





















ಅಂಗನವಾಡಿಗಳಿಗೆ ಕಾರ್ಪೆಟ್ ವಿತರಿಸಿ ಪಿ.ಕೆ.ರಾಜಣ್ಣ ಜನ್ಮದಿನ ಆಚರಣೆ :
ಯಲಹಂಕ : ಕ್ಷೇತ್ರದ ಹೆಸರಘಟ್ಟ ಹೋಬಳಿ ಬಿಜೆಪಿ ಉಪಾಧ್ಯಕ್ಷರು, ಹೆಸರಘಟ್ಟ ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಕೆ.ರಾಜಣ್ಣ ಅವರು ಹೆಸರಘಟ್ಟ ಗ್ರಾ.ಪಂ.ವ್ಯಾಪ್ತಿಯ ಹತ್ತು ಅಂಗನವಾಡಿ ಕೇಂದ್ರಗಳು ಮತ್ತು ಹುರುಳಿಚಿಕ್ಕನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಒಂದು ಅಂಗನವಾಡಿ ಸೇರಿದಂತೆ ಒಟ್ಟು11 ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ವಿಶ್ರಾಂತಿ ಸಾಧನಗಳಾದ ಕಾರ್ಪೆಟ್ ಗಳನ್ನು ವಿತರಿಸುವ ಮೂಲಕ ಜನ್ಮದಿನವನ್ನು ಮುಖಂಡರು, ಸ್ನೇಹಿತರು, ಹಿತೈಷಿಗಳೊಂದಿಗೆ ಸಾರ್ಥಕ ರೀತಿಯಲ್ಲಿ ಆಚರಿಸಿಕೊಂಡರು.
ಪಿ.ಕೆ.ರಾಜಣ್ಣ ಅವರ ಜನ್ಮದಿನದ ಪ್ರಯುಕ್ತ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಸೇರಿದಂತೆ ಆರ್ ಎಸ್ ಎಸ್ ಎನ್ ಬ್ಯಾಂಕ್ ಅಧ್ಯಕ್ಷರಾದ ಡಾ.ವಾಣಿಶ್ರೀ ವಿಶ್ವನಾಥ್, ಬಿಜೆಪಿ ಯುವ ಮುಖಂಡರು, ವಿಶ್ವವಾಣಿ ಫೌಂಡೇಶನ್ ಕಾರ್ಯದರ್ಶಿ ಅಲೋಕ್ ವಿಶ್ವನಾಥ್, ಹಿರಿಯ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಡಿ.ಜಿ.ಅಪ್ಪಯ್ಯಣ್ಣ, ಚೊಕ್ಕನಹಳ್ಳಿ ವೆಂಕಟೇಶ್, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಎಂ.ಜಿ.ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥಪುರ ಮಂಜುನಾಥ್, ಬಮೂಲ್ ನಿರ್ದೇಶಕ ಸತೀಶ್ ಕಡತನಮಲೆ, ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ರಾಜೇಶ್, ಹೆಸರಘಟ್ಟ ಹೋಬಳಿ ಬಿಜೆಪಿ ಅಧ್ಯಕ್ಷ ವಸಂತ್ ಅರಕೆರೆ, ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ರೆಡ್ಡಿ, ಶಿವಮಾದು, ಗ್ರಾಮಾಂತರ ಮಂಡಲ ಯುವ ಮೋರ್ಚಾ ಕಾರ್ಯದರ್ಶಿ ರಾಜೇಂದ್ರ ಬೈರಾಪುರ, ಹೆಸರಘಟ್ಟ ಗ್ರಾ.ಪಂ.ಅಧ್ಯಕ್ಷೆ ಪರಿಮಳ, ಉಪಾಧ್ಯಕ್ಷ ಆರ್ ಶಿವಾನದ್, ಮಾಜಿ ಅಧ್ಯಕ್ಷ ಪುಷ್ಪಲತ ಬಿ.ವೆಂಕಟೇಶ್, ಗ್ರಾ.ಪಂ.ಸದಸ್ಯರಾದ ಪ್ರಭಾಕರ್, ಗೋವಿಂದರಾಜು, ಓಬಿಸಿ ಮೋರ್ಚಾ ಉಪಾಧ್ಯಕ್ಷ ನಾಗರಾಜ್, ರೈತ ಮೋರ್ಚಾ ಕಾರ್ಯದರ್ಶಿ ಪರಮೇಶ್ ಸೇರಿದಂತೆ ಹೆಸರಘಟ್ಟ ಗ್ರಾ.ಪಂ.ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಹಾಲಿ ಮತ್ತು ಮಾಜಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಪಿ.ಕೆ.ರಾಜಣ್ಣ ಅವರಿಗೆ ಸನ್ಮಾನಿಸಿ ಜನಮದಿನದ ಶುಭ ಹಾರೈಸಿದರು.
