
















ಅಪಾರ ಸಂಖ್ಯೆಯ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳೊಂದಿಗೆ ಶಾಸಕ ಎಸ್ ಆರ್ ವಿಶ್ವನಾಥ್ ಜನ್ಮದಿನ ಆಚರಣೆ :
ಸಿಂಗನಾಯಕನಹಳ್ಳಿ ಸಮೀಪದ ರಮಡ ಹೋಟೆಲ್ ಆವರಣದಲ್ಲಿ ವಿಜೃಂಭಣೆಯಿಂದ ಆಚರಣೆ :
ಯಲಹಂಕ : ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು, ಮುಖಂಡರು, ಹಿತೈಷಿಗಳು, ಅಭಿಮಾನಿಗಳ ಮಧ್ಯೆ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಜನ್ಮದಿನಾಚಣೆಯನ್ನು ಗುರುವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಜನ್ಮದಿನಾಚರಣೆಯ ಪ್ರಯುಕ್ತ ‘ವಿಶ್ವವಾಣಿ’ ಫೌಂಡೇಶನ್ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರ, ಉಚಿತ ಕನ್ನಡಕಗಳ ವಿತರಣೆ, ಹೊಲಿಗೆ ತರಬೇತಿ ಪಡೆದ 500 ಮಹಿಳೆಯರಿಗೆ ಹೊಲಿಗೆ ಯಂತ್ರಗಳ ವಿತರಣೆ, ಬ್ಯೂಟಿಶಿಯನ್ ತರಬೇತಿ ಪಡೆದ ಮಹಿಳೆಯರಿಗೆ ಬ್ಯೂಟಿಶಿಯನ್ ಕಿಟ್ ವಿತರಣೆ, ಅಂಗವಿಕಲರಿಗೆ 50 ತ್ರಿಚಕ್ರ ವಾಹನಗಳು, ತ್ರಿಚಕ್ರ ಸೈಕಲ್ ಗಳ ವಿತರಣೆ, ಯಲಹಂಕ ಕ್ಷೇತ್ರದ ಸರ್ಕಾರಿ ಶಾಲಾ ಮಕ್ಕಳಿಗೆ1 ಲಕ್ಷ ನೋಟ್ ಪುಸ್ತಕಗಳ ವಿತರಣೆ, ಪತ್ರಿಕಾ ವಿತರಕರಿಗೆ 50 ಬೈಸಿಕಲ್ ವಿತರಣೆ, 120 ಅಂಗನವಾಡಿ ಕೇಂದ್ರಗಳಿಗೆ ಟಿ.ವಿ.ವಿತರಣೆ ಮತ್ತು ಮೆಡಿಸಿನ್ ಕಿಟ್ ವಿತರಣೆ, ಪೌರ ಕಾರ್ಮಿಕರು, ಕಟ್ಟಡ ಕಾರ್ಮಿಕರು ಮತ್ತು ಟೈಲ್ಸ್ ಕಾರ್ಮಿಕರಿಗೆ ಆರೋಗ್ಯ ಸಂರಕ್ಷಣಾ ಕಿಟ್ ಗಳ ವಿತರಣೆ, 8 ಬಡವರಿಗೆ ಬದುಕು ರೂಪಿಸಿಕೊಳ್ಳಲು ಕಾರುಗಳ ವಿತರಣೆ, ಗ್ರಾಮ ಪಂಚಾಯಿತಿಗಳಿಗೆ ಸ್ವಚ್ಛತಾ ವಾಹನ ವಿತರಣೆ ಸೇರಿದಂತೆ ಹಲವು ಸೇವಾ ಸೌಕರ್ಯಗಳನ್ನು ವಿತರಿಸುವ ಮೂಲಕ ಜನ್ಮದಿನಾರಣೆ ಕಾರ್ಯಕ್ರಮವನ್ನು ಅರ್ಥಪೂರ್ಣ ರೀತಿಯಲ್ಲಿ ಆಚರಿಸಲಾಯಿತು.
ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಮಾಜಿ ಸಚಿವ ಅಶ್ವತ್ಥ್ ನಾರಾಯಣ, ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಸೇರಿದಂತೆ ಹಲವು ಗಣ್ಯರು ಆಗಮಿಸಿ ಶಾಸಕ ವಿಶ್ವನಾಥ್ ಅವರಿಗೆ ಶುಭ ಹಾರೈಸಿದರು.
