೇಂದ್ರಿತ ಪರಿಹಾರಗಳನ್ನು ತಂದ 2 ದಿನಗಳ ಕಾರ್ಯಕ್ರಮ
ಪರ್ಪಸ್ ನ ಪೀಪಲ್ ಫರ್ಸ್ಟ್ ಉಪಕ್ರಮವಾಗಿ ನಡೆದ ಈ ಪ್ರದರ್ಶನವು ಕಳೆದ ವರ್ಷದ ಅಭಿಯಾನದ ಮೇಲೆ ನಿರ್ಮಿಸಲಾಗಿದ್ದು ಅನೌಪಚಾರಿಕ ಕಟ್ಟಡ ಕೆಲಸಗಾರರು, ವ್ಯಾಪಾರಿಗಳು, ಬೀದಿ ವ್ಯಾಪಾರಿಗಳು, ಮನೆಕೆಲಸದವರು, ಡೆಲಿವರಿ ಸಿಬ್ಬಂದಿ, ಆಟೊ ಚಾಲಕರು ಮತ್ತು ನಗರ ನಡೆಯುವಂತೆ ಮಾಡುವ ಲಕ್ಷಾಂತರ ಇತರರಲ್ಲಿ ಬಿಸಿಯ ಒತ್ತಡದ ಸಮಸ್ಯೆಗೆ ಆದ್ಯತೆ ನೀಡಿತು.
ಬೆಂಗಳೂರು, ಜೂನ್ 05, 2025: ಹೆಚ್ಚುತ್ತಿರುವ ಉಷ್ಣತೆ ಹಾಗೂ ತೀವ್ರ ಬಿಸಿಗಾಳಿಗಳಿಂದ ಉಂಟಾಗುತ್ತಿರುವ ಸಾರ್ವಜನಿಕ ಆರೋಗ್ಯದ ಬಿಕ್ಕಟ್ಟಿಗೆ ಪ್ರತಿಕ್ರಿಯಿಸಲು ಎರಡು ದಿನಗಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದು ಭಾರತದ ನಗರದ ಸವಾಲುಗಳಲ್ಲಿ ಅತ್ಯಂತ ಪ್ರಮುಖವಾದ ಬಿಸಿಯ ಒತ್ತಡ ಮತ್ತು ವಸತಿ, ತಂಪಾಗಿಸುವಿಕೆ ನೀರು ಮತ್ತು ನೈರ್ಮಲ್ಯದ ಸೀಮಿತ ಲಭ್ಯತೆಯಿಂದ ಬಿಕ್ಕಟ್ಟು ಅನುಭವಿಸುವ ಅನೌಪಚಾರಿಕ ವಲಯದ ಕೆಲಸಗಾರರ ಮೇಲೆ ಅದರ ಪರಿಣಾಮ ಕುರಿತು ಬೆಳಕು ಚೆಲ್ಲಿತು.
ಅನೌಪಚಾರಿಕ ವಲಯದ ಕೆಲಸಗಾರರ ಮೇಲೆ ಅದರ ಪರಿಣಾಮ ಕುರಿತು ಬೆಳಕು ಚೆಲ್ಲಿತು.
ಪರ್ಪಸ್ ನ ಪೀಪಲ್ ಫರ್ಸ್ಟ್ ಸಿಟೀಸ್ ಮತ್ತು ಅಟ್ರೀ ಹೀಟ್ ಶೆಲ್ಟರ್ ಸ್ಪರ್ಧೆ , ಸ್ವೆಟ್ ಅಂಡ್ ಕಾಂಕ್ರೀಟ್ ಬೆಂಗಳೂರಿನ ಸ್ಪೇಸ್ ಸಭಾದಲ್ಲಿ ನಡೆಯಿತು. ಈ ಕಾರ್ಯಕ್ರಮವು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿದ್ದು ಎಲ್ಲ ಬಗೆಯ ಜನರು ಸಕ್ರಿಯವಾಗಿ ಭಾಗವಹಿಸುವಂತೆ ಮಾಡಿತು.
