






















ಬ್ಯಾಟರಾಯನಪುರ : ಕ್ಷೇತ್ರದ ಜಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ದೊಡ್ಡಜಾಲ ಗ್ರಾಮ ಪಂಚಾಯತಿ ಮತ್ತು ಬೆಂಗಳೂರು ನಗರ ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಎನ್.ಕೆ.ಮಹೇಶ್ ಕುಮಾರ್ ಅವರು ಅನಾಥಾಶ್ರಮಗಳು, ವೃದ್ಧಾಶ್ರಮಗಳು ಮತ್ತು ವಿಶೇಷ ಚೇತನರ ಆಶ್ರಮಗಳಿಗೆ ಅನ್ನದಾನದ ನೆರವು, ಸಾರ್ವಜನಿಕರಿಗೆ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ತಮ್ಮ 42ನೇ ಜನ್ಮ ದಿನಾಚರಣೆಯನ್ನು ವಿಜೃಂಭಣೆ ಮತ್ತು ಅರ್ಥಪೂರ್ಣ ರೀತಿಯಲ್ಲಿ ಆಚರಿಸಿಕೊಂಡರು.
ಜನ್ಮದಿನದ ಪ್ರಯುಕ್ತ ಎನ್.ಕೆ.ಮಹೇಶ್ ಕುಮಾರ್ ಅವರ ಸ್ವಗ್ರಾಮ ನವರತ್ನ ಅಗ್ರಹಾರದಲ್ಲಿ ಮಂಗಳವಾರ ಸಂಜೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು, ಮುಖಂಡರು, ಹಿತೈಷಿಗಳು, ಸ್ನೇಹಿತರು, ಬಂಧುಬಾಂಧವರು ಹಾಗೂ ಗ್ರಾಮಸ್ಥರು ಪಾಲ್ಗೊಂಡು, ಗೌರವ ಸನ್ಮಾನ ನೀಡಿ ಜನ್ಮದಿನದ ಶುಭ ಹಾರೈಸಿದರು.
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R ಹನುಮಂತು
7349337989