ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀ ಕೃಷ್ಣ ಕಲಾಲಯ:- “ಮಧುರಂ ಮನೋಹರಂ -3 ವಾರ್ಷಿಕೋತ್ಸವ”
ಯಲಹಂಕ.ಸುದ್ದಿ. ದಿನಾಂಕ. ,03. 09. 2025. ರಂದು ಶ್ರೀ ಕೃಷ್ಣ ಕಲಾಲಯದವರು “ಮಧುರಂ ಮನೋಹರಂ – 3” ಎಂಬ ವಾರ್ಷಿಕೋತ್ಸವವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿ , ವಿಜೃಂಭಣೆಯಿಂದ ನಡೆಸಿದ್ದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವಿದೂಷಿ ಡಾ ಸಹನ ರಾಜು, ಶ್ರೀಯುತ ಕದರಪ್ಪ ಶ್ರೀಮತಿ ಲಕ್ಷ್ಮಮ್ಮ, ಕೋಗಿಲು ಶ್ರೀಯುತ ಮುನಿರಾಜು, ಶ್ರೀಮತಿ ಪಾರ್ವತಮ್ಮ ರವರು ಆಗಮಿಸಿದ್ದರು .ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಿಂದ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು .ಗುರು ವಿದುಷಿ ಶ್ರೀಮತಿ ಸುನಿತಾ ಸುಕುಮಾರನ್ ರವರು ಸ್ಥಾಪಿಸಿರುವ ಶ್ರೀ ಕೃಷ್ಣ ಕಲಾಲಯದ ವಿಧ್ಯಾರ್ಥಿಗಳು ಭರತನಾಟ್ಯ ನೃತ್ಯ ಹಾಗೂ ಜಾನಪದ ನೃತ್ಯಗಳನ್ನು ಪ್ರದರ್ಶಿಸಿದರು. ವಿಶೇಷ ಎಂದರೆ “ಕೃಷ್ಣ ಲೀಲಾ” ನೃತ್ಯ ರೂಪಕ. ಕೃಷ್ಣ ಲೀಲಾ ನೃತ್ಯ ರೂಪಕದಲ್ಲಿ ಕೃಷ್ಣನ ಬಾಲ್ಯ, ತುಂಟಾಟ, ಕಾಲಿಂಗ ಮರ್ದನ ಇನ್ನೂ ಮುಂತಾದ ಲೀಲೆಗಳನ್ನು ಅತಿ ಸುಂದರವಾಗಿ ನೃತ್ಯದ ಮೂಲಕ ಪ್ರಸ್ತುತಿ ಪಡಿಸಿದರು. ಶ್ರೀ ಕೃಷ್ಣ ಕಲಾಲಯದಲ್ಲಿ 200ಕ್ಕೂ ಹೆಚ್ಚಿನ ಮಕ್ಕಳಿದ್ದು , ಪ್ರತಿಯೊಬ್ಬರೂ ಅತ್ಯುತ್ತಮವಾಗಿ ನೃತ್ಯ ಪ್ರದರ್ಶನವನ್ನು ನೀಡಿದರು. ಈ ಕಾರ್ಯಕ್ರಮಕ್ಕೆ ಪಬ್ಲಿಕ್ ಪವರ್ ಪತ್ರಿಕೆ ಸಂಪಾದಕರು ಬಯಲು ಸಿಂಹ ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಆರ್ ಹನುಮಂತು ಆಗಮಿಸಿದ್ದರು ಇನ್ನೂ ಅನೇಕ
ಗಣ್ಯರು ಮಕ್ಕಳ ಪೋಷಕರು ಬಂದು ಮಿತ್ರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು

Leave a Reply

Your email address will not be published. Required fields are marked *