ವಿಶೇಷವಾದ, ವಿಶಿಷ್ಟವಾದ ಶ್ರೀಮಂತ ಇನ್ವೈಟ್ ಓನ್ಲಿ ಬ್ಯಾಂಕಿಂಗ್ ಯೋಜನೆಯಾದ ಸಾಲಿಟೇರ್ ಅನ್ನು ಬಿಡುಗಡೆ ಮಾಡಿದ ಕೋಟಕ್ ಮಹೀಂದ್ರಾ

ಈ ಯೋಜನೆಗೆ ನೀವು ಅರ್ಜಿ ಸಲ್ಲಿಸಲು ಅವಕಾಶವಿಲ್ಲ, ಆಹ್ವಾನವಿದ್ದರೆ ಮಾತ್ರ ಸೇರಬಹುದು!

ಬೆಂಗಳೂರು, ಜುಲೈ 23, 2025 – ಕೋಟಕ್ ಮಹೀಂದ್ರಾ ಬ್ಯಾಂಕ್ ಇಂದು ಭಾರತದ ಶ್ರೀಮಂತ ವರ್ಗವನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ರೂಪಿಸಿರುವ ಒಂದು ವಿನೂತನ ಬ್ಯಾಂಕಿಂಗ್ ಯೋಜನೆ ಆಗಿರುವ ಕೋಟಕ್ ಸಾಲಿಟೇರ್‌ ಅನ್ನು ಬಿಡುಗಡೆ ಮಾಡಿದೆ. ಇದೊಂದು ಕೇವಲ ಉತ್ಪನ್ನ ಮಾತ್ರವೇ ಅಲ್ಲ, ಬದಲಿಗೆ ಇದೊಂದು ವಿಶೇಷ ಸವಲತ್ತಾಗಿದೆ.

ಸಾಲಿಟೇರ್‌ ಯೋಜನೆಯು ಒಂದು ಇನ್ವೈಟ್ ಓನ್ಲಿ ಯೋಜನೆಯಾಗಿದ್ದು, ಕೋಟಕ್‌ ಜೊತೆಗೆ ಗಾಢವಾದ, ಬಹು ಆಯಾಮದ ಆರ್ಥಿಕ ಸಂಬಂಧ ಹೊಂದಿರುವ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಮಾತ್ರ ಸೀಮಿತವಾಗಿದೆ. ಈ ಯೋಜನೆಯು ಖಾತೆಯ ಬ್ಯಾಲೆನ್ಸ್ ಬಗ್ಗೆ ಮಾತ್ರವೇ ಗಮನ ಹರಿಸುವುದಿಲ್ಲ, ಬದಲಿಗೆ ಇದು ಠೇವಣಿಗಳು, ಹೂಡಿಕೆಗಳು, ಸಾಲಗಳು, ವಿಮೆ, ಮತ್ತು ಬ್ಯಾಂಕ್‌ ನಿಂದ ನೀಡಲಾಗುವ ಡಿಮ್ಯಾಟ್ ಹೋಲ್ಡಿಂಗ್‌ ಗಳಾದ್ಯಂತ ಕುಟುಂಬ ಮಟ್ಟದಲ್ಲಿ ಅತ್ಯುತ್ತಮ ಮೌಲ್ಯವನ್ನು ಒದಗಿಸಲಿದೆ ಮತ್ತು ಉತ್ತಮ ಸಂಬಂಧವನ್ನು ಬೆಳೆಸಲಿದೆ.

