










ಶ್ರೀ ಸೀತಾರಾಮ ಯುವಕರ ಬಳಗದ ವತಿಯಿಂದ 50ನೇ ವರ್ಷದ ಗಣೇಶೋತ್ಸವ :
ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ದ್ವಾರಕನಗರದ ಶ್ರೀ ಸೀತಾ ರಾಮ ಯುವಕರ ಬಳಗದ ವತಿಯಿಂದ ಆಯೋಜಿಸಿದ್ದ 50ನೇ ವರ್ಷದ ಗಣೇಶೋತ್ಸವ ಸಮಾರಂಭ ಅದ್ದೂರಿಯಾಗಿ ನೆರವೇರಿತು.
ಇದೇ ಸಂದರ್ಭದಲ್ಲಿ ಬ್ಯಾಟರಾಯನಪುರ ಕ್ಷೇತ್ರ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಸುನಿಲ್, ಯುವ ಮುಖಂಡರಾದ ಗಣೇಶ್, ಆದಿನಾರಾಯಣ (ನರಿ), ಅರವಿಂದ(ಹುಲಿ), ರಾಮಚಂದ್ರ, ಜಿಮ್ ಪ್ರತಾಪ್, ಮನೀಶ್, ರೋಹಿತ್(ಚುವಾ), ವೀರಭದ್ರ, ಸಂತೋಷ್(ಪುಲಿ), ದೇವಸ್ಥಾನ ಅಸೋಸಿಯೇಷನ್ ನ ನಾರಾಯಣ, ಕೇಶವ ಸೇರಿದಂತೆ ದ್ವಾರಕನಗರದ ನಿವಾಸಿಗಳಿದ್ದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಕೆ.ಎ.ಅನಿಲ್ ಕುಮಾರ್, ಕಾಂಗ್ರೆಸ್ ಸಂಪಿಗೇಹಳ್ಳಿ ಶಿವಕುಮಾರ್ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.