
ಶಂಕರ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ
ಬೆಂಗಳೂರಿನ ವಿ ಕಮ್ಯುನಿಟಿ ನೇತೃತ್ವದಲ್ಲಿ ಶಿಬಿರ ಆಯೋಜನೆ
ಸಹಕಾರನಗರ 1ನೇ ಮುಖ್ಯ ರಸ್ತೆಯ ಬೆಂಗಳೂರು ಒನ್ ಬಳಿ ಶಿಬಿರ
ಶಿಬಿರದಲ್ಲಿ ಪಾಲ್ಗೊಂಡಿದ್ದ ೨೦೦ ಕ್ಕ್ಕೂ ಹೆಚ್ಚು ಜನ
ವಿ ಕಮ್ಯೂನಿಟಿ ಪೌಂಡರ್ ಶೈಲಜಾ ವೆಂಕಟ್ ಭಾಗಿ
ಬೆಂಗಳೂರಿನ ವಿ ಕಮ್ಯುನಿಟಿ ನೇತೃತ್ವದಲ್ಲಿ ಶಂಕರ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಸಹಕಾರನಗರ 1ನೇ ಮುಖ್ಯ ರಸ್ತೆಯಲ್ಲಿರುವ ಬೆಂಗಳೂರು ಒನ್ ಬಳಿ ಉಚಿತ ನೇತ್ರ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ವಿ ಕಮ್ಯೂನಿಟಿ ಪೌಂಡರ್ ಶೈಲಜಾ ವೆಂಕಟ್ ಮಾತನಾಡಿ, ಜನಪ್ರಿಯ ಕಣ್ಣಿನ ಆಸ್ಪತ್ರೆಯಾದ ಶಂಕರ್ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಈ ಉಚಿತ ಆರೋಗ್ಯ ಶಿಬಿರ ಆಯೋಜಿಸಿದ್ದು ಶಿಬಿರದಲ್ಲಿ ೨೦೦ ಕ್ಕ್ಕೂ ಹೆಚ್ಚು ಜನ ಭಾಗವಹಿಸಿದ್ದು, ೨೦ ಕ್ಕೂ ಹೆಚ್ಚಿನವರಿಗೆ ಆಪರೇಷನ್ ಮಾಡಿಸುವಂತೆ ಸೂಚಿಸಲಾಗಿದೆ, ಬಿಬಿಎಂಪಿ ಪೌರಕಾರ್ಮಿಕರು ಮಾತ್ರವಲ್ಲದೆ ಇತರರು ಪಾಲ್ಗೊಂಡಿದ್ದು ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ , ಕಣ್ಣಿನ ತಪಾಸಣೆ ನಡೆಸಿ ಉಚಿತ ಕನ್ನಡಕ ವಿತರಣೆಗೆ ಶಿಫಾರಸ್ಸು ಮಾಡಲಾಗಿದೆ , ಇಂತಹ ಶಿಬಿರಗಳನ್ನು ನಾವು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದು ಸಾರ್ವಜನಿಕರ ಹಿತದೃಷ್ಟಿಯೇ ನಮ್ಮ ಹೊಣೆ ಎಂದು ತಿಳಿಸಿದರು. ಶಂಕರ್ ಕಣ್ಣಿನ ಆಸ್ಪತ್ರೆ ಕಾರ್ಯವನ್ನು ಶ್ಲಾಘಿಸಿದರು .