ಈ ಕುರಿತು ಕೋಟಕ್ ಮಹೀಂದ್ರಾ ಬ್ಯಾಂಕ್‌ ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಮತ್ತು ಅಫ್ಲುಯೆಂಟ್, ಎನ್‌ಆರ್‌ಐ, ಮತ್ತು ಬಿಸಿನೆಸ್ ಬ್ಯಾಂಕಿಂಗ್ ವಿಭಾಗದ ಮುಖ್ಯಸ್ಥರಾದ ರೋಹಿತ್ ಭಾಸಿನ್ ಅವ ರು, “ಭಾರತದಲ್ಲಿನ ಶ್ರೀಮಂತ ವರ್ಗವು ವೇಗವಾಗಿ ಬೆಳೆಯುತ್ತಿದೆ. ಆದರೆ ಅವರ ವೇಗಕ್ಕೆ ತಕ್ಕಂತೆ ಬ್ಯಾಂಕಿಂಗ್ ಅನುಭವ ದೊರೆಯುತ್ತಿಲ್ಲ. ಸಾಲಿಟೇರ್‌ ಯೋಜನೆಯು ಈ ಕೊರತೆಯನ್ನು ಪೂರೈಸುವ ನಿಟ್ಟಿನಲ್ಲಿ ನಮ್ಮದೊಂದು ಮಹತ್ವದ ಹೆಜ್ಜೆಯಾಗಿದೆ. ಇದು ಉತ್ಪನ್ನವಲ್ಲ, ಬದಲಿಗೆ ಇದೊಂದು ಉತ್ತಮ ಸವಲತ್ತಾಗಿದೆ. ಸಾಲಿಟೇರ್‌ ಯೋಜನೆಯು ಯಶಸ್ಸನ್ನು ಗುರುತಿಸುತ್ತದೆ, ಮಹತ್ವಾಕಾಂಕ್ಷೆಗೆ ಗೌರವ ಸಲ್ಲಿಸುತ್ತದೆ ಮತ್ತು ಬ್ಯಾಂಕಿಂಗ್ ಹೇಗಿರಬೇಕು ಎಂಬ ಪರಿಕಲ್ಪನೆಯನ್ನು ಮರುರೂಪಿಸುವ ಪ್ರಯತ್ನ ಮಾಡಲಿದೆ” ಎಂದರು.

ಗ್ರಾಹಕರ ಒಳನೋಟಗಳಿಂದ ಈ ಯೋಜನೆ ಪ್ರಾರಂಭ
ಕೋಟಕ್ ಮಾಡಿದ ವ್ಯಾಪಕ ಸಂಶೋಧನೆಯಿಂದ ಶ್ರೀಮಂತ ಗ್ರಾಹಕರು ಮತ್ತು ಅವರ ಬ್ಯಾಂಕ್‌ ಗಳ ನಡುವಿನ ಸಂಪರ್ಕದ ಕೊರತೆಯು ತಿಳಿದುಬಂತು. ಅವರು ತಮ್ಮನ್ನು ಪರಿಗಣಿಸದೇ ಇರುವ, ಸೇವಾ ಅಲಭ್ಯತೆ ಹೊಂದಿರುವ ಮತ್ತು ತಮ್ಮ ಬ್ಯಾಂಕ್‌ ಗಳಿಂದ ಭಾವನಾತ್ಮಕವಾಗಿ ದೂರವಿರುವ ಭಾವನೆಯನ್ನು ಹೊಂದಿರುವುದು ತಿಳಿಯಿತು. ಅದಕ್ಕೆ ಪೂರಕವಾಗದಿ ಕೋಟಕ್ ಬ್ಯಾಂಕ್ ಅವರ ಪ್ರಮುಖ ಸಮಸ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಉತ್ತಮ ಪರಿಹಾರವಾಗಿ ಈ ಯೋಜನೆಯನ್ನು ರೂಪಿಸಿತು. ಆ ಗ್ರಾಹಕರ ಸಮಸ್ಯೆಗಳು ಹೀಗಿದ್ದುವು:

