ಆರೋಗ್ಯಕರವಾದ ದೇಹದಲ್ಲಿ ಆರೋಗ್ಯಕರವಾದ ಮನಸ್ಸು ನೆಲೆಸುತ್ತದೆ : ಬಿ.ಎಂ.ದೇವರಾಜಪ್ಪ

ಬ್ಯಾಟರಾಯನಪುರ : ಆರೋಗ್ಯಕರವಾದ ದೇಹದಲ್ಲಿ ಆರೋಗ್ಯಕರವಾದ ಮನಸ್ಸು ನೆಲೆಸುತ್ತದೆ, ಈ ದಿಸೆಯಲ್ಲಿ ಆರೋಗ್ಯಕರವಾದ ದೇಹ ಮತ್ತು ಮನಸ್ಸನ್ನು ಹೊಂದಲು ಕ್ರೀಡೆಗಳು ಹೆಚ್ಚು ಸಹಕಾರಿಯಾಗುತ್ತವೆ ಎಂದು ದೇವ್ ಇನ್ ನ್ಯಾಷನಲ್ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಬಿ.ಎಂ.ದೇವರಾಜಪ್ಪ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಬ್ಯಾಟರಾಯನಪುರ ಕ್ಷೇತ್ರದ ಸಹಕಾರ ನಗರದಲ್ಲಿರುವ ದೇವ್ ಇನ್ ನ್ಯಾಷನಲ್ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ 2025-26ನೇ ಸಾಲಿನ ರಾಜ್ಯ ಮಟ್ಟದ ಅಂತರ್ ಶಾಲಾ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದ ಅವರು ‘ಕ್ರಿಡೆಗಳು ಮನೋಲ್ಲಾಸ ವನ್ನು ತಂದುಕೊಡುತ್ತವೆ, ಇದರಿಂದ ದೇಹ ಮತ್ತು ಮನಸ್ಸಿನ ಸಮತೋಲನ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ.ದೇವ್‌ ಇನ್ ನ್ಯಾಷನಲ್‌ ಶಾಲೆ ಸತತ 2ನೇ ಬಾರಿಗೆ ರಾಜ್ಯ ಮಟ್ಟದ ಅಂತರ್‌ ಶಾಲಾ ಕ್ರೀಡಾಕೂಟವನ್ನು ಆಯೋಜಿಸುತ್ತಾ ಬರುತ್ತಿದ್ದು, ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಇಂಬು ನೀಡುವ ಕಾರ್ಯ ಕೈಗೊಂಡಿದೆ. ಅಂತರ್ ಶಾಲಾ ಕ್ರೀಡಾ ಕೂಟದಲ್ಲಿ ಯೋಗ, ಈಜು ಮತ್ತು ಬ್ಯಾಡ್ಮಿಂಟನ್ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸ ಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳ 100ಕ್ಕೂ ಹೆಚ್ಚು ಶಾಲೆಗಳ ಸುಮಾರು 500 ವಿದ್ಯಾರ್ಥಿಗಳು ಕ್ರೀಡಾ ಕೂಟದಲ್ಲಿ ಪಾಲ್ಗೊಂಡು, ತಮ್ಮ ಕ್ರೀಡಾ ಪ್ರತಿಭೆಯನ್ನು ಅನಾವರಣಗೊಳಿಸ ಲಿದ್ದಾರೆ. ಇಂತಹ ಕ್ರೀಡಾ ಕೂಟಗಳು ಕ್ರೀಡಾ ಪ್ರತಿಭೆಯ ಅನಾವರಣದ ಜೊತೆಗೆ ಮಕ್ಕಳಲ್ಲಿ ಸ್ನೇಹ, ವಿಶ್ವಾಸವನ್ನು ಬೆಳೆಸಲು ಹೆಚ್ಚು ನೆರವಾಗುತ್ತವೆ. ದೇವ್ ಇನ್ ನ್ಯಾಷನಲ್ ಶಾಲೆಯು ಶಾಲಾ ಮಕ್ಕಳಿಗಾಗಿ ಇಂತಹದ್ದೊಂದು ಸ್ಪರ್ಧೆಯ ಸದವಕಾಶವನ್ನು ಕಲ್ಪಿಸಿಕೊಟ್ಟಿದ್ದು, ಮಕ್ಕಳು ತಮ್ಮ ಕ್ರೀಡಾ ಕೌಶಲ್ಯವನ್ನು ಪ್ರದರ್ಶಿಸುವ ಮೂಲಕ ಈ ಸದವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ದೇವ್ ಇನ್ ನ್ಯಾಷನಲ್ ಶಾಲೆಯ ಆಡಳಿತಾಧಿಕಾರಿ ಶ್ವೇತಾ ವೈಶಾಖ್, ಏಕಲವ್ಯ ಸ್ಪೋರ್ಟ್ಸ್ ಅಕಾಡೆಮಿಯ ನಿರ್ದೇಶಕರಾದ ಜಿ.ಪ್ರಶಾಂತ್ ರಾವ್ ಜಗತಾಪ್ ಸೇರಿದಂತೆ ದೇವ್ ಇನ್ ನ್ಯಾಷನಲ್ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿಗಳಿದ್ದರು.

ರಾಜ್ಯ ಮಟ್ಟದ ಈ ಅಂತರ್ ಶಾಲಾ ಕ್ರೀಡಾಕೂಟ ದಲ್ಲಿ ಯೋಗ ಮತ್ತು ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ದೇವ್ ಇನ್ ನ್ಯಾಷನಲ್ ಶಾಲೆಯ ಮಕ್ಕಳು ಚಾಂಪಿಯನ್‌ ಪಟ್ಟ ಗಿಟ್ಟಿಸಿಕೊಂಡರು. ಈಜು ಸ್ಪರ್ಧೆಯಲ್ಲಿ ರಾಮಮೂರ್ತಿ ನಗರದ ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಮಕ್ಕಳು ಚಾಂಪಿಯನ್‌ ಪಟ್ಟ ಗಿಟ್ಟಿಸಿಕೊಂಡರು.

Leave a Reply

Your email address will not be published. Required fields are marked *