ಯಲಹಂಕ ನಗರ ಮಂಡಲ. ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಎಂ.ಈಶ್ವರ್ ಅವರ ಜನ್ಮದಿನ :
ಬಿಜೆಪಿ ಮುಖಂಡರು, ಸ್ನೇಹಿತರು ಹಿತೈಷಿಗಳಿಂದ ಶುಭ ಹಾರೈಕೆ :
ಯಲಹಂಕ : ಯಲಹಂಕ ನಗರ ಮಂಡಲ‌ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಎಂ.ಈಶ್ವರ್ ಅವರ ಜನ್ಮದಿನದ ಪ್ರಯುಕ್ತ ಅವರ ಸ್ವಗ್ರಾಮ ವೆಂಕಟಾಲ ದಲ್ಲಿ ಏರ್ಪಡಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು, ಸ್ನೇಹಿತರು, ಹಿತೈಷಿಗಳು, ಬಂದು ಬಾಂಧವರು, ಅಭಿಮಾನಿಗಳು ಸೇರಿದಂತೆ ಅಸಂಖ್ಯಾತ ಜನ ಕೇಕ್ ಕತ್ತರಿಸಿ ವಿ.ಎಂ.ಈಶ್ವರ್ ಅವರಿಗೆ ಸನ್ಮಾನಿಸಿ ಜನ್ಮದಿನದ ಶುಭ ಹಾರೈಸಿದರು.
ಜನ್ಮದಿನದ ಪ್ರಯುಕ್ತ ಬಿಜೆಪಿ ಯುವ ಮುಖಂಡರು, ವಿಶ್ವವಾಣಿ ಫೌಂಡೇಶನ್ ನ ನಿರ್ದೇಶಕರಾದ ಅಲೋಕ್ ವಿಶ್ವನಾಥ್ ಅವರು ಈಶ್ವರ್ ಅವರಿಗೆ ಸನ್ಮಾನಿಸಿ, ಜನ್ಮದಿನದ ಶುಭ ಹಾರೈಸಿದರು.
ಜನ್ಮದಿನದ ಅಂಗವಾಗಿ ವೆಂಕಟಾಲ ಗ್ರಾಮದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡರು, ಈಶ್ವರ್ ಅವರ ಸಹೋದರರಾದ ಕೆಂಪೇಗೌಡ, ಚಂದ್ರಣ್ಣ,ಯಲಹಂಕ ನಗರ ಮಂಡಲ ಬಿಜೆಪಿ ಮುಖಂಡರಾದ ಮುರಾರಿರಾಮು, ವಿ.ಪವನ್ ಕುಮಾರ್, ವಿ.ವಿ.ರಾಮಮೂರ್ತಿ, ಎ.ಎಸ್.ರಾಜ, ಜಿ.ಈಶ್ವರಪ್ಪ, ಮುನಿಯಪ್ಪ(ಕೂರ್ಲಪ್ಪ), ನರಸಿಂಹಮೂರ್ತಿ, ಜಯಪ್ರಕಾಶ್(ಜೆ.ಪಿ.), ಗಿರೀಶ್ ಸೇರಿದಂತೆ ಬಿಜೆಪಿ ಯುವ ಮೋರ್ಚಾ, ಮಹಿಳಾ ಮೋರ್ಚಾ ಮುಖಂಡರು ಹಾಗೂ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ವಿ‌.ಎಂ.ಈಶ್ವರ್ ಅವರಿಗೆ ಅಭಿಮಾನದ ಸನ್ಮಾನ ನೀಡಿ ಜನ್ಮದಿನದ ಶುಭ ಹಾರೈಸಿದರು.
ಇದೇ ವೇಳೆ ವಿ.ಎಂ.ಈಶ್ವರ್ ಅವರು ಮಾತನಾಡಿ ‘ನಮ್ಮ ನೆಚ್ಚಿನ ನಾಯಕರು, ಯಲಹಂಕ ಜನಪ್ರಿಯ ಶಾಸಕರಾದ ಎಸ್ ಆರ್ ವಿಶ್ವನಾಥ್ ಅವರ ಅಭಿಪ್ರಾಯದಂತೆಯೇ ಜನ್ಮದಿನಾಚರಣೆಯ ನೆಪದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು, ಸ್ನೇಹಿತರು ಒಂದೆಡೆ ಕಲೆತು ಸಂಭ್ರಮ ಆಚರಿಸುವುದು, ಬಾಂಧವ್ಯವನ್ನು ವೃದ್ಧಿಸಿಕೊಂಡು ಮುನ್ನಡೆಯುವುದಷ್ಟೇ ಈ ಜನ್ಮದಿನಾಚರಣೆಯ ವಿಶೇಷತೆ ಎನ್ನಬಹುದು ಎಂದರು.
ಜನ್ಮದಿನಾಚರಣೆ ಪ್ರಯುಕ್ತ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ಅನ್ನದಾನದ ನೆರವು, ಕೆಲವು ಬಡವರಿಗೆ ಧನಸಹಾಯದ ನೆರವು, ಸಾರ್ವಜನಿಕರಿಗೆ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಈಶ್ವರ್ ಅವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣ, ಸಾರ್ಥಕ ರೀತಿಯಲ್ಲಿ ಆಚರಿಸಲಾಯಿತು.

Leave a Reply

Your email address will not be published. Required fields are marked *