



ಗೌರವ ಡಾಕ್ಟರೇಟ್ ಪುರಸ್ಕಾರಕ್ಕೆ ಹಾಗೂ ಆಪರೇಷನ್ ಸಿಂಧೂರ ಮಿತ್ರ -2025 ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಶ್ರೀಯುತ ಪಿ .ನಾಗಪ್ಪ
- *
ಯಲಹಂಕ ನಗರಸಭೆ ಮಾಜಿ ಸದಸ್ಯರು ಹಾಗೂ ಯಲಹಂಕ ಉಪನಗರ ಹಿರಿಯ ನಾಗರಿಕರ ವೇದಿಕೆಯ ಉಪಾಧ್ಯಕ್ಷರು ಹಾಗೂ ಸಮಾಜ ಸೇವಕರು ಆದ ಶ್ರೀಯುತ ಪಿ.ನಾಗಪ್ಪ ರವರ, ನಾಗರೀಕ ಸೇವೆಗಳನ್ನು, ಹಿರಿಯ ನಾಗರಿಕರ ವೇದಿಕೆಯ ಮೂಲಕ ಸಲ್ಲಿಸಿದ ಜನಸೇವೆಯನ್ನು ಯುವಚೇತನ ಯುವ ಜನ ಕೇಂದ್ರ (ರಿ) ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ನಂದಿದುರ್ಗ ಬಾಲು ಗೌಡರವರು ಗುರುತಿಸಲ್ಪಟ್ಟು, ಪೀಸ್ ವಿಶ್ವವಿದ್ಯಾಲಯದಿಂದ ಕೊಡಲ್ಪಟ್ಟ *ಗೌರವ ಡಾಕ್ಟ್ರೇಟ್* ಪುರಸ್ಕಾರಕ್ಕೆ ಹಾಗೂ ಯುವ ಸಂರಕ್ಷಣೆ, ರಾಷ್ಟ್ರೀಯ ಯುವಜನ ಸೇವಾ ಪತ್ರಿಕೆ ಪ್ರಕಟಣೆಯ 38ನೇ ವರ್ಷದ ಸಾಧನೆ ಪ್ರಯುಕ್ತ ಆಪರೇಷನ್ ಸಿಂಧೂರ ಮಿತ್ರ -2025 ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಶ್ರೀಯುತ ಪಿ .ನಾಗಪ್ಪ ನವರನ್ನು, ಗುರುವರ್ಯರ ದಿವ್ಯ ಸಾನಿಧ್ಯದಲ್ಲಿ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಮಾಜಿ ಸಚಿವರಾದ ದಿವಂಗತ ಸಿ.ಚೆನ್ನಿಗಪ್ಪನವರ ಪುತ್ರ, ಬೈರ ನಾಯಕನಹಳ್ಳಿಯ ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮಿ ಇಂಜಿನಿಯರಿಂಗ್ ಕಾಲೇಜ್ ಅಧ್ಯಕ್ಷರಾದ ಡಿ.ಸಿ ವೇಣುಗೋಪಾಲ್, ಕ್ಲಾರಿಯನ್ ಹೋಟೆಲ್ ಮಾಲೀಕರಾದ ಲೋಕೇಶ್ ಅವರು ಪುಷ್ಪಗುಚ್ಛ ನೀಡಿ ಅಭಿನಂದಿಸಿ, ಶುಭ ಕೋರಿದರು.
ಈ ಸಂದರ್ಭದಲ್ಲಿ ಯಲಹಂಕ ಉಪನಗರ ಹಿರಿಯ ನಾಗರಿಕರ ವೇದಿಕೆ ಪದಾಧಿಕಾರಿಗಳು, ಸರ್ವ ಸದಸ್ಯರು, ಸ್ನೇಹಿತರು, ಅಭಿಮಾನಿಗಳು, ಬಂದು ಮಿತ್ರರು, ಕುಟುಂಬದ ಸದಸ್ಯರು ಆಗಮಿಸಿ ಕಾರ್ಯಕ್ರಮದ ಕ್ಷಣಗಳನ್ನು ಕಣ್ತುಂಬಿಕೊಂಡು ಪ್ರೀತಿಪೂರ್ವಕ ಅಭಿನಂದನೆಗಳೊಂದಿಗೆ ಶುಭಾಶಯಗಳನ್ನು ಕೋರಿದರು.
ಉಮೇಶ್, ಯಲಹಂಕ