ನೆರಳು ಹೀಟ್ ಶೆಲ್ಟರ್ ಎಂಬ ಪ್ರೊಟೊಟೈಪ್ ಸುತ್ತಲೂ ಪ್ರದರ್ಶನ ಆಯೋಜಿಸಲಾಗಿದ್ದು ಅಟ್ರೀ ನಡೆಸುವ ಈ ರಾಷ್ಟ್ರೀಯ ಸ್ಪರ್ಧೆಯಲ್ಲಿ ಗೆಲ್ಲುವ ವಿನ್ಯಾಸವು ಬಿಸಿಯ ಒತ್ತಡಕ್ಕೆ ಉತ್ತಮ ಪರಿಹಾರ ಒದಗಿಸುವುದಾಗಿತ್ತು. ವಾಸ್ತುಶಿಲ್ಪಿಗಳಾದ ಸಾಗರ್ ಮತ್ತು ಅಂಕೃತ್ಯಾ ವಿನ್ಯಾಸಗೊಳಿಸಿದ ನೆರಳು ಹೀಟ್ ಶೆಲ್ಟರ್ ಬೀದಿ ವ್ಯಾಪಾರಿಗಳು ಮತ್ತು ಕೆಲಸಗಾರರು ಬಳಸುವ ಬೀದಿ ಬದಿಯ ನೆರಳಿನ ರಚನೆಗಳಿಂದ ಸ್ಫೂರ್ತಿ ಹೊಂದಿದ್ದು ತೀವ್ರ ಬಿಸಿಲಿನಿಂದ ರಕ್ಷಣೆ ನೀಡಲು ಬಿಚ್ಚಿಡಬಲ್ಲ ಮೈಕ್ರೊಕ್ಲೈಮೇಟ್ ಒಳಗೊಂಡಿರುತ್ತದೆ. ಸಂದರ್ಶಕರು ಮತ್ತು ನಗರದಾದ್ಯಂತ ಅನೌಪಚಾರಿಕ ಕೆಲಸಗಾರರನ್ನು ಈ ಶೆಲ್ಟರ್ ಸುತ್ತಲೂ ನೆರೆಯುವಂತೆ ಮಾಡಿ ಅವರಿಗೆ ಅದರ ವಿನ್ಯಾಸ ಮತ್ತು ಕಾರ್ಯ ನಿರ್ವಹಣೆಯನ್ನು ತಿಳಿಸಲಾಯಿತು. ಅವರಿಗೆ ಈ ವಿನ್ಯಾಸದ ಕುರಿತು ತಮ್ಮ ಅಭಿಪ್ರಾಯ ಹೇಳಲು ಉತ್ತೇಜಿಸಲಾಯಿತು.
ಪೀಪಲ್ ಫರ್ಸ್ಟ್ ಸಿಟೀಸ್ ಜೊತೆಯಲ್ಲಿ ಈ ಸಹಯೋಗದ ಉಪಕ್ರಮದ ಕುರಿತು ವಾಸ್ತುಶಿಲ್ಪಿಗಳು, “ನಾವು ಪೀಪಲ್ ಫರ್ಸ್ಟ್ ಸಿಟೀಸ್ ಉಪಕ್ರಮಕ್ಕೆ ಸಹಯೋಗ ಹೊಂದಲು ಮತ್ತು ನಮ್ಮ ವಿನ್ಯಾಸಕ್ಕೆ ಜೀವ ತುಂಬಲು ಬಹಳ ಸಂತೋಷ ಹೊಂದಿದ್ದೇವೆ. ನಾವು ಈ ಯೋಜನೆಗೆ ಒಂದು ವರ್ಷದ ಹಿಂದೆ ಸಹಯೋಗ ಹೊಂದಿದ್ದು ವಿನ್ಯಾಸವು ನೈಜ ಸಾಮಾಜಿಕ ಪರಿಣಾಮ ಸೃಷ್ಟಿಸಬಲ್ಲದು ಎಂಬ ನಂಬಿಕೆಯನ್ನು ಹೊಂದಿದ್ದೇವೆ. ಈ ವಿಷಯವನ್ನು ಅರ್ಥ ಮಾಡಿಕೊಳ್ಳಲು ಮತ್ತು ವಿನ್ಯಾಸ ಪ್ರಕ್ರಿಯೆಗೆ ಮಾರ್ಗದರ್ಶನಕ್ಕೆ ತಮ್ಮ ನೈಜ ಪರಿಸ್ಥಿತಿಗಳನ್ನು ಹಂಚಿಕೊಂಡ ಸಮುದಾಯಗಳ ವ್ಯಕ್ತಿಗಳಿಗೂ ನಾವು ಆಭಾರಿಯಾಗಿದ್ದೇವೆ” ಎಂದು ಸಾಗರ್ ಕಂದಲ್ ಮತ್ತು ಅಂಕೃತ್ಯಾ ದಿಗ್ಗವಿ ಹೇಳಿದರು.
ಸ್ವೆಟ್ ಅಂಡ್ ಕಾಂಕ್ರೀಟ್ ನಲ್ಲಿ ಅಟ್ರೀ ಹೀಟ್ ಶೆಲ್ಟರ್ ಸ್ಪರ್ಧೆಯ ಐದು ರನ್ನರ್-ಅಪ್ ಪರಿಕಲ್ಪನೆಗಳನ್ನೂ ಪ್ರದರ್ಶಿಸಲಾಗಿದ್ದು ಅವು ಅಪಾರ ಬಿಸಿಲಿನಲ್ಲಿ ಜೀವಿಸುವ ಅನುಭವವನ್ನು ಮಲ್ಟಿಮೀಡಿಯಾ ಪ್ರದರ್ಶನದ ಮೂಲಕ ಬಿತ್ತರಿಸಿತು. ಸಂದರ್ಶಕರಿಗೆ ಸ್ಕಾರ್ಚ್ಡ್ ಶಾಡೋಸ್ ಕಲಾ ಅನುಭವದ ಭಾಗವಾಗಲು ಮತ್ತು ಕಹೇ ವಿದೂಷಕ್’ ರಂಗ ತಂಡದ ಪ್ರದರ್ಶನ ಅಲ್ಲದೆ ಸಂವಹನ ಆಧರಿತ
ಟ್ಯಾಬ್ಲೋ’ಗಳ ಪ್ರದರ್ಶನವೂ ಇತ್ತು.