






ಬ್ಯಾಟರಾಯನಪುರ : ಕ್ಷೇತ್ರದ ಜಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಹಲವು ಕಾಂಗ್ರೆಸ್ ಮುಖಂಡರು ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.
ಇದೇ ವೇಳೆ ಮಹಾಕಾವ್ಯ ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ ಯವರ ಬದುಕು, ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿರುವ ಅನುಪಮ ಕೊಡುಗೆಯನ್ನು ಸ್ಮರಿಸಲಾಯಿತು.
ಇದೇ ಸಂದರ್ಭದಲ್ಲಿ ಬೆಟ್ಟಹಲಸೂರು ಗ್ರಾ.ಪಂ.ಮಾಜಿ ಅಧ್ಯಕ್ಷ ಬಿ.ಎಂ.ನಾಗೇಶ್, ಹಾಲಿ ಉಪಾಧ್ಯಕ್ಷ ಬಿ.ಆರ್.ಪ್ರವೀಣ್, ಬೆಂ.ಉತ್ತರ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಪ್ರದೀಪ್(ಮುತ್ತು), ಬ್ಯಾಟರಾಯನಪುರ ಕ್ಷೇತ್ರ ಯುವ ಕಾಂಗ್ರೆಸ್ ಉಪಾಧ್ಯಕ್ಷ ಶಿವರಾಜ್ ಸಿ.ಎ., ಪ್ರಧಾನ ಕಾರ್ಯಗಳಾದ ಮುರಳಿ, ಲೋಕೇಶ್, ಯಲಹಂಕ ತಾಲ್ಲೂಕು ಗ್ಯಾರಂಟಿ ಸಮಿತಿ ಸದಸ್ಯ ವೆಂಕಟೇಶ್, ಬೆಟ್ಟಹಲಸೂರು ಗ್ರಾ.ಪಂ.ಸದಸ್ಯ ಕುದುರಗೆರೆ ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಬಿಲ್ಮಾರನಹಳ್ಳಿ ಪ್ರಭಾಕರ್, ಮುನಿಕೃಷ್ಣ, ಅಶೋಕ್, ಮುನಿರಾಜು(ವಕೀಲರು), ಕೋಡಗಲಹಟ್ಟಿ ಮುನಿರಾಜು, ಸಿ.ಎಚ್.ಮಂಜುನಾಥ್, ವೆಂಕಟೇಶಪ್ಪ, ಸುಜಾತಮ್ಮ ಸೇರಿದಂತೆ ಇನ್ನಿತರರಿದ್ದರು.