









ರಾಜಾನುಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹೇಮಲತಾ ವೇಣುಗೋಪಾಲ್ ಅವಿರೋಧ ಆಯ್ಕೆ :
ಯಲಹಂಕ : ಯಲಹಂಕ ಕ್ಷೇತ್ರದ ರಾಜಾನುಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅದ್ದಿಗಾನಹಳ್ಳಿ ಗ್ರಾಮದ ಹೇಮಲತಾ ವೇಣುಗೋಪಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ರಾಜಾನುಕುಂಟೆ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 27 ಸದಸ್ಯರಿದ್ದು, ಅಧ್ಯಕ್ಷರಾಗಿದ್ದ ಸುಜಾತಮ್ಮ ಅವರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಹೇಮಲತಾ ವೇಣುಗೋಪಾಲ್ ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷೆ ಹೇಮಲತಾ ವೇಣುಗೋಪಾಲ್ ಅವರನ್ನು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಸನ್ಮಾನಿಸಿ, ಅಭಿನಂದಿಸಿದರು.
ಈ ವೇಳೆ ನೂತನ ಅಧ್ಯಕ್ಷೆ ಹೇಮಲತಾ ವೇಣುಗೋಪಾಲ್ ಅವರು ಮಾತನಾಡಿ ‘ಅಧ್ಯಕ್ಷರಾಗಲು ನನಗೆ ಸಹಕಾರ, ಬೆಂಬಲ ನೀಡಿ ಆಶೀರ್ವದಿಸಿರುವ ಎಸ್.ಆರ್ ವಿಶ್ವನಾಥ್ ಅವರಿಗೆ ಮತ್ತು ತಮ್ಮ ಅಮೂಲ್ಯ ಮತದಾನದ ಮೂಲಕ ನನ್ನನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿರುವ ಗ್ರಾ.ಪಂ. ಸರ್ವ ಸದಸ್ಯರಿಗೆ ಅನಂತ ಧನ್ಯವಾದಗಳು, ಸದಸ್ಯರ ವಿಶ್ವಾಸದೊಂದಿಗೆ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳ ಏಳಿಗೆಗೆ ಪ್ರಾಮಾಣಿಕವಾಗಿ ಶ್ರಮಿಸುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ಎಸ್ ಎನ್ ರಾಜಣ್ಣ, ದಿಬ್ಬೂರು ಜಯಣ್ಣ, ಡಿ.ಜಿ.ಅಪ್ಪಯ್ಯಣ್ಣ, ಚೊಕ್ಕನಹಳ್ಳಿ ವೆಂಕಟೇಶ್, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥಪುರ ಮಂಜುನಾಥ್, ಕಾಕೋಳು ಮುನೇಶ್, ರಾಜಾನುಕುಂಟೆ ಗ್ರಾ.ಪಂ. ಉಪಾಧ್ಯಕ್ಷೆ ಸೌಮ್ಯ ಗೋವಿಂದರಾಜು, ಮಾಜಿ ಅಧ್ಯಕ್ಷರಾದ ಎಸ್.ಜಿ.ನರಸಿಂಹ ಮೂರ್ತಿ(ಎಸ್.ಟಿ.ಡಿ.ಮೂರ್ತಿ) ಅದ್ದಿಗಾನಹಳ್ಳಿ ವೀರಣ್ಣ, ಸುಜಾತಮ್ಮ, ಅಂಬಿಕಾ ರಾಜೇಂದ್ರ ಕುಮಾರ್, ಚನ್ನಮ್ಮ, ಭವಾನಿ ಶ್ರೀನಿವಾಸ್, ಗ್ರಾ.ಪಂ.ಸದಸ್ಯರಾದ ಸಾದೇನಹಳ್ಳಿ ಚಿಕ್ಕಣ್ಣ, ಆರ್.ಡಿ.ರಾಜಣ್ಣ, ಶಿವಕುಮಾರ್, ಹನುಮೇಗೌಡ, ಸಂತೋಷ್ ಕುಮಾರ್, ಸತೀಶ್, ವೆಂಕಟೇಶ್, ಮುತ್ತುವೇಣು, ಮಮತಾ, ನಾಗಭೂಷಣ್, ರಾಜು, ಮಂಜುಳ, ಬೈರಮ್ಮ, ಗಂಗಮ್ಮ, ಸುಜಾತ, ಬಾಲಾಜಿ, ರತ್ನಮ್ಮ, ಭಾನುಮತಿ, ಮಂಜುಳ, ಮುಖಂಡರಾದ ಎಸ್.ಎಚ್.ಅಪ್ಪಣ್ಣಗೌಡ, ಯುವ ಮುಖಂಡ ಸಾದೇನಹಳ್ಳಿ ಪ್ರಕಾಶ್ ಗೌಡ, ಪಿಡಿಓ ನಾಗರಾಜ್ ಸೇರಿದಂತೆ ಇನ್ನಿತರರಿದ್ದರು.