ರಾಜಾನುಕುಂಟೆ ಗ್ರಾ.ಪಂ.ನೂತನ ಅಧ್ಯಕ್ಷರು-ಉಪಾಧ್ಯಕ್ಷರ ಪದಗ್ರಹಣ :
ಯಲಹಂಕ : ಕ್ಷೇತ್ರದ ರಾಜಾನುಕುಂಟೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರು, ಉಪಾಧ್ಯಕ್ಷರಾಗಿ ಇತ್ತೀಚೆಗೆ ಅವಿರೋಧವಾಗಿ ಆಯ್ಕೆಯಾದ ಸುಜಾತಮ್ಮ ಮತ್ತು ಸೌಮ್ಯ ಗೋವಿಂದರಾಜು ಅವರು ಶುಕ್ರವಾರ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಸಮ್ಮುಖದಲ್ಲಿ ಪದಗ್ರಹಣ ಮಾಡಿದರು.
ಈ ವೇಳೆ ನೂತನ ಅಧ್ಯಕ್ಷೆ ಸುಜಾತಮ್ಮ ಮಾತನಾಡಿ ‘ಶಾಸಕರು, ನಮ್ಮ ನೆಚ್ಚಿನ ನಾಯಕರಾದ ಎಸ್ ಆರ್ ವಿಶ್ವನಾಥ್ ಅವರ ಸಹಕಾರ ಮತ್ತು ಬೆಂಬಲದಿಂದಾಗಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲು ಸಾಧ್ಯವಾಗಿದೆ. ಪದಗ್ರಹಣ ಸಮಾರಂಭದ ಈ ಶುಭ ಸಂದರ್ಭದಲ್ಲಿ ಎಸ್ ಆರ್ ವಿಶ್ವನಾಥ್, ಡಾ.ವಾಣಿಶ್ರೀ ವಿಶ್ವನಾಥ್ ಮತ್ತು ಯುವ ಮುಖಂಡ ಅಲೋಕ್ ವಿಶ್ವನಾಥ್ ಅವರು ಸೇರಿದಂತೆ ನನ್ನ ಆಯ್ಕೆಗೆ ಸಹಕರಿಸಿದ ಗ್ರಾ.ಪಂ.ಸದಸ್ಯರು, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಎಲ್ಲಾ ಮುಖಂಡರಿಗೂ ಕೃತಜ್ಞತಾಪೂರ್ವಕ ಧನ್ಯವಾದ ತಿಳಿಸಲಿಚ್ಛಿಸುತ್ತೇನೆ ಎಂದರು.
ಇದೇ ವೇಳೆ ನೂತನ ಅಧ್ಯಕ್ಷೆ ಸುಜಾತಮ್ಮ, ಉಪಾಧ್ಯಕ್ಷೆ ಸೌಮ್ಯ ಗೋವಿಂದರಾಜು ಅವರನ್ನು ಗ್ರಾ.ಪಂ.ಸದಸ್ಯರು, ಬಿಜೆಪಿ ಮುಖಂಡರು ಹಾಗೂ ಗ್ರಾಮಸ್ಥರು ಸನ್ಮಾನಿಸಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಡಿ.ಜಿ.ಅಪ್ಪಯ್ಯಣ್ಣ, ಚೊಕ್ಕನಹಳ್ಳಿ ವೆಂಕಟೇಶ್, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿಶ್ವನಾಥಪುರ ಮಂಜುನಾಥ್, ಮುಖಂಡರಾದ ವರುಣ್, ಅಶೋಕ್, ರಾಜಾನುಕುಂಟೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಎಸ್.ಜಿ.ನರಸಿಂಹಮೂರ್ತಿ (ಎಸ್.ಟಿ.ಡಿ.ಮೂರ್ತಿ), ವೀರಣ್ಣ ರಿಗ್ಲೆ, ಭವಾನಿ ಶ್ರೀನಿವಾಸ್, ಅಂಬಿಕಾ ರಾಜೇಂದ್ರ, ಚನ್ನಮ್ಮ, ಮಾಜಿ ಉಪಾಧ್ಯಕ್ಷರಾದ ಶಿವಕುಮಾರ್, ವೆಂಕಟೇಶ್, ಗ್ರಾ.ಪಂ.ಸದಸ್ಯರಾದ ಆರ್.ಡಿ.ರಾಜಣ್ಣ, ಆರ್.ಎಚ್. ಹನುಮೇಗೌಡ, ಎಂ.ಚಿಕ್ಕಣ್ಣ, ಆರ್.ಎಂ.ನಾಗಭೂಷಣ್, ಮುತ್ತು ವೇಣು, ರಾಜು ಕೆ., ಹೇಮಲತಾ ಡಿ.ಬಿ., ಗಂಗಮ್ಮ, ಸುಜಾತ, ಮಂಜುಳ, ಬಾಲಾಜಿ ಆರ್.ವಿ., ಪಿಡಿಓ ನಾಗರಾಜ್ ಸೇರಿದಂತೆ ಹಲವು ಮುಖಂಡರು ಹಾಗೂ ಗ್ರಾಮಸ್ಥರಿದ್ದರು.

Leave a Reply

Your email address will not be published. Required fields are marked *