





ಉಪಕರಣಗಳ ಪೂಜೆಯಿಂದ ಅವುಗಳ ಮೇಲೆ ದೇವರ ಶಕ್ತಿ, ಆಶೀರ್ವಾದ ಇರುತ್ತದೆ ಎಂಬುದು ನಂಬಿಕೆ : ಸತೀಶ್ ಕಡತನಮಲೆ
ರಾಜಾನುಕುಂಟೆ ಶಿಬಿರ ಕಚೇರಿಯಲ್ಲಿ ಆಯುಧ ಪೂಜೆ :
ಯಲಹಂಕ : ಆಯುಧ ಪೂಜೆ ಮತ್ತು ವಿಜಯ ದಶಮಿ ಹಬ್ಬದ ಪ್ರಯುಕ್ತ ಉಪಕರಣಗಳನ್ನು ಪೂಜಿಸುವುದರಿಂದ ಅವುಗಳ ಮೇಲೆ ದೇವರ ಶಕ್ತಿ ಮತ್ತು ಆಶೀರ್ವಾದ ಇರಲಿದೆ ಎಂಬ ನಂಬಿಕೆಯಿದೆ ಎಂದು ಬೆಂಗಳೂರು ಸಹಕಾರ ಹಾಲು ಒಕ್ಕೂಟ(ಬಮೂಲ್)ದ ನಿರ್ದೇಶಕ ಸತೀಶ್ ಕಡತನಮಲೆ ಅಭಿಪ್ರಾಯಪಟ್ಟರು.
ರಾಜಾನುಕುಂಟೆ ಶಿಬಿರ ಕಚೇರಿ ಮತ್ತು ಬೀಜ ಸಂಸ್ಕರಣಾ ಘಟಕದಲ್ಲಿ ಗುರುವಾರ ಆಯೋಜಿಸಿದ್ದ ಆಯುಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಮಾತನಾಡಿದ ಅವರು ‘ಬೆಂಗಳೂರು ಸಹಕಾರ ಹಾಲು ಒಕ್ಕೂಟದ ನಿರ್ದೇಶಕನಾಗಿ ಹಾಲು ಉತ್ಪಾದಕ ರೈತರಿಗೆ ಒಕ್ಕೂಟದಿಂದ ದೊರೆಯಲಿರುವ ಸವಲತ್ತುಗಳನ್ನು ದೊರಕಿಸಿ ಕೊಡುವ ದಿಸೆಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು, ಹಾಲು ಒಕ್ಕೂಟವನ್ನು ಇನ್ನೂ ಹೆಚ್ಚು ಸಶಕ್ತಗೊಳಿಸುವ ಮೂಲಕ ಆರ್ಥಿಕ ಶಕ್ತಿಯನ್ನು ವೃದ್ಧಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗುತ್ತಿದೆ ಎಂದರು.
ನಂತರ ದೊಡ್ಡ ತುಮಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ವೈದ್ಯಕೀಯ ವೆಚ್ಚವಾಗಿ 25 ಸಾವಿರ ಮತ್ತು ವಿಶೇಷ ಪರಿಹಾರವಾಗಿ 10 ಸಾವಿರ ರು.ಗಳ ಚೆಕ್ ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಶಿಬಿರ ಕಚೇರಿಯಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಿದ್ದರು.