ಮಹರ್ಷಿ ವಾಲ್ಮೀಕಿ ಸರ್ವ ಜನಾಂಗಕ್ಕೆ ಸೇರಿದ ಅತ್ಯಮೂಲ್ಯ ಆಸ್ತಿ : ಎಸ್ ಆರ್ ವಿಶ್ವನಾಥ್ :

ಬಿಜೆಪಿ ಎಸ್.ಟಿ.ಮೋರ್ಚಾ ವತಿಯಿಂದ ವಾಲ್ಮೀಕಿ ಜಯಂತಿ :

ಯಲಹಂಕ : ರಾಮಾಯಣ ಮಹಾಕಾವ್ಯದ ಮೂಲ ಕರ್ತೃ ಮಹರ್ಷಿ ವಾಲ್ಮೀಕಿ ಯವರು ಕೇವಲ ನಾಯಕ ಸಮುದಾಯದ ಆಸ್ತಿಯಲ್ಲಿ ದೇಶದ ಸರ್ವ ಜನಾಂಗಕ್ಕೆ ಸೇರಿದ ಅಮೂಲ್ಯ ಆಸ್ತಿ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಅಭಿಪ್ರಾಯಪಟ್ಟರು.

ಯಲಹಂಕ ನಗರ ಮಂಡಲ ಬಿಜೆಪಿ ಎಸ್.ಟಿ.ಮೋರ್ಚಾ ಅಧ್ಯಕ್ಷ ಬಿ.ಆರ್.ಮೋಹನ್ ನೇತೃತ್ವದಲ್ಲಿ ಯಲಹಂಕ ಉಪನರದ ವಿನಾಯಕ ಪಾರ್ಕ್ ಸಭಾಂಗಣದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಪೂರ್ವಶ್ರಮದಲ್ಲಿ ರತ್ನಾಕರನಾಗಿದ್ದ ವಾಲ್ಮೀಕಿ ನಾರದಮುನಿಯ ಮಾತಿನಿಂದ ಮನಃಪರಿವರ್ತನೆ ಯಾಗಿ ಮಹಾತಪಸ್ವಿಯಾಗಿ ಮಹರ್ಷಿ ವಾಲ್ಮೀಕಿ ಯಾದ ಪರಿ ಬಹಳ ರೋಚಕವಾದುದು. ಭಾರತದ ಸನಾತನ ಪರಂಪರೆಯ ಮಹಾಕಾವ್ಯ ಎನಿಸಿರುವ ರಾಮಾಯಣ ರಚನೆಯ ಮೂಲಕ ಪ್ರಭು ಶ್ರೀರಾಮಚಂದ್ರನನ್ನು ದೇಶಕ್ಕೆ ಮೊದಲು ಪರಿಚಯಿಸಿದ ಆದಿಕವಿ ಮಹರ್ಷಿ ವಾಲ್ಮೀಕಿ. ಇಂತಹ ಮಹರ್ಷಿ, ಮಹಾಪುರುಷರು ಯಾವುದೇ ಒಂದು ಜಾತಿ, ಮತ, ಪಂಥದ ಆಸ್ತಿಯಲ್ಲ ಬದಲಿಗೆ ಸರ್ವ ಜನಾಂಗದ ಆಸ್ತಿ. ರಾಮಮಂದಿರ ನಿರ್ಮಾಣ ಹೋರಾಟಕ್ಕೆ 500 ವರ್ಷಗಳ ಇತಿಹಾಸವಿದೆ, ಆದರೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ಕಾಲಘಟ್ಟದಲ್ಲಿ ನಾವಿರುವುದು ಪುಣ್ಯದ ಸಂಗತಿ. ನರೇಂದ್ರ ಮೋದಿಯವರು ರಾಮಮಂದಿರ ನಿರ್ಮಾಣದ ಜೊತೆಗೆ ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿಯವರ ಹೆಸರಿಡುವ ಮೂಲಕ ರಾಮಾಯಣದ ಮೂಲ ಕರ್ತೃವಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ನಾಯಕ ಸಮೂಹದ ಅನಾದಿ ಕಾಲದಿಂದಲೂ ಶೌರ್ಯ, ಪರಾಕ್ರಮಗಳಿಗೆ ಹೆಸರಾದ ಸಮುದಾಯ, ವೀರ ಮದಕರಿ ನಾಯಕ, ಸಿಂಧೂರ ಲಕ್ಷ್ಮಣ ಸೇರಿದಂತೆ ಹಲವು ಶೂರರನ್ನು ದೇಶಕ್ಕೆ ನೀಡಿದ ಸಮುದಾಯವಾಗಿದೆ ಎಂದು ನಾಯಕ ಸಮುದಾಯದ ಕೊಡುಗೆಯನ್ನು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವನಮನ ಸಲ್ಲಿಸಲಾಯಿತು. ಸಮುದಾಯದ ಹೆಣ್ಣು ಮಕ್ಕಳಿಗೆ ಸೀರೆ ವಿತರಣೆ, ಸಾರ್ವಜನಿಕರಿಗೆ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಯಲಹಂಕ ನಗರ ಮಂಡಲ ಬಿಜೆಪಿ ಎಸ್ ಟಿ ಮೋರ್ಚಾ ಅಧ್ಯಕ್ಷ ಬಿ.ಆರ್.ಮೋಹನ್, ನಗರ ಮಂಡಲ ಬಿಜೆಪಿ ಪ್ರಭಾರ ಅಧ್ಯಕ್ಷ ಮುರಾರಿರಾಮು, ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ್, ವಿ.ಪವನ್ ಕುಮಾರ್, ಬಿಬಿಎಂಪಿ ಮಾಜಿ ಸದಸ್ಯರಾದ ಎಂ.ಮುನಿರಾಜು, ನೇತ್ರಪಲ್ಲವಿ, ಮುಖಂಡರಾದ ಎ.ಸಿ.ಮುನಿಕೃಷ್ಣಪ್ಪ, ಮಧುಸೂದನ್, ವೈ.ಜಿ.ವಸಂತ್,‌ಕೆ.ಎಂ.ಮುರಳಿ, ಎಚ್.ಎಸ್.ಕಿರಣ್ ಸೇರಿದಂತೆ ವಾಲ್ಮೀಕಿ ಸಮುದಾಯದ ಮುಖಂಡರಿದ್ದರು.

Leave a Reply

Your email address will not be published. Required fields are marked *