







































































ಯಲಹಂಕ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಜಕ್ಕೂರು ವಾರ್ಡ್ ನಂಬರ್ 5 ಗೌರಿ ಗಣೇಶ 19ನೇ ವರ್ಷ ಹಬ್ಬದ ಪ್ರಯುಕ್ತ ಸಿ ಎಚ್ ಬಿ ಗ್ರೂಪ್ ಸಂಸ್ಥಾಪಕರು
ಕಾಂಗ್ರೆಸ್ ಮುಖಂಡರು
ಜಕ್ಕೂರ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವಿದೇಶಕರು
ಅಂಜನ ಅಕ್ಷಯ್ ಡೆವಲಪರ್ಸ್
ಸಿ ಎಚ್ ಬಿ ಕಂಬೈನ್ಸ್ ನಿರ್ಮಾಪಕರಾದ
ಚಂದ್ರಣ್ಣರವರ ಅಗ್ರಹಾರ ಬಡಾವಣೆ (ಚೊಕ್ಕನಹಳ್ಳಿ) ಅಧ್ಯಕ್ಷೆತೆಯಲ್ಲಿ ಶ್ರೀ ಗೌರಿ ಗಣೇಶ ವಾರ್ಷಿಕೋತ್ಸವದ ಅಂಗವಾಗಿ ಅನೇಕ ಕಾರ್ಯಕ್ರಮಗಳು ನಡೆಯಿತು ಈ ಸಂದರ್ಭದಲ್ಲಿ ಡಾ. ಅರ್ಜುನ್ ನೇತಾಜಿ ವ್ಯಾಲೆಂಟರಿ ಬ್ಲಡ್ ಸೆಂಟರ್ ಸಹಯೋಗ ದೊಂದಿಗೆ ಗುರುವಾರ ಆಯೋಜಿಸಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಅಸಂಖ್ಯಾತ ನಾಗರೀಕರು, ಸೇವಾಕರ್ತರು ರಕ್ತದಾನ ಮಾಡಿದರು.
ರಕ್ತದಾನ ಶಿಬಿರ ಉದ್ದೇಶಿಸಿ ಡಾಕ್ಟರ್ ಅರ್ಜುನ್ ಚಂದ್ರಣ್ಣ ಸಂಗ್ರಹಿತ ರಕ್ತವನ್ನು ಸಮಾಜದಲ್ಲಿ ರಕ್ತದ ಅಗತ್ಯ ಇರುವವರಿಗೆ ಸಮರ್ಪಿಸಲಾಗುವುದು ಎಂದು ಹೇಳಿದರು
ದಿನಾಂಕ 30 08 2025 ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೃಷ್ಣ ಬೈರೇಗೌಡರ
ಧರ್ಮಪತ್ನಿ ಶ್ರೀಮತಿ ಮೀನಾಕ್ಷಿ ಕೃಷ್ಣ ಬೈರೇಗೌಡರು
ಗೌರಿ ಗಣೇಶ ಹಬ್ಬದ ಪೂಜೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆಣ್ಣು ಮಕ್ಕಳಿಗೆ ಬಾಗಿನ ವಿತರಣೆ ಮಾಡಿದರು ಎಲ್ಲ ಹೆಣ್ಣು ಮಕ್ಕಳುಯೊಂದಿಗೆ. ಸಂಭ್ರಮ ಸಡಗರದಿಂದ ಭಾಗವಹಿಸಿ ಶುಭಕೋರಿದರು ಹಾಗೆ ಈ ಸಂದರ್ಭದಲ್ಲಿ ಚಂದ್ರಣ್ಣನವರಿಗೆ ನೀವು ಮಾಡುತ್ತಿರುವ ಕಾರ್ಯಕ್ರಮ ಯಶಸ್ವಿಯಾಗಲಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಹೆಚ್ಚು ಕಾರ್ಯಕ್ರಮ ನೀಡಿರಿ ನಿಮ್ಮಿಂದ ಅನೇಕ ಜನರಿಗೆ ಒಳ್ಳೆಯದಾಗಲಿ ನೀವು ಮಾಡುತ್ತಿರುವ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು