ಭೈರನಟ್ಟಿ: ಮಾ.19ರಿಂದ ಓಕಳಿ ಮತ್ತು ಜಡಿಸಿದ್ದೇಶ್ವರ ಜಾತ್ರೆ

ಮೂಡಲಗಿ: ತಾಲೂಕಿನ ಭೈರನಟ್ಟಿ ಗ್ರಾಮದಲ್ಲಿ ಮಾ.19 ರಿಂದ 24 ರವರಿಗೆ ಶ್ರೀ ಬಲಭೀಮ ದೇವರ ಓಕಳಿ ಹಾಗೂ ಪವಾಡ ಪುರಷ ಶ್ರೀ ಜಡಿಸಿದ್ದೇಶ್ವರ ಜಾತ್ರಾಮಹೋತ್ಸವ ವಿವಿಧ ಮಠಾಧೀಶರ ಉಪಸ್ಥಿತಿಯಲ್ಲಿ ಭೈರನಟ್ಟಿ -ಕರಡಿಗುದ್ದಿಯ ಶ್ರೀ ರುದ್ರಯ್ಯ ಅಜ್ಜನವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಮಾ.19 ರಂದು ಸಂಜೆ.7ಕ್ಕೆ ಶ್ರೀಮಠದ ಪಲ್ಲಕ್ಕಿ ಉತ್ಸವ ನಂತರ ಪೂಜ್ಯರಿಂದ ಮೊದಲ ದಿನದ “ಗೋಮಾಬಾಯಿ ಚರಿತ್ರೆ” ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯವನ್ನು ಮನ್ನಿಕೇರಿ ಮಠದ ಶ್ರೀ ವಿಜಯಸಿದ್ದೇಶ್ವರ ಶ್ರೀಗಳು ವಹಿಸುವರು.

ಮಾ.20 ರಂದು 7ಕ್ಕೆ ಸಂಗೀತ ಸೇವೆ ಹಾಗೂ ಉಚ್ಚಾಯ ಕಾರ್ಯಕ್ರಮಕ್ಕೆ ಚಾಲನೆ ನೀಡುವುದು ಹಾಗೂ “ಸಂತ ರೋಹಿದಾಸ ಚರಿತ್ರೆ” ಯ ಪ್ರವಚನದ ಸಾನ್ನಿಧ್ಯವನ್ನು ಸುಣಧೋಳಿಯ ಶ್ರೀ ಶಿವಾನಂದ ಶ್ರೀಗಳು ವಹಿಸುವರು.

” ಮಾ.21 ರಂದು ಸಂಜೆ 5ಕ್ಕೆ ಶ್ರೀ ಬಲಭೀಮ ದೇವರ ಓಕಳಿಯ ಕೊಂಡ ಪೂಜೆ ಹಾಗೂ 7 ಗಂಟೆಗೆ ಜರುಗುವ ನಾನಾಪಿತನ ಚರಿತ್ರೆ”ಯ ಪ್ರವಚನದ ಸಾನ್ನಿಧ್ಯವನ್ನು ಲಕ್ಷ್ಮೀಶ್ವರ ಕ್ರಾಸ್‌ದ ಮಾತೋಶ್ರೀ ಗೀತಾಭಾರತಿ ಅಮ್ಮನವರು ವಹಿಸುವರು.

66 ಮಾ.22 ರಂದು ಸಂಜೆ 4 ಕ್ಕೆ ನಡು ಓಕುಳಿ ಹಾಗೂ 7ಕ್ಕೆ ಜರುಗುವ ಪಿಪಾಜಿರಾಜನ ಚರಿತ್ರೆ”ಯ ಪ್ರವಚನದ ಸಾನ್ನಿಧ್ಯವನ್ನು ಬಾಗೋಜಿಕೊಪ್ಪದ ಡಾ. ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಶ್ರೀಗಳು ವಹಿಸುವರು.

ಮಾ.23 ರಂದು ಸಂಜೆ 4ಕ್ಕೆ ಕಡೆಯ ಓಕುಳಿ ಹಾಗೂ 7ಕ್ಕೆ ಜರುಗುವ “ಭಕ್ತ ನರಹರಿ”ಯ ಪ್ರವಚನದ ಸಾನ್ನಿಧ್ಯವನ್ನು ಶ್ರೀ ಶಶಿಕಾಂತ ಗೂರುಜಿ ವಹಿಸುವರು. ರಾತ್ರಿ 10ಕ್ಕೆ ಧರ್ಮಟ್ಟಿಯ ಶ್ರೀ ಶಿವಬೋಧರಂಗ ಪಾರಿಜಾತ ಸಂಘದವರಿಂದ ಶ್ರೀಕೃಷ್ಣ ಪಾರಿಜಾತ ನಾಟಕ ಜರುಗುವುದು.

ಮಾ.24 ರಂದು ಮುಂಜಾಣೆ 9ಕ್ಕೆ ರಥದ ಕಳಸಾರೋಹಣ ಹಾಗೂ ಭಜನಾ ಸೇವೆ, ಸಂಜೆ 6ಕ್ಕೆ ಸುತ್ತಮುತಲಿನ ಗ್ರಾಮಗಳ ಪಲ್ಲಕ್ಕಿಗಳೊಂದಿಗೆ ಹಗ್ಗವಿಲ್ಲದೆ ಶ್ರೀ ಜಡಿಸಿದ್ದೇಶ್ವರ ರಥೋತ್ಸವ ಜರುಗುವುದು. ನಂತರ ಮಹಾಪ್ರಸಾದ, ರಾತ್ರಿ 9-30 ಕ್ಕೆ ಸಾಹುಕಾರ ಸಂಪತ್ತು, ಬಡವನ ತಾಕತ್ತು ಎಂಬ ಸಮಾಜಿಕ ನಾಟಕ ಜರುಗುವುದು ಹಾಗೂ ಪ್ರತಿದಿನ ಮಹಾಪ್ರಸಾದ. ಶ್ರೀ ಜಡಿಸಿದ್ದೇಶ್ವರ ಭಜನಾ ಮಂಡಳಿಯಿಂದ ಭಜನಾ ಸೇವೆ ಹಾಗೂ ಗೋಕಾಕ ಪಾಲ್ಸ್ ದ ಶ್ರೀ ಬಸವರಾಜ ಶರಣರಿಂದ ಪ್ರವಚಣ ಜರುಗುವುದು ಎಂದು ಆರ್.ಕೆ.ಪಾಟೀಲ ತಿಳಿಸಿದ್ದಾರೆ.

Leave a Reply

Your email address will not be published. Required fields are marked *