





ಯಲಹಂಕ : ರಾಜ್ಯದ ಪ್ರತಿಷ್ಠಿತ ಫೈನಾನ್ಸ್ ಸಂಸ್ಥೆಗಳಲ್ಲಿ ಒಂದಾಗಿರುವ ಚೆಮ್ ಫೈನಾನ್ಸ್ ಸಂಸ್ಥೆಯ 26ನೇ ಶಾಖೆಯನ್ನು ಯಲಹಂಕ ಕ್ಷೇತ್ರದ ಮಾರಸಂದ್ರ ದಲ್ಲಿ ಗುರುವಾರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅನೂಪ್ ಚೆಮ್ಮನೂರ್ ಉದ್ಘಾಟಿಸಿದರು.
ನಂತರ ಚೆಮ್ ಫೈನಾನ್ಸ್ ಸಂಸ್ಥೆಯ ಸಿಇಒ ಭುವನೇಂದ್ರ ಠಾಕೂರ್ ಅವರು ಮಾತನಾಡಿ ‘ಮಾರಸಂದ್ರ ಗ್ರಾಮದಲ್ಲಿ ಇಂದು ಉದ್ಘಾಟಿಸಿರುವ ಈ ಶಾಖೆ ಸಂಸ್ಥೆಯ 26ನೇ ಶಾಖೆಯಾಗಿದ್ದು, ಬೆಂಗಳೂರು ಉತ್ತರ ಭಾಗದಲ್ಲಿನ ಜನರ ಹಣಕಾಸಿನ ಅಗತ್ಯವನ್ನು ಪೂರೈಸುವ ದಿಸೆಯಲ್ಲಿ ಶಾಖೆಯನ್ನು ಉದ್ಘಾಟಿಸಲಾಗಿದೆ. ಚೆಮ್ ಫೈನಾನ್ಸ್ ಸಂಸ್ಥೆ ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಪಾರದರ್ಶಕ ರೀತಿಯಲ್ಲಿ ಹಣಕಾಸಿನ ವ್ಯವಹಾರ ನಿರ್ವಹಿಸುವ ಮೂಲಕ ಮನೆಮಾತಾಗಿದ್ದು, ಕಡಿಮೆ ಬಡ್ಡಿದರದಲ್ಲಿ ಜನತೆಯ ಹಣಕಾಸಿನ ಅಗತ್ಯ ಪೂರೈಸುವುದು ಮತ್ತು ಠೇವಣಿದಾರರಿಗೆ ಆಕರ್ಷಕ ಬಡ್ಡಿ ನೀಡುವಂತಹ ಜನಪರವಾದ ಹಣಕಾಸಿನ ವ್ಯವಹಾರ ನಿರ್ವಹಿಸುತ್ತಾ ಬಂದಿದೆ, ಮಾರಸಂದ್ರದಲ್ಲಿ ಇಂದು ಆರಂಭವಾಗಿರುವ ಚೆಮ್ ಫೈನಾನ್ಸ್ ನ ಸದುಪಯೋಗವನ್ನು ಸುತ್ತಮುತ್ತಲಿನ ಜನತೆ ಪಡೆದುಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಚೆಮ್ ಫೈನಾನ್ಸ್ ನ ಮಾರಸಂದ್ರ ಶಾಖೆಯ ವ್ಯವಸ್ಥಾಪಕ ಸುಬ್ರಮಣ್ಯ ಎಚ್., ಸಹಾಯಕ ವ್ಯವಸ್ಥಾಪಕ ಅಕ್ಷಯ್ ವೈ., ದೊಡ್ಡಬಳ್ಳಾಪುರ ಬೆಸ್ತರಪೇಟೆ ಶಾಖೆಯ ವ್ಯವಸ್ಥಾಪಕ ಹನುಮಂತಪ್ಪ ಡಿ..ವಿ., ದೊಡ್ಡಬಳ್ಳಾಪುರ ಕಾಲೇಜು ರಸ್ತೆ ಶಾಖೆಯ ವ್ಯವಸ್ಥಾಪಕ ಪವನ್, ಅರಕೆರೆ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಕೆ.ಆರ್.ತಿಮ್ಮೇಗೌಡ, ಇ.ಪವನ್, ರಾಮಮೂರ್ತಿ, ಆವರ ಸಹೋದರರು ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರಿದ್ದರು.