ಈ ಕಾರ್ಯಕ್ರಮಕ್ಕೆ ಹೆಚ್ಎ ಶಿವಕುಮಾರ್ ಸಂಪಿಗೆಹಳ್ಳಿ ಕಾಂಗ್ರೆಸ್ ಮುಖಂಡರು ರವಿಕುಮಾರ್ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರು ಹಾಗೂ ಜಕ್ಕೂರ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷರು ಕಾಂಗ್ರೆಸ್ ಮುಖಂಡರು ವೆಂಕಟರಮ ರೆಡ್ಡಿ ಚೊಕ್ಕನಹಳ್ಳಿ ರಾಜಣ್ಣ ತಿರುಮೇನಹಳ್ಳಿ ಮಂಜಣ್ಣ ಅಗ್ರಹಾರ ಬಡಾವಣೆ ಎಸ್ ಆರ್ ಅಣ್ಣಯ್ಯ ಅಗ್ರಹಾರ ಬಡಾವಣೆ ಎನ್ ನರಸಿಂಹಮೂರ್ತಿ ಅಗ್ರಹಾರ ಬಾಬು ಅಗ್ರಹಾರ ಬಡಾವಣೆ ಸೈಯದ್ ಮುನೀರ್ ನಜೀರ್ ಸಾಬ್ ಬೆಳ್ಳೇಹಳ್ಳಿ ನರಸಿಂಹ ಗಜೇಂದ್ರ ಹಾಗೂ ಎಲ್ಲಾ ಸಿ ಎಚ್ ಬಿ ಗ್ರೂಪಿನ ಸದಸ್ಯರು ಮತ್ತು ಜ್ಯೋತಿ ಸತೀಶ್ ರೆಡ್ಡಿ ಕವಿತಾ ನರಸಿಂಹಮೂರ್ತಿ ಇನ್ನು ಅನೇಕ ಮಹಿಳೆಯರು ಸುತ್ತ ಮುತ್ತುಲಿನ ಗ್ರಾಮಸ್ಥರು ಭಾಗವಹಿಸಿದರು ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಆಚರಿಸಲು ಸಹಕರಿಸಿದರು
ಗಣೇಶ ಮೂರ್ತಿಗಳ ವಿಸರ್ಜನೆ
ಚಂದ್ರಣ್ಣ ಚೋಕನಹಳ್ಳಿ ಅವರ ನೇತೃತ್ವದಲ್ಲಿ ಸಿ ಎಚ್ ಬಿ ಗ್ರೂಪಿನ ಎಲ್ಲಾ ಸದಸ್ಯರು ಗ್ರಾಮದ ಮುಖಂಡರು ಭಾಗಿ :
19 ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಗಣೇಶ ಉತ್ಸವ ಹಾಗೂ ವಿಸರ್ಜನೆ ಕಾರ್ಯಕ್ರಮ ಚಂದ್ರಣ್ಣ ಚೊಕ್ಕನಹಳ್ಳಿ ಅವರ ನೇತೃತ್ವದಲ್ಲಿ ಸಿ ಎಚ್ ಪಿ ಗ್ರೂಪ್ನ ಎಲ್ಲಾ ಸದಸ್ಯರು ಸ್ನೇಹಿತರು ಮುಖಂಡರ ಸಹಯೋಗದೊಂದಿಗೆ ಸೋಮವಾರ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ತಮಟೆಗಳ ಸಮ್ಮುಖದಲ್ಲಿ ಕುಣಿತದ ಪ್ರದರ್ಶನ ನೀಡಿದರು
ಗಣೇಶೋತ್ಸವದ ಮೆರವಣಿಗೆಯಲ್ಲಿ ಜಾನಪದ ಕಲಾ ತಂಡಗಳು ತಮಟೆಗಳು ಭಾಗವಹಿಸಿದವು ಅಗ್ರಹಾರ ಬಡಾವಣೆ ರಾಜಭೀದಿಗಳಲ್ಲಿ ಬಹಳ ವಿಜೃಂಭಣೆಯಿಂದ ಮೆರವಣಿಗೆ ಮುಖಾಂತರ ಕೋಗಿಲು, ಕಲ್ಯಾಣಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಯೊಂದಿಗೆ ಕಾರ್ಯಕ್ರಮ ನೆರವೇರಿತು ಎಲ್ಲಾ ಕಾರ್ಯಕ್ರಮಗಳು ಬಹಳ ಸಂಭ್ರಮ ಸಡಗರದಿಂದ ನಡೆಯಿತು