  • ಪರಿಗಣನೆಯ ಕೊರತೆ ಮತ್ತು ವೈಯಕ್ತೀಕರಣದ ಅಲಭ್ಯತೆ
  • ಆರ್ಥಿಕ ಉತ್ಪನ್ನಗಳಲ್ಲಿ ಅಸಮರ್ಪಕ ಸೇವೆ
  • ಕುಟುಂಬ ಮಟ್ಟದ ಬ್ಯಾಂಕಿಂಗ್ ಅನುಭವದ ಕೊರತೆ
  • ಜೀವನಶೈಲಿ ಮತ್ತು ಆಕಾಂಕ್ಷೆಗಳನ್ನು ನಿರ್ಲಕ್ಷಿಸುವ ಅತಿ ಸಾಮಾನ್ಯ ಉತ್ಪನ್ನಗಳು

ಸಾಲಿಟೇರ್‌: ಶ್ರೀಮಂತ ಬ್ಯಾಂಕಿಂಗ್‌ ನಲ್ಲಿ ಹೊಸ ಮಾನದಂಡ
ಸಾಲಿಟೇರ್‌ ಕೇವಲ ಪ್ರಯೋಜನಗಳ ಸಮೂಹವನ್ನು ಮೀರಿದ ಯೋಜನೆಯಾಗಿದ್ದು, ಇದು ಗ್ರಾಹಕರು ಮತ್ತು ಅವರ ಕುಟುಂಬವನ್ನು ಪ್ರಧಾನವಾಗಿ ನೋಡುವ ಅತ್ಯುತ್ತಮ ಅನುಭವವಾಗಿದೆ:

• ಗೃಹ ಸಾಲ, ವೈಯಕ್ತಿಕ ಸಾಲ ಮತ್ತು ಕ್ರೆಡಿಟ್ ಕಾರ್ಡ್‌ ವಿಭಾಗಗಳಲ್ಲಿ ₹8 ಕೋಟಿ ಪ್ರೀ-ಅಪ್ರೂವ್ಡ್ ಕ್ರೆಡಿಟ್ ಲೈನ್‌ ಗಳು**
• ವೇತನ ಪಡೆಯುವ ವೃತ್ತಿಪರರು ಮತ್ತು ಉದ್ಯಮಿಗಳಿಗೆ ವಿಭಾಗ ನಿರ್ದಿಷ್ಟ ಉತ್ಪನ್ನಗಳು
• ಕುಟುಂಬ ಪ್ರಧಾನ ಬ್ಯಾಂಕಿಂಗ್ ವ್ಯವಸ್ಥೆ, ಜಂಟಿ ಕ್ರೆಡಿಟ್ ಮಿತಿಗಳು** ಮತ್ತು ಇತರ ಸವಲತ್ತುಗಳು
• ಅತ್ಯುತ್ತಮ ಅನುಭವ, ನೆರವು ಒದಗಿಸಲು ರಿಲೇಷನ್ಶಿಪ್ ಮತ್ತು ಸರ್ವೀಸ್ ಮ್ಯಾನೇಜರ್ ಗಳು
• ಬ್ಯಾಂಕಿಂಗ್, ಸಂಪತ್ತು, ವಿಮೆ^ ಮತ್ತು ಜೀವನಶೈಲಿ ವಿಭಾಗಗಳಲ್ಲಿ ಕೋಟಕ್‌ ನ ಉತ್ತಮ ಏಕೀಕೃತ ಸೇವಾ ಅನುಭವ