ಜನ್ಮದಿನದ ಪ್ರಯುಕ್ತ ಹೆಸರಘಟ್ಟ 3ನೇ ವಾರ್ಡ್(ಕುಂಬಾರ ಬೀದಿ)ನ ನಾಗರೀಕರು, ದುರ್ಗಾಂಬ ದೇವಿ ಕನ್ನಡ ಬಳಗದ ಪದಾಧಿಕಾರಿಗಳು ಹಾಗೂ ಪಿ.ಕೆ.ರಾಜಣ್ಣ ಅವರ ಹಿತೈಷಿಗಳು ಮಂಗಳವಾರ ಸಂಜೆ ದುರ್ಗಾಂಬ ದೇವಸ್ಥಾನದ ಬಳಿ ಕಾರ್ಯಕ್ರಮ ಏರ್ಪಡಿಸಿ, ಶಾಸಕ ಎಸ್ ಆರ್ ವಿಶ್ವನಾಥ್, ಡಾ.ವಾಣಿಶ್ರೀ ವಿಶ್ವನಾಥ್, ಅಲೋಕ್ ವಿಶ್ವನಾಥ್ ಹಾಗೂ ಪಿ.ಕೆ.ರಾಜಣ್ಣ ಅವರ ಭಾವಚಿತ್ರಗಳನ್ನು ಒಳಗೊಂಡ ಬೃಹತ್ ಕೇಕ್ ಕತ್ತರಿಸುವ ಮೂಲಕ ಪಿ.ಕೆ.ರಾಜಣ್ಣ ಅವರ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಸಿದರು. ಆಗಮಿಸಿದ್ದ ನಾಗರೀಕರಿಗೆ ಲಘು ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಗ್ರಾ.ಪಂ.ಮಾಜಿ ಅಧ್ಯಕ್ಷ ಅಶ್ವಥ್, ರಾಜ್ ಮೋಟಾರ್ಸ್ ನ ಎಂ.ನಾಗರಾಜ್, ಜಿ.ಎನ್.ರತ್ನಮ್ಮ, ನರಸಿಂಹಮೂರ್ತಿ, ಮಧುಕುಮಾರ್, ಎಂ.ಡಿ.ಕೇಬಲ್ಸ್ ನ ಮುನಿರಾಜು, ಗೋವಿಂದರಾಜು(ಪಂಟಿ), ಜಿ.ಎನ್.ಕೃಷ್ಣಯ್ಯ, ಗೋಪಿ ಕುಟುಂಬದವರು, ಮಧು(ಮಿಠಾಯಿ), ವಾರ್ಡ್ ನ ಹಿರಿಯ ನಾಗರೀಕರಾದ ವೀರಕೆಂಪಯ್ಯ, ಆಂಜಿನಮ್ಮ, ಬಿಜೆಪಿ ಮುಖಂಡ ನಾರಾಯಣಗೌಡರ ಕುಟುಂಬ, ಯುವ ಮುಖಂಡರಾದ ವಿನಯ್ ಮತ್ತು ಸ್ನೇಹಿತರು, ಮನು ಮತ್ತು ಸ್ನೇಹಿತರು, ಗಿರಿಪುಟ್ಟಣ್ಣನವರ ನಾಗರಾಜ್, ರವಿ, ಸಂದೀಪ್ ಸೇರಿದಂತೆ 3ನೇ ವಾರ್ಡ್ ನ ನಿವಾಸಿಗಳಿದ್ದು, ಪಿ.ಕೆ.ರಾಜಣ್ಣ ಅವರಿಗೆ ಜನ್ಮದಿನದ ಶುಭ ಹಾರೈಸಿದರು.