
ಆಂಜಿನಪ್ಪ(ಪುಟ್ಟು) ಅವರಿಂದ 20 ವರ್ಷಗಳ ನಿರಂತರ ಆಚರಣೆ :
ಬ್ಯಾಟರಾಯನಪುರ : ಕ್ಷೇತ್ರದ ಮಾರೇನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ, ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಆಂಜಿನಪ್ಪ(ಪುಟ್ಟು)ಅವರು ಸ್ವಗ್ರಾಮ ಮಾರೇನಹಳ್ಳಿಯ ಅವರ ನಿವಾಸ ಬಳಿ ದಸರಾ ಹಬ್ಬದ ಪ್ರಯುಕ್ತ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾರೇನಹಳ್ಳಿ, ಬಾಗಲೂರು ಮತ್ತು ಬಂಡಿಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಸುಮಾರು ಐದು ಸಾವಿರ ಮಹಿಳೆಯರಿಗೆ ಸೀರೆ, ಪುರುಷರಿಗೆ ಪ್ಯಾಂಟ್, ಷರ್ಟ್, ಸಿಹಿ ವಿತರಣೆ, ಭೋಜನ ವ್ಯವಸ್ಥೆ ಕಲ್ಪಿಸುವ ಮೂಲಕ ದಸರಾ, ಆಯುಧ ಪೂಜೆ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು.
ನಂತರ ಅವರು ಮಾತನಾಡಿ ‘ಕಳೆದ ಇಪ್ಪತ್ತು ವರ್ಷಗಳಿಂದ ದಸರಾ ಆಯುಧ ಪೂಜೆ ಯಂದು ಸುತ್ತಮುತ್ತಲಿನ ಸುಮಾರು ಹತ್ತು ಗ್ರಾಮಗಳ ಬಡವರು, ಕಾರ್ಮಿಕರಿಗೆ ಸೀರೆ, ಪ್ಯಾಂಟ್, ಷರ್ಟ್ ಬಟ್ಡೆ, ಸಹಿ ವಿತರಣೆ ಮೂಲಕ ಆಚರಿಸುವುದು, ಪರಂಪರಾಗತವಾದ ಆಚರಣೆಯಾಗಿದೆ. ಅಲ್ಲದೆ ಶಿಡ್ಲಘಟ್ಟ ಕ್ಷೇತ್ರದಿಂದಲೂ ಸಹ ನೂರಾರು ಜನ ಆಗಮಿಸಿದ್ದು, ನಮ್ಮ ಕೊಡುಗೆಯನ್ನು ಸ್ವೀಕರಿಸಿದ್ದಾರೆ. ಬದುಕಿನಲ್ಲಿ ಯಾವ ಏಳು ಬೀಳು, ಲಾಭ ನಷ್ಟಗಳಿದ್ದರೂ ಸಹ ಈ ನೆರವು ಕಾರ್ಯವನ್ನು ಸಾಂಗೋಪಾಂಗವಾಗಿ ನೆರವೇರಿಸಿಕೊಂಡು ಬರಲಾಗುತ್ತಿದ್ದು, ಎಂದೆಂದಿಗೂ ಸಹ ನಮ್ಮ ಕುಟುಂಬದ ವತಿಯಿಂದ ಈ ಸತ್ಕಾರ್ಯವನ್ನು ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾರೇನಹಳ್ಳಿ ಗ್ರಾ.ಪಂ.ಅಧ್ಯಕ್ಷ ಪಿ.ರಾಹುಲ್, ಮಾಜಿ ಅಧ್ಯಕ್ಷ ಚೊಕ್ಕನಹಳ್ಳಿ ನಂಜೇಗೌಡ, ಉಪಾಧ್ಯಕ್ಷೆ ನಂಜಮ್ಮ ಬಲ್ಲಯ್ಯ, ಸದಸ್ಯರಾದ ಗೀತಾ ಆನಂದ್ ಕುಮಾರ್ ಸೇರಿದಂತೆ ಹಲವು ಗಣ್ಯರಿದ್ದರು.