





ಯಲಹಂಕ : ಯಲಹಂಕ ಕ್ಷೇತ್ರದ ಹೊನ್ನೇನಹಳ್ಳಿಯ ರಮಡಾ ಹೋಟೆಲ್ ಬಳಿ ನೂತನವಾಗಿ ನಿರ್ಮಾಣಗೊಂಡಿದ್ದ ಅರೇನಾ 53 ಗೋ ಕಾರ್ಟಿಂಗ್, ಗೇಮಿಂಗ್ ಝೋನ್ ಅನ್ನು ಶಾಸಕ ಎಸ್ ಆರ್ ವಿಶ್ವನಾಥ್ ಸೋಮವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ‘ಈ ಭಾಗದಲ್ಲಿ ಕ್ರೀಡೆ, ಮನರಂಜನೆ, ಶಿಕ್ಷಣ, ವಸತಿ ಹೀಗೆ ವಿವಿಧ ಕ್ಷೇತ್ರಗಳ ಕೇಂದ್ರಗಳಿದ್ದವು, ಆದರೆ ಮಕ್ಕಳಿಗೆ ಗೇಮ್ ಕಾರ್ಟಿಂಗ್ ಮತ್ತು ಗೇಮಿಂಗ್ ಝೋನ್ ಕೇಂದ್ರಗಳು ಇರಲಿಲ್ಲ. ಇಂದು ನಮ್ಮ ಚಿರಪರಿಚಿತರು, ಸ್ಥಳೀಯರು ಆಗಿರುವ ಪ್ರಜ್ವಲ್ ಮತ್ತು ಸ್ನೇಹಿತರು ‘ಅರೇನಾ ಗೋ ಕಾರ್ಟಿಂಗ್ ಮತ್ತು ಗೇಮಿಂಗ್ ಝೋನ್’ ಕೇಂದ್ರವನ್ನು ಪ್ರಾರಂಭಿಸುವ ಮೂಲಕ ಈ ಭಾಗದ ಮಕ್ಕಳು ಮತ್ತು ಯುವಕರ ಆಶೋತ್ತರವನ್ನು ಸಾಕಾರಗೊಳಿಸಿ ದ್ದಾರೆ, ಯುವಕರು ಇದರ ಸದುಪಯೋಗ ಪಡೆದುಕೊಳ್ಳ ಲೆಂದು ಶುಭ ಹಾರೈಸಿದರು.
ಅರೇನಾ 53 ಗೋ ಕಾರ್ಟಿಂಗ್, ಗೇಮಿಂಗ್ ಝೋನ್ ನ ವ್ಯವಸ್ಥಾಪಕ ಪ್ರಜ್ವಲ್ ಮಾತನಾಡಿ ‘ಈ ಭಾಗದಲ್ಲಿ ಗೋ ಕಾರ್ಟಿಂಗ್ ಮತ್ತು ಗೇಮಿಂಗ್ ಕೇಂದ್ರ ಒಂದರ ಅಗತ್ಯತೆಯನ್ನು ಮನಗಂಡು ಅರೇನಾ 53 ಗೋಕಾರ್ಟಿಂಗ್ ಗೇಮಿಂಗ್ ಝೋನ್ ಕೇಂದ್ರ ವನ್ನು ಸ್ಥಾಪಿಸಲಾಗಿದ್ದು, ಆರಂಭಿಕವಾಗಿ ಹದಿನೈದು ಕಾರ್ಟಿಂಗ್ ವಾಹನಗಳನ್ನು ಗ್ರಾಹಕರ ಸೇವೆಗೆ ಅಣಿಗೊಳಿಸಲಾಗಿದ್ದು, ರೈಡಿಂಗ್ ಗೆ ಅಗತ್ಯವಿರುವ ಸುರಕ್ಷತಾ ಸಲಕರಣೆಗಳು, ಜೊತೆಗೆ ಕೆಫೆಯನ್ನು ಸಹ ನಿರ್ಮಿಸಲಾಗಿದ್ದು ಮುಂದಿನ ಅಗತ್ಯತೆಯನ್ನು ನೋಡಿಕೊಂಡು ಇನ್ನೂ ಹೆಚ್ಚಿನ ಹೆಚ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಅರೇನಾ 53 ಗೋ ಕಾರ್ಟಿಂಗ್ ಗೇಮಿಂಗ್ ಝೋನ್ ನ ಮುಖ್ಯಸ್ಥರಾದ ಮುರಳಿ, ಪವನ್, ತೇಜಸ್, ಹಿರಿಯ ಬಿಜೆಪಿ ಮುಖಂಡ ಎಸ್ ಎನ್ ರಾಜಣ್ಣ, ಸಿಂಗನಾಯಕನ ಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಅಮರಾವತಮ್ಮ, ಉಪಾಧ್ಯಕ್ಷೆ ಸುನಂದ ಪ್ರಕಾಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಟಿ.ಮುನಿರೆಡ್ಡಿ, ಉಪಾಧ್ಯಕ್ಷರಾದ ಎಸ್.ಜಿ. ಪ್ರಶಾಂತ್ ರೆಡ್ಡಿ, ಹೇಮಂತ್ ಕುಮಾರ್, ಜಿ.ಸಿ.ಮಂಜುನಾಥ್, ಜೀವಿತ ಮುನಿಕೃಷ್ಣ, ಗ್ರಾ.ಪಂ. ಸದಸ್ಯರಾದ ಪದ್ಮಶ್ರೀ ನಾಗರಾಜ್ ರೆಡ್ಡಿ, ಶಾಂತಲಾ ರಾಜಣ್ಣ, ಭಾಗ್ಯಲಕ್ಷ್ಮಿ ಕಿರಣ್ ಕುಮಾರ್, ಸುಧಾರಾಣಿ, ವೀಣಾ ಆರ್., ಶೋಭಾ ಗೋಪಾಲ್, ಚೈತ್ರ ಕೆಂಪೇಗೌಡ, ಶೋಭಾ, ಮುನಿರತ್ನಮ್ಮ, ನಂಜೇಗೌಡ ಟಿ., ಕೆ.ಬಾಬು, ಮಲ್ಲೇಶ್, ಹರೀಶ್, ಮುನಿಯಪ್ಪ ಆರ್., ರವಿಚಂದ್ರ ಸೇರಿದಂತೆ ಇನ್ನಿತರರಿದ್ದರು.