ಇದೇ ವೇಳೆ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ ‘ಜನ್ಮದಿನಾಚರಣೆಯ ನೆಪದಲ್ಲಿ ಮುಖಂಡರು, ಕಾರ್ಯಕರ್ತರು, ಸ್ನೇಹಿತರು, ಹಿತೈಷಿಗಳು ಒಂದೆಡೆ ಕಲೆತು ಒಂದಷ್ಟು ಸೇವಾ ಕಾರ್ಯಗಳನ್ನು ಕೈಗೊಳ್ಳುವುದಷ್ಟೇ ಮೂಲ ಉದ್ದೇಶವಾಗಿದೆ. ನನ್ನ ಜನ್ಮದಿನದ ಆಚರಣೆಗಾಗಿ ಯಲಹಂಕ ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಸ್ವತಃ ತಾವೇ ಫ್ಲೆಕ್ಸ, ಕಟೌಟ್ ಗಳನ್ನು ಕಟ್ಟಿ, ಪತ್ರಿಕೆಗಳಿಗೆ ಪುಟಗಟ್ಟಲೆ ಜಾಹೀರಾತು ನೀಡಿ ತಮ್ಮದೇ ಜನ್ಮದಿನದೋಪಾದಿಯಲ್ಲಿ ಸಂಭ್ರಮ ಆಚರಸುತ್ತಿರುವುದು ನನ್ನ ಪೂರ್ವ ಜನ್ಮದ ಸುಕೃತ ಎಂದೇ ಭಾವಿಸಿದ್ದೇನೆ. ಕ್ಷೇತ್ರದ ತುಂಬೆಲ್ಲಾ ಹಬ್ಬದೋಪಾದಿಯಲ್ಲಿ ಸಂಭ್ರಮಾಚರಣೆ ಮಾಡುತ್ತಿರುವ ಇವರ ಋಣ ತೀರಿಸಲು ಸಾಧ್ಯವಿಲ್ಲ, ಅವರ ಅಭಿಮಾನ, ಸಹಕಾರ, ಬೆಂಬಲ, ಸೇವೆಗಳಿಗೆ ನಾನು ಅಭಾರಿಯಾಗಿದ್ದೇನೆ ಎಂದು ಕೃತಜ್ಞತಾಪೂರ್ವಕ ಧನ್ಯವಾದ ತಿಳಿಸಿದರು.
ಇದೇ ಸಂದರ್ಭದಲ್ಲಿ ಆರ್ ಎಸ್.ಎಸ್.ಎನ್.ಬ್ಯಾಂಕ್ ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ್, ಬಿಜೆಪಿ ಯುವ ಮುಖಂಡರು ವಿಶ್ವವಾಣಿ ಫೌಂಡೇಶನ್ ನ ನಿರ್ದೇಶಕರಾದ ಅಲೋಕ್ ವಿಶ್ವನಾಥ್, ಪಲ್ಲವಿ ಅಲೋಕ್, ವಿಶ್ವನಾಥ್ ಅವರ ಪುತ್ರಿ ಅಪೂರ್ವ, ಅಳಿಯ ಸಂಜಯ್ ಸುರೇಶ್, ಬಿಜೆಪಿ ಮುಖಂಡರಾದ ಎಸ್.ಎನ್.ರಾಜಣ್ಣ, ದಿಬ್ಬೂರು ಜಯಣ್ಣ, ಡಿ.ಜಿ.ಅಪ್ಪಯ್ಯಣ್ಣ, ಎಂ.ಜಿ.ರಾಮಮೂರ್ತಿ, ವಿಶ್ವನಾಥಪುರ ಮಂಜುನಾಥ್, ಸತೀಶ್ ಕಡತನಮಲೆ, ಎಂ.ಸತೀಶ್, ಮುರಾರಿರಾಮು, ವಿ.ಪವನ್ ಕುಮಾರ್, ಈಶ್ವರ್, ಎಚ್.ಬಿ.ಹನುಮಯ್ಯ, ವಿ.ವಿ.ರಾಮಮೂರ್ತಿ, ಜಿ.ಜೆ.ಮೂರ್ತಿ, ಎಚ್.ಸಿ.ರಾಜೇಶ್, ಸೋಮಶೇಖರ್, ಎಸ್.ಜಿ.ನರಸಿಂಹಮೂರ್ತಿ, ಟಿ.ಮುನಿರೆಡ್ಡಿ, ಎಸ್.ಜಿ.ಪ್ರಶಾಂತ್ ರೆಡ್ಡಿ, ವಸಂತ್ ಅರಕೆರೆ, ಎಂ.ಮುನಿರಾಜು, ಬಿ.ಶ್ರೀನಿವಾಸಯ್ಯ, ಯಲಹಂಕ ಜಯಣ್ಣ, ಎಸ್.ರಾಜಣ್ಣ, ನರಸಿಂಹಮೂರ್ತಿ, ನಾರಾಯಣಸ್ವಾಮಿ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿದ್ದರು.