ಮಿವಿಯಿಂದ ಮಾನವರ ರೀತಿಯ ಹಾಗೂ ಸ್ಕ್ರೀನ್-ಮುಕ್ತ ಸಂವಹನಗಳಿಗೆ ಕ್ರಾಂತಿಕಾರಕ ಎಐ ಬಡ್ಸ್ ಬಿಡುಗಡೆ

ರೂ.6,999ಕ್ಕೆ ವಿಶೇಷವಾಗಿ ಫ್ಲಿಪ್ ಕಾರ್ಟ್ ಹಾಗೂ Mivi.inನಲ್ಲಿ ಲಭ್ಯ

ಬೆಂಗಳೂರು, ಜುಲೈ 06 2025: ಭಾರತದ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಮಿವಿ ಜಾಗತಿಕ ತಂತ್ರಜ್ಞಾನದಲ್ಲಿ ಮಹತ್ವದ ಮೈಲಿಗಲ್ಲಾದ ಮಿವಿ ಎಐ ಬಡ್ಸ್ ಬಿಡುಗಡೆ ಮಾಡಿದ್ದು ಇದು ತಲ್ಲೀನಗೊಳಿಸುವ ಧ್ವನಿಯನ್ನು ಭಾವನಾತ್ಮಕವಾಗಿ ಜಾಣ್ಮೆಯ ಎಐ ಪ್ಲಾಟ್ ಫಾರಂನಲ್ಲಿ ಸಂಯೋಜಿಸುತ್ತದೆ. ಸಂಪೂರ್ಣವಾಗಿ ಭಾರತದಲ್ಲಿ ವಿನ್ಯಾಸ ಹಾಗೂ ರೂಪುಗೊಂಡಿರುವ ಈ ಎಐ ಬಡ್ಸ್ ಸ್ಕ್ರೀನ್-ಮುಕ್ತ, ನೈಸರ್ಗಿಕ ಸಂವಹನದ ಅನುಭವ ನೀಡುತ್ತಿದ್ದು ಬಳಕೆದಾರರು ತಂತ್ರಜ್ಞಾನದೊಂದಿಗೆ ಹೇಗೆ ಸಂವಾದ ನಡೆಸುತ್ತಾರೆ ಎನ್ನುವುದನ್ನು ಮರು ವ್ಯಾಖ್ಯಾನಿಸುತ್ತದೆ.

ಹೊಸ ಮಿವಿ ಎಐ ಬಡ್ಸ್ ವಿಶೇಷವಾಗಿ ಫ್ಲಿಪ್ ಕಾರ್ಟ್ ಮತ್ತು ಅಧಿಕೃತ www.Mivi.in ವೆಬ್ಸೈಟ್ ನಲ್ಲಿ ರೂ.6999ಕ್ಕೆ ಲಭ್ಯ. ಸರಳವಾಗಿ ನೀವು “ಹೈ ಮಿವಿ” ಎಂದರೆ ಸಾಕು, ಬಳಕೆದಾರರು ಕಮ್ಯಾಂಡ್ ಆಚೆಗೂ ಶ್ರೀಮಂತ, ಸನ್ನಿವೇಶ ಆಧರಿಸಿದ ಸಂವಹನಗಳನ್ನು ಪ್ರಾರಂಭಿಸಬಹುದು.

ಸಹ-ಸಂಸ್ಥಾಪಕಿ ಮತ್ತು ಸಿಎಂಒ ಮಿಧುಲಾ ದೇವಭಕ್ತುನಿ, “ಮಿವಿ ಎಐನೊಂದಿಗೆ ನಾವು ಬರೀ ಉತ್ಪನ್ನ ಬಿಡುಗಡೆ ಮಾಡುತ್ತಿಲ್ಲ, ನಾವು ಎಐ ಸಂವಹನದಲ್ಲಿ ಮುಂದಿನ ಯುಗವನ್ನು ವ್ಯಾಖ್ಯಾನಿಸುತ್ತಿದ್ದೇವೆ. ಇದು ಭಾರತದ ಎಐ ಕ್ಷಣವಾಗಿದೆ. ವಿಶ್ವಮಟ್ಟದ ಆವಿಷ್ಕಾರ, ಭಾರತಕ್ಕಾಗಿ, ವಿಶ್ವಕ್ಕಾಗಿ ನಿರ್ಮಾಣವಾಗಿದೆ. ನಮ್ಮ ಎಐ ಬಡ್ಸ್ ಬರೀ ಸ್ಮಾರ್ಟ್ ಅಲ್ಲ ಅವು ಅಂತರ್ಬೋಧೆಯ, ಸಂವೇದನಾಶೀಲ ಮತ್ತು ಮಾನವನ ರೀತಿಯಲ್ಲಿವೆ. ಇದು ಉತ್ಪನ್ನಕ್ಕಿಂತ ಹೆಚ್ಚಿನದಾಗಿದೆ; ಇದು ಸಂಪರ್ಕಿಸಲು ಹೊಸ ವಿಧಾನದ ಪ್ರಾರಂಭವಾಗಿದೆ. ನಾವು ಈ ಕ್ರಾಂತಿಯನ್ನು ಮುನ್ನಡೆಸಲು ಹೆಮ್ಮೆ ಪಡುತ್ತೇವೆ”
ಎಂದರು.

ಅವರು ಮುಂದುವರಿದು, “₹2,000 ಕೋಟಿಗಳನ್ನು ರಾಷ್ಟ್ರೀಯವಾಗಿ ಎಐ ಅಭಿವೃದ್ಧಿಗೆ ಮೀಸಲಿರಿಸಲಾಗಿದ್ದು ಮಿವಿಯ ಆವಿಷ್ಕಾರವು ಭಾರತವನ್ನು ಜಾಗತಿಕ ಎಐ ಸ್ಪರ್ಧೆಯಲ್ಲಿ ಬರೀ ಬಳಕೆದಾರನಲ್ಲ, ಬದಲಿಗೆ ಮೊದಲ ಸಾಲಿನ ತಂತ್ರಜ್ಞಾನಗಳ ಸೃಷ್ಟಿಕರ್ತನಾಗಿ ಪ್ರಮುಖ ಸ್ಥಾನ ನೀಡಿದೆ” ಎಂದರು.

ಸಂವಹನಗಳು ಉದ್ಯೋಗದ ಆಫರ್ ನಿಂದ ಮನೆಯಲ್ಲಿಯೇ ಪಿಜ್ಜಾ ತಯಾರಿಯವರೆಗೆ ಇರುತ್ತವೆ. ಎಐ ಹಿಂದಿ, ತಮಿಳು, ತೆಲುಗು, ಬಂಗಾಳಿ, ಮರಾಠಿ, ಕನ್ನಡ, ಮಲಯಾಳಂ ಮತ್ತು ಗುಜರಾತ್ ಭಾಷೆಗಳಲ್ಲಿ ಯಾವುದೇ ಸೆಟ್ಟಿಂಗ್ ಗಳನ್ನು ಬದಲಾಯಿಸದೆ ಅರ್ಥ ಮಾಡಿಕೊಂಡು ಪ್ರತಿಕ್ರಿಯಿಸುತ್ತದೆ.

Leave a Reply

Your email address will not be published. Required fields are marked *