ವಿಶಿಷ್ಟ ವಿನ್ಯಾಸದ ಸಾಲಿಟೇರ್‌ ಕ್ರೆಡಿಟ್ ಕಾರ್ಡ್
ಸಾಲಿಟೇರ್‌ ಅನುಭವದ ಭಾಗವಾಗಿ, ಕೋಟಕ್ ಸಾಲಿಟೇರ್ ಕ್ರೆಡಿಟ್ ಕಾರ್ಡ್ ಅನ್ನು ಪರಿಚಯಿಸುತ್ತಿದ್ದು, ಈ ಕಾರ್ಡ್ ಈ ಯೋಜನೆಯ ತತ್ವವನ್ನು ಪ್ರತಿಬಿಂಬಿಸುತ್ತದೆ:
• ಇನ್ವೈಟ್ ಓನ್ಲಿ: ಸಾಲಿಟೇರ್‌ ಗ್ರಾಹಕರಿಗೆ ಮಾತ್ರ ವಿಶೇಷವಾಗಿ ಲಭ್ಯ
• ಸಾಲಿಟೇರ್‌ ಗ್ರಾಹಕರಿಗೆ ವಾರ್ಷಿಕ ಶುಲ್ಕ ಇಲ್ಲ
• ಉನ್ನತ ಕ್ರೆಡಿಟ್ ಮಿತಿಗಳು
• ಪ್ರಾಥಮಿಕ ಮತ್ತು ಆಡ್- ಆನ್‌ ಗಳಿಗೆ ಅನಿಯಮಿತ ಲಾಂಜ್ ಪ್ರವೇಶ. ಅತಿಥಿ ಪ್ರಯಾಣಿಕರಿಗೂ ಲಾಂಜ್ ಪ್ರವೇಶ. ಈಗ, ಇಡೀ ಕುಟುಂಬಕ್ಕೆ ಲಾಂಜ್ ಪ್ರವೇಶ ಲಭ್ಯವಿದೆ.
• ಕೋಟಕ್ ಅನ್‌ಬಾಕ್ಸ್ ಮೂಲಕ ಪ್ರಯಾಣದ ವೆಚ್ಚಗಳ ಮೇಲೆ ಶೇ.10ರಷ್ಟು ಏರ್‌ಮೈಲ್ಸ್ ಗಳಿಸಿ ಮತ್ತು ಇತರ ಅರ್ಹ ವೆಚ್ಚಗಳ ಮೇಲೆ ಶೇ.3ರಷ್ಟು ಏರ್‌ಮೈಲ್ಸ್ ಗಳಿಸಿ, ಪ್ರತಿ ಸ್ಟೇಟ್‌ಮೆಂಟ್ ಸೈಕಲ್‌ ನಲ್ಲಿ ₹1,00,000 ವರೆಗಿನ ಏರ್‌ಮೈಲ್ಸ್‌ ಗಳಿಸಬಹುದು. ಕುಟುಂಬ ಪ್ರಯಾಣಕ್ಕೆ ದೊಡ್ಡ ಉಳಿತಾಯ ಲಭ್ಯ.
• ಜೀರೋ ಫಾರೆಕ್ಸ್ ಮಾರ್ಕ್‌ಅಪ್ – ಎಲ್ಲಾ ನಿಮ್ಮ ವೆಚ್ಚಗಳಿಗೆ ಒಂದೇ ಕಾರ್ಡ್.
• ₹7500 ವರೆಗಿನ ಇಂಧನ ವೆಚ್ಚಗಳಿಗೆ ಇಂಧನ ಸರ್ಚಾರ್ಜ್ ಮನ್ನಾ
• ಏರ್‌ಮೈಲ್ಸ್‌ ಗೆ ಅತ್ಯುತ್ತಮ ರಿಡೆಂಪ್ಶನ್ ಆಯ್ಕೆಗಳು. ಇವುಗಳಲ್ಲಿ ಫ್ಲೈಟ್ ಬುಕಿಂಗ್‌ ಗಳು, ಹೋಟೆಲ್‌ ಗಳು ಮತ್ತು ಜನಪ್ರಿಯ ಏರ್‌ಲೈನ್ ಮತ್ತು ಹೋಟೆಲ್ ಲಾಯಲ್ಟಿ ಕಾರ್ಯಕ್ರಮಗಳಿಗೆ ಮೈಲ್ಸ್ ವರ್ಗಾವಣೆ ಸೌಲಭ್ಯ ಸೇರಿದೆ.

