ಅಕ್ಷರ, ಜ್ಞಾನ ,ಆರೋಗ್ಯ ಯಶಸ್ಸಿನ ಕೀಲಿಕೈ
_ಡಾಕ್ಟರ್ ಉಸ್ಮಾನ್ವಿದ್ಯಾಭ್ಯಾಸದ ಜೊತೆಗೆ ಜ್ಞಾನದ ಅರಿವು ಸ್ವಚ್ಛತೆ ಕೂಡ ಮಹತ್ವವಾದದ್ದು ಎಂದು ಬೆಂಗಳೂರು ಬಿಬಿಎಂ ಪಾಲಿ ಕ್ಲಿನಿಕ್ ನ ಡಾಕ್ಟರ್ ಉಸ್ಮಾನ್ ಅವರು ಹೇಳಿದರು. ಅವರು ಆಕ್ಸ್ಫರ್ಡ್ ಆಂಗ್ಲ ಶಾಲೆ ಹಾಗೂ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ’ ವೈದ್ಯರ ದಿನಾಚರಣೆ’ ಅಂಗವಾಗಿ 1.7.25 ಮಂಗಳವಾರ ದಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ದೈಹಿಕ ಹಾಗೂ ನಮ್ಮ ಸುತ್ತಲಿನ ಪರಿಸರ ಸ್ವಚ್ಛತೆ ಆರೋಗ್ಯವನ್ನು ಕಾಪಾಡುತ್ತದೆ. ಆರೋಗ್ಯವು ಮಾನಸಿಕ ಸ್ಥಿರತೆಯನ್ನು ಕಾಪಾಡುವುದರೊಂದಿಗೆ ಜ್ಞಾನದ ಅರಿವನ್ನು ಹೆಚ್ಚಿಸುತ್ತದೆ ಇದರೊಂದಿಗೆ ಶಿಸ್ತನ್ನು ರೂಡಿಸಿಕೊಂಡಾಗ ನಮ್ಮ ಯಶಸ್ಸಿನ ಹಾದಿ ಸುಗಮವಾಗುತ್ತದೆ ಎಂದು ಅವರು ಮಕ್ಕಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಡಾ. ಉಸ್ಮಾನ್ ಅವರನ್ನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾರಾಜೇಶ್ ಹಾಗೂ ದೈಹಿಕ ಶಿಕ್ಷಕರಾದ ಶ್ರೀ ನರಸಿಂಹರಾಜು ಅವರು ಸನ್ಮಾನಿಸಿದರು. ಶ್ರೀಮತಿ ವಿಶಾಲಾಕ್ಷಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರೆ ,9ನೇ ತರಗತಿ ವಿದ್ಯಾರ್ಥಿನಿ ಜೆಸಿಕ ಡ್ಯಾನಿಯಲ್ ಪ್ರಾರ್ಥನೆ ಮಾಡಿದರು , 10ನೇ ತರಗತಿ ವಿದ್ಯಾರ್ಥಿ ಮೊಹಮ್ಮದ್ ಸಾದ್ ’ವೈದ್ಯರ ದಿನಾಚರಣೆ’ ಕುರಿತು ವಿವರಣೆ ನೀಡಿದರು. ಶ್ರೀ ಶಶಿಧರ್ ಅವರು ಡಾಕ್ಟರ್ ಉಸ್ಮಾನ್ ಅವರ ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮ ದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಾರಾ ಮುಜಾಹಿದ್ ಅವರು ಸ್ವಾಗತವನ್ನು ಕೋರಿದರೆ, ಒಂಬತ್ತನೇ ತರಗತಿ ವಿದ್ಯಾರ್ಥಿ ಎ .ಲಾವಣ್ಯ ವಂದನಾರ್ಪಣೆಯನ್ನು ಮಾಡಿದರು. ಆಕ್ಸ್ಫರ್ಡ್ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಪ್ರಮೀಳಾ ರಾಜೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ

ಡಾಕ್ಟರ್ ಉಸ್ಮಾನ್ ಅವರ ಪತ್ನಿ
ಶ್ರೀಮತಿ ಸುನೈನಾ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಿಹಿ ಹಂಚುವುದರ ಮೂಲಕ ಹಲವಾರು ವೈದ್ಯರುಗಳಿಗೆ ಶುಭಾಶಯಗಳನ್ನು ಕೋರಲಾಯಿತು.

Leave a Reply

Your email address will not be published. Required fields are marked *