ಯಲಹಂಕ ಬಾಗಲೂರಿನಲ್ಲಿ ಮನೆ -ಮನೆಗೆ ಪೊಲೀಸ್ ಕಾರ್ಯಕ್ರಮ,
ಯಲಹಂಕ ಸುದ್ದಿ. ದಿನಾಂಕ 21. 07. 2025 ರಂದು ಬೆಂಗಳೂರ್ ನಗರ ಜಿಲ್ಲೆಯ ಯಲಹಂಕ ತಾಲೂಕ್ ನ ಜಾಲ ಹೋಬಳಿಯ ಬಾಗಲೂರಿನಲ್ಲಿ ಅಲ್ಲಿನ ಪೊಲೀಸ್ ಠಾಣೆ ಯ ಸರ್ಕಲ್ ಇನ್ಸ್ಪೆಕ್ಟರ್ ಶಬರಿಷ್ ರವರ ನೇತೃತ್ವ ದಲ್ಲಿ,, ಮನೆ ಮನೆಗೆ ಪೊಲೀಸ್,, ಕಾರ್ಯಕ್ರಮ ನೆರವೇರಿತು, ಬಾಗಲೂರಿನ ಸಾರ್ವಜನಿಕರನ್ನು ಉದ್ದೇಶಿಸಿ ಇನ್ಸ್ಪೆಕ್ಟರ್ ಶಭ ರೀಶ್ ರವರು ಜನತೆಗೆ ಪೊಲೀಸ್ ಇಲಾಖೆಯಿಂದ ಸಿಗುವ ಪ್ರಯೋಜನಗಳು, ಹಾಗೂ ಜನ ಸ್ನೇಹಿ, ಜನತೆಯ ಸ್ಪಂದನೆ ಕುರಿತು ಮಾಹಿತಿ ನೀಡಿ ಜನ ಜಾಗೃತಿ ಮೂಡಿಸಿದರು, ನಂತರ ತಮ್ಮ ಸಿಬ್ಬಂಧಿ ಯೊಂಧಿಗೆ ಗ್ರಾಮದ ಮನೆ ಮನೆಗೆ ತೆರಳಿ ಹಿರಿಯರು, ಮಹಿಳೆಯರಿಗೆ ಮನೆ ಮನೆಗೆ ಪೊಲೀಸ್ ಕಾರ್ಯ ಕ್ರಮದ ಬಗ್ಗೆ ತಿಳುವಳಿಕೆ ನೀಡಿದರು, ಕಾರ್ಯಕ್ರಮ ದಲ್ಲಿ ಮಹಿಳಾ ಸಬ್ ಇನ್ಸ್ಪೆಕ್ಟರ್, ಶೈಲಜಾ, ಎ ಎಸ್ ಐ ಗಳಾದ ಬಾಳಪ್ಪ ಪೂಜಾರಿ, ನರ ಸಿಂಹ ಪ್ಪ,, ಕುಮಾರ್ ಪಾಟೀಲ್, ಝಖಾ ಉಲ್ಲಾ, ಮೊದಲಾದ ಸಿಬ್ಬಂದಿ ಮತ್ತು ಗ್ರಾಮ ಪಂಚಾಯೆತಿ ಸದಸ್ಯ ರಾದ ಪ್ರಭು ಸಿದ್ದೇಶ್, ಅಧ್ಯಕ್ಷರಾದ, ಕೆಂಪೇಗೌಡ, ಶಂಭು, ದೇವರಾಜ್, ಮುನಿಯಪ್ಪ ಬಿಎಂಟಿಸಿ ಮಂಜುನಾಥ ಸೇರಿದಂತೆ ಬಹಳಷ್ಟು ಗ್ರಾಮಸ್ಥರು ಕಾರ್ಯಕ್ರಮ ಕ್ಕೆ ಸಾಕ್ಷಿ ಆದರು 

                                   ಬಾಗಲೂರು  ಪ್ರಕಾಶ್

Leave a Reply

Your email address will not be published. Required fields are marked *