ಈ ಕುರಿತು ಕ್ರೆಡಿಟ್ ಕಾರ್ಡ್ ವಿಭಾಗದ ಬಿಸಿನೆಸ್ ಮುಖ್ಯಸ್ಥ ಫ್ರೆಡರಿಕ್ ಡಿಸೋಜಾ ಅವರು, “ಈ ಕಾರ್ಡ್ ನಿಮಗೆ ಕೇವಲ ರಿವಾರ್ಡ್ ಮಾತ್ರ ನೀಡುವುದಿಲ್ಲ, ಜೊತೆಗೆ ಇದು ನಿಮ್ಮ ಪಯಣವನ್ನು ಗೌರವಿಸುತ್ತದೆ. ಇದನ್ನು ಸಾಧನೆ ಮಾಡಿದವರಿಗಾಗಿಯೇ ಮತ್ತು ತಮ್ಮ ಕುಟುಂಬವು ಅದೇ ಮಟ್ಟದ ಸೇವೆ ಮತ್ತು ಮನ್ನಣೆ ಗಳಿಸಬೇಕು ಎಂದು ಬಯಸುವವರಿಗಾಗಿ ವಿನ್ಯಾಸ ಮಾಡಲಾಗಿದೆ” ಎಂದರು.

ವಿಶಿಷ್ಟತೆಯ ಪುನರ್‌ವ್ಯಾಖ್ಯಾನ
ಸಾಲಿಟೇರ್‌ ಇನ್ವೈಟ್ ಓನ್ಲಿ ಯೋಜನೆಯಾಗಿದ್ದು, ಕೋಟಕ್‌ ನ ಪರಿಸರ ವ್ಯವಸ್ಥೆಯಲ್ಲಿರುವ ಗ್ರಾಹಕರ ಸಂಬಂಧ ಮತ್ತು ತೊಡಗಿಸಿಕೊಳ್ಳುವಿಕೆಯ ಆಧಾರದ ಮೇಲೆ ಗ್ರಾಹಕರನ್ನು ಈ ಯೋಜನೆಗೆ ಆಹ್ವಾನಿಸಲಾಗುತ್ತದೆ. ಇದು ಗುಣಮಟ್ಟಕ್ಕೆ ಆದ್ಯತೆ ನೀಡುವ ಮತ್ತು ವ್ಯಾಪ್ತಿಗಿಂತ ಅಸ್ಮಿತೆಗೆ ಒತ್ತು ನೀಡುವ ಕಾರ್ಯಕ್ರಮವಾಗಿದೆ.

ಸಾಲಿಟೇರ್‌ ಅನ್ನು ಕೋಟಕ್‌ ನ ಶ್ರೇಷ್ಠತೆಯ ಪರಂಪರೆಯ ಮೇಲೆ ರಚಿಸಲಾಗಿದೆ
ಕೋಟಕ್ ಮಹೀಂದ್ರಾ ಬ್ಯಾಂಕ್ ಭಾರತದ ಪ್ರಮುಖ ಆರ್ಥಿಕ ಸಂಸ್ಥೆಗಳಲ್ಲಿ ಒಂದಾಗಿದ್ದು, ಭಾರತದ ಟಾಪ್ 100 ಕುಟುಂಬಗಳಲ್ಲಿ ಶೇ.60*ರಷ್ಟು ಜನರು ತಮ್ಮ ಸಂಪತ್ತು ನಿರ್ವಹಣೆಗಾಗಿ ಈ ಸಂಸ್ಥೆಯ ಮೇಲೆ ವಿಶ್ವಾಸವಿಟ್ಟಿದ್ದಾರೆ. ಈ ನಂಬಿಕೆಯೇ ಸಾಲಿಟೇರ್‌ ಗೆ ಬಲವನ್ನು ಒದಗಿಸುತ್ತಿದ್ದು, ಇದು ಭಾರತದ ಅತ್ಯಂತ ಹೆಚ್ಚು ಸಾಧನೆ ಮಾಡಿದ ವ್ಯಕ್ತಿಗಳು ಮತ್ತು ಕುಟುಂಬಗಳ ಆಸೆಗಳನ್ನು ಪೂರೈಸಲಿರುವ ಮಹತ್ವದ ಯೋಜನೆಯಾಗಿದೆ.

Leave a Reply

Your email address will not be published. Required fields are marked *